ಜನಸಂಖ್ಯೆಯೇ ಭಾರತದ ಶಕ್ತಿ ಎಂದ ಮೊದಲ ಪ್ರಧಾನಿ ಮೋದಿ, ಯುಜನೋತ್ಸವದಲ್ಲಿ ಬೊಮ್ಮಾಯಿ ಭಾಷಣ!

By Suvarna News  |  First Published Jan 12, 2023, 5:25 PM IST

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೂ ಮೊದಲು ಸಿಎಂ ಬಸವರಾಜ್ ಬೊಮ್ಮಾಯಿ ಮಾಡಿದ ಭಾಷಣಧ ಹೈಲೈಟ್ಸ್ ಇಲ್ಲಿದೆ.


ಹುಬ್ಬಳ್ಳಿ(ಜ.12):  ಭಾರತದ ಜನಸಂಖ್ಯೆಯನ್ನು ಸಮಸ್ಯೆ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ಇದೇ ಜನಸಂಖ್ಯೆ ಭಾರತದ ಶಕ್ತಿ ಎಂದ ಮೊದಲ ಪ್ರಧಾನಿ ನರೇಂದ್ರ ಮೋದಿ. ಅದರಲ್ಲೂ ಭಾರತ ಇತರ ಎಲ್ಲಾ ದೇಶಗಳಿಗಿಂತ ಅತೀ ಹೆಚ್ಚಿನ ಯುವಶಕ್ತಿ ಹೊಂದಿದೆ. ಇದು ಈ ದೇಶದ ಸಂಪತ್ತು ಎಂದು ಯುವ ಸಮೂಹಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದು ಯುವಕರ ವಿಕಸನಕ್ಕೆ ಮೋದಿ ಕಾರಣರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಆಯೋಜಿಸಿದ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ್ ಬೊಮ್ಮಾಯಿ ಮಾತನಾಡಿದರು. ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರವಮನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಳಿಕ ಬೊಮ್ಮಾಯಿ ಭಾಷಣ ಮಾಡಿದರು.

Tap to resize

Latest Videos

ಯುವ ಸಮೂಹಕ್ಕೆ ಕನ್ನಡದಲ್ಲೇ ಮೋದಿ ಸಂದೇಶ, ಹುಬ್ಬಳ್ಳಿ ಯವಜನೋತ್ಸವದಲ್ಲಿ ಪ್ರಧಾನಿ ಭಾಷಣ!

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವಜನೋತ್ಸವವಾಗಿ ಆಚರಿಸುತ್ತಿದ್ದೇವೆ. ಬದುಕನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ವಿವೇಕಾಂದರು ಹೇಳಿಕೊಟ್ಟಿದ್ದಾರೆ. ಜನಸಂಖ್ಯೆ ಎಂದರೆ ಭಾರ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ, ಅದೇ ಜನಸಂಖ್ಯೆ ಈ ದೇಶದ ಶಕ್ತಿ ಎಂದು ಮೊದಲ ಬಾರಿಗೆ ಹೇಳಿದ ಪ್ರಧಾನಿ ಅದು ನರೇಂದ್ರ ಮೋದಿ. ದೇಶದ ಯುವಜನತೆ ಸ್ಕಿಲ್ ಇಂಡಿಯಾ, ಮುದ್ರಾ ಯೋಜನೆ, ಫಿಟ್ ಇಂಡಿಯಾ, ಖೇಲೋ ಇಂಡಿಯಾ, ಜೀತೋ ಇಂಡಿಯಾ ಮೂಲಕ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಹುರುಪು ನೀಡಿದ್ದಾರೆ.

