ಬಿಜೆಪಿ ಬಂದರೆ ಮೀನು ಮಾಂಸ ತಿನ್ನಲು ಬಿಡಲ್ಲ, ವಿವಾದ ಸೃಷ್ಟಿಸಿದ ಸಿಎಂ ಮಮತಾ ಹೇಳಿಕೆ

Published : Mar 29, 2026, 07:08 PM IST
BJP Will Use Bulldozers to Drive People Away': Mamata Banerjee's Warning in Bengal

ಸಾರಾಂಶ

ಬಿಜೆಪಿ ಬಂದರೆ ಮೀನು ಮಾಂಸ ತಿನ್ನಲು ಬಿಡಲ್ಲ, ವಿವಾದ ಸೃಷ್ಟಿಸಿದ ಸಿಎಂ ಮಮತಾ ಹೇಳಿಕೆ, ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜನರು ಮೀನು ತಿನ್ನಲು ಬಿಡುವುದಿಲ್ಲ ಎಂದಿರುವ ಮಮತಾ ಬ್ಯಾನರ್ಜಿ ಇದೀಗ ಪೇಚಿಗೆ ಸಿಲುಕಿದ್ದಾರೆ.

ಕೋಲ್ಕತಾ (ಮಾ.29) ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೆ ಗುರಿಯಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಜನರು ಮೀನು ಮಾಂಸ ತಿನ್ನಬೇಕು ಎಂದರೆ ಟಿಎಂಸಿಕೆ ಮತ ಹಾಕಬೇಕು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಮೀನು ಮಾಂಸ ತಿನ್ನಲು ಬಿಡುವುದಿಲ್ಲ ಎಂದಿದ್ದಾರೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಮೀನು ತಿನ್ನುವುದು ನಿಷೇಧ ಎಂದಿದ್ದಾರೆ. ಮತದಾರರ ಒಲೈಕೆಗೆ ನೀಡಿದ ಹೇಳಿಕೆಯಿಂದ ಮಮತಾ ಬ್ಯಾನರ್ಜಿ ಟ್ರೋಲ್ ಆಗುತ್ತಿದ್ದಾರೆ.

ಆಹಾರ ಹಕ್ಕು ಕಸಿದುಕೊಳ್ಳುತ್ತೆ ಬಿಜೆಪಿ, ಮಮತಾ ಆರೋಪ

ಪುರುಲಿಯಾದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಆಹಾರ ಪದ್ಧತಿ, ಸಂಸ್ಕೃತಿಯನ್ನು ಬಿಜೆಪಿ ಮುಗಿಸುತ್ತದೆ. ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಜನರು ಮೀನು, ಮಾಂಸ, ಮೊಟ್ಟೆ ತಿನ್ನುವುದನ್ನು ನಿಷೇಧಿಸುತ್ತಾರೆ. ನಿಮ್ಮ ಆಹಾರದ ಹಕ್ಕನ್ನು ಕಸಿದುಕೊಳ್ಳುತ್ತಾರೆ. ಕಾರಣ ಅವರಿಗೆ ಬೇರೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ. ಬಿಜೆಪಿಗೆ ಗೊತ್ತಿರುವುದು ಗಲಭೆ ಮಾತ್ರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿ ಆಡಳಿತ ಮಾಡುವ ರಾಜ್ಯಗಳಲ್ಲಿ ಜನರು ಮೀನು ತಿನ್ನಲು ಆಗುತ್ತಿಲ್ಲ ಎಂದಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳ ಜನರು ಮೀನು, ಮಾಂಸ ತಿನ್ನಬೇಕು ಎಂದರೆ ಟಿಎಂಸಿಗೆ ಮತ ಹಾಕಬೇಕು ಎಂದು ಪರೋಕ್ಷವಾಗಿ ಜನರನ್ನು ಬೆದರಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಗಲಭೆಗೆ ಪ್ರಚೋದನೆ ನೀಡುತ್ತಾರೆ. ಅವರ ಕೆಲಸವೇ ಅದು ಎಂದಿದ್ದಾರೆ.

ಬಿಜೆಪಿ ಆಡಳಿತದ ರಾಜ್ಯದಲ್ಲಿ ಮಹಿಳೆಯರು ಮಾತನಾಡುವಂತಿಲ್ಲ. ಮಹಿಳೆಯರ ಮೇಲೆ ದಾಳಿಗಳು ನಡೆಯುತ್ತಿದೆ. ಪಶ್ಚಿಮ ಬಂಗಾಳ ಶಾಂತಿಯುತ ರಾಜ್ಯ. ಇಲ್ಲಿ ಟಿಎಂಸಿ ಆಡಳಿತದಲ್ಲಿ ಶಾಂತಿ ನೆಲೆಸಿದೆ. ಅದು ಬಿಜೆಪಿಯಿಂದ ಸಾಧ್ಯವಿಲ್ಲ ಎಂದಿದ್ದಾರೆ. ದೊಂಬಿ ಎಬ್ಬಿಸಿ ಮುಗ್ದ ಜನರ ಮೇಲೆ ದಾಳಿ ಮಾಡುತ್ತಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಧರ್ಮದವರಿದ್ದಾರೆ. ಬಿಜೆಪಿಗೆ ಒಂದು ಧರ್ಮ ಮಾತ್ರ ಸಾಕು. ಬೇರೆ ಧರ್ಮಗಳಲ್ಲಿ ಅವರಿಗೆ ನಂಬಿಕೆ ಇಲ್ಲ. ಬಿಜೆಯಿಂದ ಪಶ್ಚಿಮ ಬಂಗಾಳದ ಜನರು ಹೈರಾಣಾಗಲಿದ್ದಾರೆ ಎಂದಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ

ಪಶ್ಚಿಮ ಬಂಗಾಳದ ವಿಧಾನಭೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಎಪ್ರಿಲ್ 23 ಹಾಗೂ ಎರಡನೇ ಹಂತ ಎಪ್ರಿಲ್ 29ರಂದು ನಡೆಯಲಿದೆ. ಫಲಿತಾಂಶ ಮೇ 4 ರಂದು ಘೋಷಣೆಯಾಗಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕಿಸ್ತಾನ ಅಭಿವೃದ್ಧಿಗೆ ಧುರಂಧರ್-2 ಲಾಭದಲ್ಲಿ ₹500 ಕೋಟಿ ಕೊಡಿ: ರಸ್ತೆ, ಮೂಲಸೌಕರ್ಯಕ್ಕೆ ಭಿಕ್ಷೆ ಬೇಡಿದ ಪಾಕಿಗಳು!
ಕೃಷ್ಣ ಮುಸ್ಲಿಮೋ, ಹಿಂದುನೋ ಕೇಳಿ ರಾಧಾ ಲವ್​ ಮಾಡಿದ್ಲಾ? ಮೊನಾಲಿಸಾ ಏನೇನ್​ ಹೇಳಿದ್ಲು ಕೇಳಿ