ಪ್ರಧಾನಿ ಮೋದಿ ತಬ್ಬಿಕೊಂಡು ಭಾವುಕರಾದ ಮೀನು ಬಲೆ ನೇಯ್ಗೆಕಾರ, ವಿಡಿಯೋ ವೈರಲ್!

By Suvarna News  |  First Published Sep 18, 2023, 8:16 PM IST

ವಿಶ್ವಕರ್ಮ ಜಯಂತಿ ದಿನ ಪ್ರಧಾನಿ ಮೋದಿ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದಾರೆ. ಈ ಮೂಲಕ ವಿಶ್ವಕರ್ಮ ಸಮುದಾಯಕ್ಕೆ ಹಲವು ಸೌಲಭ್ಯಗಳನ್ನು ನೀಡಿದ್ದರೆ. ಈ ವೇಳೆ ಪ್ರಧಾನಿ ಮೋದಿಯಿಂದ ಯೋಜನೆ ಸೌಲಭ್ಯ ಪಡೆದ ತಮಿಳುನಾಡು ಮೀನು ಬಲೆ ಹೆಣೆಯುವ ಕಾರ್ಮಿಕ ಮೋದಿ ತಬ್ಬಿಕೊಂಡು ಭಾವುಕರಾದ ವಿಡಿಯೋ ವೈರಲ್ ಆಗಿದೆ.
 


ನವದೆಹಲಿ(ಸೆ.18)  ಪ್ರಧಾನಿ ನರೇಂದ್ರ ಮೋದಿ ದೇಶದ ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಯೋಜನೆ ಘೋಷಿಸಿದ್ದಾರೆ. ವಿಶ್ವಕರ್ಮ ಜಯಂತಿಯಂದು ವಿಶ್ವಕರ್ಮು ಸಮುದಾಯದಲ್ಲಿನ ಪ್ರತಿಯೊಬ್ಬರ ಜೀವನ ಹಸನುಗೊಳಿಸಲು ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಪ್ರಧಾನಿ ಮೋದಿ ಸೌಲಭ್ಯ ವಿತರಿಸಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಯೋಜನೆ ಸೌಲಭ್ಯ ಪಡೆಯಲು ಬಂದ ತಮಿಳುನಾಡು ಮೀನು ಬಲೆ ನೇಯ್ಗಕಾರ ಕೆ ಪಳನಿವೇಲ್ ಭಾವುಕರಾಗಿದ್ದಾರೆ. ವೇದಿಕೆಯಲ್ಲಿ ಪ್ರಧಾನಿ ಮೋದಿ ತಬ್ಬಿಕೊಂಡು ಭಾವುಕರಾದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ವಿಶ್ವಕರ್ಮ ಯೋಜನೆ ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನದ ಯೋಜನೆಯಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಯೋಜನೆಯಡಿ ಮೋದಿ ವೇದಿಕೆಯಲ್ಲಿ ಫಲಾನುಭವಿಗಳಿಗೆ ಯೋಜನೆ ಲಾಭ ವಿತರಿಸಿದ್ದಾರೆ. ಈ ವೇಳೆ ವೇದಿಕೆ ಬಂದ ತಮಿಳುನಾಡು ಮೀನಿನ ಬಲೆ ಹೆಣೆಯುವ ಕುಶಲಕರ್ಮಿ ಯೋಜನೆ ಪಡೆದು ಭಾವುಕರಾಗಿದ್ದಾರೆ. ಈ ವೇಳೆ ಮೋದಿ ಹೆಗಲಮೇಲೆ ಕೈಹಾಕಿ ತಬ್ಬಿಕೊಂಡಿದ್ದಾರೆ. 

Tap to resize

Latest Videos

ಹಳೇ ಸಂಸತ್ತಿನಲ್ಲಿ ಮೋದಿ ಕೊನೆಯ ಭಾಷಣ, ಪ್ರಮುಖರ ನೆನೆದು ವಿಪಕ್ಷಗಳಿಗೆ ಪ್ರಧಾನಿ ಟಾಂಗ್!

ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳ ಉಚಿತ ನೋಂದಣಿ, ಉಚಿತ ಐಡಿ ಕಾರ್ಡ್, ಕೌಶಲ್ಯಾಭಿವೃದ್ಧಿ ತರಬೇತಿ, ಕೆಲ ಮೂಲಭೂತ ತರಬೇತಿಗಳನ್ನ ನೀಡಲಾಗುತ್ತದೆ. ಇನ್ನು ಕೆಲ ಯಂತ್ರಗಳ ಖರೀದಿ, ತಮ್ಮ ಕುಶಲಕರ್ಮಿ ಉದ್ಯೋಗದ ಸಲಕರಣೆ ಖರೀದಿಗೆ 15,000 ರೂಪಾಯಿ ಇನ್ಸೆಂಟೀವ್ ನೀಡಲಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.

 

दिल को छूने वाला पल। pic.twitter.com/vIHYgAEni9

— Piyush Goyal (@PiyushGoyal)

 

ವಿಶ್ವಕರ್ಮ ದಿನದಂದು ಯೋಜನೆಗಳ ಘೋಷಣೆಗೂ ಮೊದಲು ಪ್ರಧಾನಿ ಮೋದಿ ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಜನತೆಗೆ  ಮೋದಿ ಶುಭಾಶಯ ಕೋರಿದ್ದರು. ಭಗವಾನ್ ವಿಶ್ವಕರ್ಮರ ಜನ್ಮದಿನದಂದು ನಿಮ್ಮ ಎಲ್ಲಾ ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.  ಈ ಸಂದರ್ಭದಲ್ಲಿ, ತಮ್ಮ ಸಮರ್ಪಣೆ, ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಸಮಾಜದಲ್ಲಿ ಹೊಸತನವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಕುಶಲಕರ್ಮಿಗಳು ಮತ್ತು ಕೌಶಲ್ಯತೆಯ ಸೃಷ್ಟಿಕರ್ತರನ್ನು ನಾನು ನನ್ನ ಹೃದಯದಿಂದ ವಂದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

 

ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಟಾಂಗ್‌, 'ಎದೆ ಬಡಿದುಕೊಂಡು ಅಳೋಕೆ ಸಾಕಷ್ಟು ಸಮಯವಿದೆ'

ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ 5400 ಕೋಟಿ ರು. ವೆಚ್ಚದ ‘ಯಶೋಭೂಮಿ’ ಸಭಾಂಗಣ/ವಸ್ತು ಪ್ರದರ್ಶನ ಕೇಂದ್ರದ ಮೊದಲ ಹಂತಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ‘ಇಂದು ರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಯಶೋಭೂಮಿ ಸಿಕ್ಕಿದೆ. ಇದು ನನ್ನ ವಿಶ್ವಕರ್ಮ ಸಹೋದರರ ತಪಸ್ಸನ್ನು ತೋರಿಸುತ್ತದೆ. ನಾನು ಈ ಕೇಂದ್ರವನ್ನು ರಾಷ್ಟ್ರದ ಪ್ರತಿಯೊಬ್ಬ ವಿಶ್ವಕರ್ಮರಿಗೂ ಸಮರ್ಪಿಸುತ್ತೇನೆ. ಇದು ವಿಶ್ವಕರ್ಮರಿಗೆ ಸಹಕಾರಿಯಾಗಲಿದೆ. ಭಾರತೀಯ ಕಲೆ ಮತ್ತು ಕರಕುಶಲ ವಸ್ತುಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ಇದು ರೋಮಾಂಚಕ ಕೇಂದ್ರವಾಗಲಿದೆ. ಇದು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಮಾಡುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ’ ಎಂದರು

click me!