ಭಾರತದ ಯುವಕರಿಗೆ ಸ್ಪೂರ್ತಿಯಾಗಿರುವ ನರೇಂದ್ರ ಮೋದಿ ನಮ್ಮ ಜೊತೆಗಿರುವುದು ನಮಗೆ ಹೆಮ್ಮೆ. ಕರ್ನಾಟಕ ಸರ್ಕಾರ 5 ಲಕ್ಷ ಯವಕರಿಗೆ ಉದ್ಯೋಗ ಕೊಡುವ ಯೋಜನೆಯನ್ನು ಆರಂಭಿಸಿದೆ.  75 ಕ್ರೀಡಾಪಟಗಳನ್ನು ಒಲಿಂಪಿಕ್‌ಗೆ ತಯಾರಿ ಮಾಡುವ ಕಾರ್ಯಕ್ರವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

ರಾಷ್ಟ್ರೀಯ ಯುವಜನ ಮೇಳ ಅತ್ಯಂತ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ, ಮೋದಿ ಆಗಮನದಿಂದ ಕರ್ನಾಟಕದ ಜನರ ಸಂತಸ ಇಮ್ಮಡಿಗೊಂಡಿದೆ ಎಂದು ಬೊಮ್ಮಾಯಿ ಹೇಳಿದರು. 

ಅಭಿಮಾನಿಗಳಿಂದ ಹೂಮಳೆಯ ಸ್ವಾಗತ, ಹುಬ್ಬಳ್ಳಿ ಜನರ ಪ್ರೀತಿಗೆ ಮೋದಿ ಪುಳಕ!

ಬೊಮ್ಮಾಯಿ ಭಾಷಣದ ಬಳಿಕ ಕಲಾ ತಂಡದಳ ಪ್ರದರ್ಶನ ನಡೆಯಿತು. ಮೊದಲಿಗೆ ಆಂಧ್ರ ಪ್ರದೇಶದ ತಂಡ ಕಲಾ ನೃತ್ಯ ಪ್ರದರ್ಶನ ನಡೆಸಿತು. ಗುಜರಾತ್, ಹರ್ಯಾಣ , ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳನ್ನು ತಮ್ಮ ತಮ್ಮ ಕಲಾ ಪ್ರದರ್ಶನ ನಡೆಸಿತು.  ಬಳಿಕ ಯೋಗಾಸನ ಹಾಗೂ ಮಲ್ಲಕಂಬ ಪ್ರದರ್ಶನವೂ ನಡೆಯಿತು. ಯುವ ಸಮೂಹದ ಪ್ರದರ್ಶನಕ್ಕೆ ಮೋದಿ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದರು.

ಅನುರಾಗ್ ಠಾಕೂರ್ ಭಾಷಣ:
ಫಿಟ್ ಇಂಡಿಯಾ, ಖೇಲೋ ಇಂಡಿಯಾ ಸೇರಿದಂತೆ ಹಲವು ಯೋಜನೆಗಳಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನೆಯನ್ನು ಫಿಟ್ ಆಗಿರಿಸುವ ಕಾರ್ಯವನ್ನು ಪ್ರಧಾನಿ ಮೋದಿ ಆರಂಭಿಸಿದ್ದಾರೆ. ಈ ಅಮೃತಮಹೋತ್ಸವ ವರ್ಷದಲ್ಲಿ ಯುವಜನತೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಭಾರತಕ್ಕೇ ಜಿ20 ಅಧ್ಯಕ್ಷತೆ ಕೂಡ ಭಾರತಕ್ಕೆ ಸಿಕ್ಕಿದೆ. ಇದಕ್ಕೆ ಮೋದಿಗೆ ಧನ್ಯವಾದ ಅರ್ಪಿಸುತ್ತೇನೆ. ಉಕ್ರೇನ್‌ನಲ್ಲಿ ಸಿಲುಕಿದ್ದ ಯುವ ವಿದ್ಯಾರ್ಥಿ ಸಮೂಹವನ್ನು ಗಂಗಾ ಆಪರೇಶನ್ ಮೂಲಕ ಸುರಕ್ಷಿತವಾಗಿ ವಾಪಸ್ ಕರೆತರಲಾಯಿತು. ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಭಾರತ ಹೊಮ್ಮಿದೆ. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿಯ ಅವಿರತ ಪರಿಶ್ರಮದ ಮೂಲಕ ಈ ಸಾಧನೆ ಮಾಡಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.

click me!