
ನವದೆಹಲಿ (ಜು. 03): ಸಮಯ ಪಾಲನೆ ಬಗ್ಗೆ ಸದಾ ಟೀಕೆ ಎದುರಿಸುವ ಭಾರತೀಯ ರೈಲ್ವೆ ಬುಧವಾರ ಐತಿಹಾಸಿಕ ಸಾಧನೆ ಮಾಡಿದೆ. ಬುಧವಾರ ದೇಶಾದ್ಯಂತ ಸಂಚಾರ ಕೈಗೊಂಡಿದ್ದ 230 ವಿಶೇಷ ರೈಲುಗಳು, ನಿಗದಿತ ಸಮಯಕ್ಕೆ ನಿಲ್ದಾಣಗಳಿಂದ ಹೊರಟು, ನಿಗದಿತ ಸಮಯದಲ್ಲೇ ಗಮ್ಯ ಸ್ಥಾನ ತಲುಪಿವೆ. ಈ ಮೂಲಕ ಸಮಯ ಪಾಲನೆಯಲ್ಲಿ ಶೇ.100ರಷ್ಟುಸಾಧನೆ ಮಾಡಿದೆ. ರೈಲ್ವೆಯ 183 ವರ್ಷಗಳಲ್ಲಿ ಇಂಥ ಸಾಧನೆ ಇದೇ ಮೊದಲು.
ಸಾಮಾನ್ಯ ದಿನಗಳಲ್ಲಿ ನಿತ್ಯ 13000 ರೈಲುಗಳು ದೇಶಾದ್ಯಂತ ಸಂಚಾರ ನಡೆಸುತ್ತವೆ. ಆದರೆ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಕಸ್ತ ಕೇವಲ 230 ವಿಶೇಷ ರೈಲುಗಳು ಮಾತ್ರವೇ ನಿತ್ಯ ಸಂಚಾರ ನಡೆಸುತ್ತಿವೆ. ಬಹುತೇಕ ಯಾವುದೇ ಮಾರ್ಗದಲ್ಲಿ ಸಂಚಾರ ದಟ್ಟಣೆ ಇಲ್ಲದಿರುವುದೇ ರೈಲುಗಳ ಶೇ.100 ಸಮಯ ಸಾಧನೆಗೆ ಕಾರಣ ಎನ್ನಲಾಗಿದೆ. ಈ ಹಿಂದೆ ಜೂ.23ರಂದು ರೈಲ್ವೆಯು ಶೇ.99.54ರಷ್ಟುಸಮಯಪ್ರಜ್ಞೆ ಸ್ಥಾಪಿಸಿತ್ತು.
21 ಮಿಗ್, 12 ಸುಖೋಯ್ ಯುದ್ಧ ವಿಮಾನ ಖರೀದಿಸಲು ಸರ್ಕಾರ ಅಸ್ತು
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿದ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು, ‘2020ರ ಜು.1ರಂದು ಭಾರತೀಯ ರೈಲುಗಳು ಶೇ.100ರಷ್ಟುಸಮಯಪ್ರಜ್ಞೆ ಮೆರೆದಿದೆ. ಈ ಮೂಲಕ ರೈಲ್ವೆ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದೆ’ ಎಂದು ಕೊಂಡಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