ನವದೆಹಲಿ(ಮಾ.10): ಪಂಚ ರಾಜ್ಯಗಳ ಚುನಾವಣೆ ಮತ ಎಣಿಕೆ ಅಂತಿಮ ಹಂತದಲ್ಲಿದೆ. ಸದ್ಯದ ಫಲಿತಾಂಶದಲ್ಲಿ ಕಾಂಗ್ರೆಸ್ ಶೋಚನೀಯ ಸ್ಥಿತಿಗೆ ತಲುಪಿದೆ. ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಆಮ್ ಆದ್ಮಿ ಪಕ್ಷ ಅಧಿಕಾರಗ ಗದ್ದುಗೆ ಏರಲು ಸಜ್ಜಾಗಿದೆ. ಇತ್ತ ಉತ್ತರಖಂಡ, ಮಣಿಪುರ, ಉತ್ತರಪ್ರದೇಶ, ಹಾಗೂ ಗೋವಾದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ದೇಶದ ಅತೀ ದೊಡ್ಡ ಹಾಗೂ ಅತೀ ಹಳೆಯ ಪಕ್ಷ ಕಾಂಗ್ರೆಸ್ ಈ ರೀತಿ ನೆಲಸಮವಾಗಲು ಸೂಕ್ತ ನಾಯಕತ್ವದ ಕೊರತೆ ಕಾರಣ ಅನ್ನೋ ಮಾತುಗಳ ಬಲವಾಗುತ್ತಿದೆ.
ದೇಶದಲ್ಲಿ ಸುಮಾರು 70 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಇದೀಗ ಬಡಮೇಲಾಗಿದೆ. ಕೇಂದ್ರದಲ್ಲಿ ಹಾಗೂ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತೆ ಧೂಳೀಪಟವಾಗಿದೆ. ಈ ಹಿಂದೆ ನಡೆದ ಇತರ ರಾಜ್ಯಗಳ ವಿಧಾನಸಭಾ ಚುನಾವಣೆ ಸೇರಿದಂತೆ ಈಗಿನ ಪಂಚ ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ಪರಿಸ್ಥಿತಿ ಬದಲಾಗಿಲ್ಲ.
Assembly Elections 2022 Result: 4 ರಾಜ್ಯಗಳಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಮ್ ಆದ್ಮಿ
ಪಂಜಾಬ್‌ನಲ್ಲಿ ಕಾಂಗ್ರೆಸ್ ಧೂಳೀಪಟ
ಪಂಜಾಬ್ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಇದೇ ಪಂಜಾಬ್‌ನಲ್ಲಿ ಕಾಂಗ್ರೆಸ್ ಕೇವಲ 14 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದರೆ, ಆಮ್ ಆದ್ಮಿ ಪಾರ್ಟಿ 90 ಸ್ಥಾನಗಲ್ಲಿ ಮುನ್ನಡೆ ಪಡೆದುಕೊಂಡಿದೆ. ಕಳೆದ 6 ತಿಂಗಳಲ್ಲಿ ಪಂಜಾಬ್‌ನಲ್ಲಿ ರಾಜಕೀಯ ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆ ಅಧಿಕಾರದಲ್ಲಿ ಕೂರಿಸಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಪಕ್ಷ ತೊರೆಯುವಂತೆ ಮಾಡಲಾಗಿತ್ತು. ಈ ಮೂಲಕ ಕಾಂಗ್ರೆಸ್ ಸೂಕ್ತ ನಾಯಕತ್ವದ ಕೊರತೆ ಅನುಭವಿಸಿತು. ಇತ್ತ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಾಲಿಶ ಹೇಳಿಕೆ, ದುರುದ್ದೇಶಪೂರಿತ ರಾಜೀಯ ನಡೆ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿಟ್ಟಿತು. ಚರಣಜಿತ್ ಸಿಂಗ್ ಚನಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ದಲಿತ ಸಿಎಂ ಕೋಟಾ ಮುಂದಿಟ್ಟು ಚುನಾವಣೆ ಎದುರಿಸಿತ್ತು. ಆದರೆ ಪಕ್ಷದೊಳಗಿನ ರಾಜಕೀಯ ಪಂಜಾಬ್ ಕಾಂಗ್ರೆಸ್‌ನ್ನು ನೆಲಸಮ ಮಾಡಿದೆ.
ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಸೂಕ್ತ ನಾಯಕನಿಲ್ಲ. ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಎದುರಿಸಿದ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಕಾಂಗ್ರೆಸ್ ನಾಯಕತ್ವದ ವಿರುದ್ಧ ಗುಲಾಮ್ ನಬಿ ಆಜಾದ್, ಕಪಿಲ್ ಸಿಬಲ್ ಸೇರಿದಂತೆ ಹಿರಿಯ ನಾಯಕರು ಸಿಡಿದೆದ್ದು ಪಕ್ಷದಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಲಿದೆ. ಪರಿಪಾರ ಹೊರತುಪಡಿಸಿ ಕಾಂಗ್ರೆಸ್ ಮತ್ತೊಬ್ಬ ನಾಯಕನನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡಲೇ ಇಲ್ಲ .
Assembly Elections 2022 Result ಉತ್ತರಖಂಡದಲ್ಲಿ ಬಿಜೆಪಿ ಮುನ್ನಡೆ, ಹಾಲಿ ಸಿಎಂ ಫುಷ್ಕರ್ ಸಿಂಗ್‌ಗೆ ಹಿನ್ನಡೆ!
