ಭಾರತದಿಂದ ಮತ್ತೊಂದು ಕೊರೋನಾ ಲಸಿಕೆ ಸಿದ್ಧ; DCGIನಿಂದ ಸಿಕ್ತು ಗ್ರೀನ್ ಸಿಗ್ನಲ್!

By Suvarna NewsFirst Published Jul 3, 2020, 3:37 PM IST
Highlights

ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಿದ್ದಂತೆ, ಇತ್ತ ಕೊರೋನಾ ವಿರುದ್ಧದ ಹೋರಾಟ ತೀವ್ರಗೊಳ್ಳುತ್ತಿದೆ.  ಕೊರೋನಾಗೆ ಭಾರತದ ಔಷದಿ  ಕೋವಾಕ್ಸಿನ್ ಲಸಿಕೆ ಸಂಶೋಧನೆಯಾದ ಬೆನ್ನಲ್ಲೇ, ಮತ್ತೊಂದು ಭಾರತದ ಲಸಿಕೆ ಸಜ್ಜಾಗಿದೆ. ಅಹಮ್ಮದಾಬಾದ್ ಮೂಲದ ಝೈಡಸ್ ಕಂಪನಿ ಇದೀಗ ಕೊರೋನಾಗೆ ಲಸಿಕೆ ಕಂಡು ಹಿಡಿದಿದ್ದು, ಭಾರತದ ಡ್ರಗ್ಸ್ ಕಂಟ್ರೋಲ್  ಗ್ರೀನ್ ಸಿಗ್ನಲ್ ನೀಡಿದೆ.

ಅಹಮ್ಮದಾಬಾದ್(ಜು.03): ಭಾರತ ಬೈಯೋಟೆಕ್ ಡ್ರಗ್ಸ್ ಬಿಡುಗಡೆ ಮಾಡಿದ ಕೋವಾಕ್ಸಿನ್ ಬೆನ್ನಲ್ಲೇ ಭಾರತದಿಂದಲೇ ಮತ್ತೊಂದು ಲಸಿಕೆ ಮಾನವನ ಪರೀಕ್ಷೆಗೆ ರೆಡಿಯಾಗಿದೆ. ಅಹಮ್ಮದಾಬಾದ್‌ನ ಝೈಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಇದೀಗ ನೂತನ ಕೊರೋನಾ ಲಸಿಕೆ ಕಂಡು ಹಿಡಿದಿದೆ. ಇದಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗ್ರೀನ್ ಸಿಗ್ನಲ್ ನೀಡಿದೆ.

ಗುಡ್‌ ನ್ಯೂಸ್: ಭಾರತದ ಮೊದಲ ಕೊರೋನಾ ಔಷಧ ಸಿದ್ಧ!.

ಝೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಡೆಟ್ ಸಂಶೋಧಿಸಿರುವ ನೂತನ ಕೊರೋನಾ ಲಸಿಕೆಗೆ DCGI ಪರೀಕ್ಷೆಗೆ ಅನುಮತಿ ನೀಡಿದೆ. ಫೇಸ್ I ಹಾಗೂ ಫೇಸ್ II ಪರೀಕ್ಷೆಗೆ DCGI ಅನುಮತಿ ನೀಡಿದೆ. ಹೆಚ್ಚುತ್ತಿರುವ ಕೊರೋನಾ ವೈರಸ್ ಕಾರಣ ತುರ್ತುು ಆರೋಗ್ಯ ಕಾರಣ ಇಲಾಖೆ ಅನುಮತಿ ನೀಡಲಾಗಿದೆ. 

ಗುಡ್‌ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!...

ಝೈಡಸ್ ಕ್ಯಾಡಿಲಾ ಸಂಶೋಧಿಸಿರುವ ಕೊರೋನಾ ವೈರಸ್ ಲಸಿಕೆ ಪ್ರಾಣಿಗಳ ಮೇಲೆ ಪ್ರಯೋಗ ಯಶಸ್ವಿಯಾಗಿದೆ. ಫೇಸ್ I ಹಾಗೂ ಫೇಸ್ II ಪರೀಕ್ಷೆಗೆ ಕನಿಷ್ಠ 3 ತಿಂಗಳ ಸಮಯಾವಕಾಶ ಬೇಕಿದೆ ಎಂದು ಝೈಡಸ್ ಹೇಳಿದೆ. 

ಇತ್ತೀಚೆಗಷ್ಟೇ ಭಾರತ್ ಬೈಯೋಟೆಕ್ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಕೋವಾಕ್ಸಿನ್ ಲಸಿಕೆ ಸಂಶೋಧನೆ ನಡೆಸಿತ್ತು. ಈ ಲಸಿಕೆ ಪರೀಕ್ಷೆಗೆ DCGI ಗ್ರೀನ್ ಸಿಗ್ನಲ್ ನೀಡಿತ್ತು. ಇದರ ಬೆನ್ನಲ್ಲೇ ಝೈಡಸ್  ಕ್ಯಾಡಿಲಾಗೂ ಗ್ರೀನ್ ಸಿಕ್ಕಿರುವುದು ಭಾರತದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!