ರಾಹುಲ್ ಗಾಂಧಿಯಿಂಂದ ತೆರವಾದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮತ್ತೆ ಸೋನಿಯಾ ಗಾಂಧಿ ವಹಿಸಿಕೊಂಡಿದ್ದಾರೆ. ನಾಯಕತ್ವಕ್ಕೆ ಚುನಾವಣೆ ನಡೆಯಬೇಕು. ಸೂಕ್ತ ನಾಯಕನ ಆಯ್ಕೆಯಾಗಬೇಕು. ಹೊಸ ಹಾಗೂ ಸೂಕ್ತ ನಾಯಕತ್ವದಲ್ಲಿ ಕಾಂಗ್ರೆಸ್ ಮುನ್ನಡೆಯಬೇಕು ಅನ್ನೋದು ಕಾಂಗ್ರೆಸ್ ಹಿರಿಯ ನಾಯಕರ ಅಭಿಮತವಾಗಿದೆ. ಆದರೆ ಇದು ಸಾಧ್ಯವಾಗಲೇ ಇಲ್ಲ.
ಗಾಂಧಿ ಪರಿವಾರ ನಾಯಕತ್ವನ್ನು ಜನರು ತಿರಸ್ಕರಿಸಿದ್ದಾರೆ. ಉತ್ತರ ಪ್ರೇದಶದಲ್ಲಿ ಪ್ರಿಯಾಂಕ ಗಾಂಧಿ ಭರ್ಜರಿ ಪ್ರಚಾರ ನಡೆಸಿದ್ದರು. ಯುಪಿಯಲ್ಲಿ ಠಿಕಾಣಿ ಹೊಡಿದ್ದ ಪ್ರಿಯಾಂಕಾ ಗಾಂಧಿ ನಾಯಕತ್ವವನ್ನು ಉತ್ತರ ಪ್ರದೇಶ ಜನ ತಿರಸ್ಕರಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಫಲಿತಾಂಶ(ಈಗಿನವರೆಗೆ)
ಬಿಜೆಪಿ 261 ಸ್ಥಾನಗಳಲ್ಲಿ ಮುನ್ನಡೆ
ಸಮಾಜವಾದಿ ಪಾರ್ಟಿ 128 ಸ್ಥಾನಗಲ್ಲಿ ಮುನ್ನಡೆ
ಬಿಎಸ್‌ಪಿ 7 ಸ್ಥಾನಗಲ್ಲಿ ಮುನ್ನಡೆ
ಕಾಂಗ್ರೆಸ್ 4 ಸ್ಥಾನಗಲ್ಲಿ ಮುನ್ನಡೆ
ಇತರರು 3 ಸ್ಥಾನಗಲ್ಲಿ ಮುನ್ನಡೆ
ಪಂಜಾಬ್ ವಿಧಾನಸಭಾ ಫಲಿತಾಂಶ
ಆಮ್ ಆದ್ಮಿ ಪಾರ್ಟಿ 89 ಸ್ಥಾನಗಲ್ಲಿ ಮುನ್ನಡೆ
ಕಾಂಗ್ರೆಸ್ 14 ಸ್ಥಾನಗಲ್ಲಿ ಮುನ್ನಡೆ
ಶಿರೋಮಣಿ ಅಕಾಲಿದಳ 10 ಸ್ಥಾನಗಳಲ್ಲಿ ಮುನ್ನಡೆ
ಬಿಜೆಪಿ 3 ಸ್ಥಾನಗಳಲ್ಲಿ ಮುನ್ನಡೆ
ಇತರರು 1 ಸ್ಥಾನದಲ್ಲಿ ಮುನ್ನಡೆ
ಉತ್ತರಖಂಡ ವಿಧಾನಸಭಾ ಫಲಿತಾಂಶ
ಬಿಜೆಪಿ 42 ಸ್ಥಾನಗಳಲ್ಲಿ ಮುನ್ನಡೆ
ಕಾಂಗ್ರೆಸ್ 24 ಸ್ಥಾನಗಳಲ್ಲಿ ಮುನ್ನಡೆ
ಇತರರು 4 ಸ್ಥಾನಗಳಲ್ಲಿ ಮುನ್ನಡೆ
ಗೋವಾ ವಿಧಾನಸಭಾ ಫಲಿತಾಂಶ
ಬಿಜೆಪಿ 19 ಸ್ಥಾನಗಳಲ್ಲಿ ಮುನ್ನಡೆ
ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆ
ಆಮ್ ಆದ್ಮಿ ಪಾರ್ಟಿ 1 ಸ್ಥಾನದಲ್ಲಿ ಮನ್ನಡೆ
ಇತರರು 8 ಸ್ಥಾನದಲ್ಲಿ ಮುನ್ನಡೆ
ಮಣಿಪುರ ವಿಧಾನಸಭಾ ಫಲಿತಾಂಶ
ಬಿಜೆಪಿ 26 ಸ್ಥಾನಗಳಲ್ಲಿ ಮುನ್ನಡೆ
ಕಾಂಗ್ರೆಸ್ 10 ಸ್ಥಾನಗಲ್ಲಿ ಮುನ್ನಡೆ
ಎನ್‌ಪಿಪಿ 13 ಸ್ಥಾನಗಲ್ಲಿ ಮುನ್ನಡೆ