ಮೋದಿ ಕಾರ್ಯಕ್ರಮಕ್ಕೆ BookMyShow ನಲ್ಲಿ ಟಿಕೆಟ್ ಬುಕ್ಕಿಂಗ್! ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್

Published : Sep 07, 2026, 09:58 PM IST
narendra modi

ಸಾರಾಂಶ

ವಡೋದರಾದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ನೋಂದಣಿ 'ಬುಕ್ ಮೈ ಶೋ'ನಲ್ಲಿ ಕೇವಲ ಒಂದು ಗಂಟೆಯಲ್ಲಿ 'ಹೌಸ್‌ಫುಲ್' ಆಗಿದ್ದು, ಬರೋಬ್ಬರಿ 42 ಸಾವಿರಕ್ಕೂ ಹೆಚ್ಚು ಜನರು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಈ ಭೇಟಿಯ ವೇಳೆ ಪ್ರಧಾನಿಯವರು ಗುಜರಾತ್‌ನಲ್ಲಿ 35,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಅಲ್ಲಿ ಜನಸಾಗರವೇ ನೆರೆಯುತ್ತದೆ ಅನ್ನೋದು ಗೊತ್ತಿರೋ ವಿಚಾರ. ಈ ಬಾರಿ ಮೋದಿ ಅವರ ಕಾರ್ಯಕ್ರಮವೊಂದು ಹೊಸ ಇತಿಹಾಸ ಬರೆದಿದೆ. ಸಾಮಾನ್ಯವಾಗಿ ಸಿನಿಮಾ ಅಥವಾ ಮ್ಯೂಸಿಕ್ ಕಾನ್ಸರ್ಟ್‌ಗಳಿಗೆ ಟಿಕೆಟ್ ಬುಕ್ ಮಾಡುವ 'ಬುಕ್ ಮೈ ಶೋ' (BookMyShow) ಆಪ್‌ನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಫಲಿತಾಂಶ ನೋಡಿ ಸ್ವತಃ ಅಧಿಕಾರಿಗಳೇ ಶಾಕ್ ಆಗಿದ್ದಾರೆ!

ಒಂದೇ ಗಂಟೆಯಲ್ಲಿ 'ಹೌಸ್‌ಫುಲ್'!

ಮಂಗಳವಾರ (ಸೆಪ್ಟೆಂಬರ್ 8) ಗುಜರಾತ್‌ನ ವಡೋದರಾದಲ್ಲಿ "NaMo for Viksit Bharat" ಎಂಬ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಲು ಮೊದಲ ಬಾರಿಗೆ 'ಬುಕ್ ಮೈ ಶೋ' ಮೂಲಕ ಉಚಿತ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆಪ್‌ನಲ್ಲಿ ಬುಕ್ಕಿಂಗ್ ಓಪನ್ ಆದ ಕೇವಲ ಒಂದು ಗಂಟೆಯಲ್ಲೇ ಲಭ್ಯವಿದ್ದ ಎಲ್ಲಾ ಸೀಟುಗಳು ಭರ್ತಿಯಾಗಿವೆ. ಸುಮಾರು 42,000ಕ್ಕೂ ಹೆಚ್ಚು ಜನರು ಇನ್ನೂ ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ ಎಂದರೆ ಮೋದಿ ಅವರ ಕ್ರೇಜ್ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.

ಎಲ್ಲವೂ ಡಿಜಿಟಲ್ ಮಯ

ಈ ಕಾರ್ಯಕ್ರಮಕ್ಕೆ ಬರುವವರು ಸಾಲಿನಲ್ಲಿ ನಿಂತು ಪಾಸ್ ಪಡೆಯುವ ಅವಶ್ಯಕತೆ ಇಲ್ಲ. ಬುಕ್ ಮೈ ಶೋನಲ್ಲಿ ನೋಂದಣಿ ಮಾಡಿದವರಿಗೆ ಮೊಬೈಲ್‌ಗೆ ಎಲೆಕ್ಟ್ರಾನಿಕ್ ಎಂ-ಟಿಕೆಟ್ (M-ticket) ಮತ್ತು ಕ್ಯೂಆರ್ ಕೋಡ್ (QR Code) ಬರಲಿದೆ. ಅದನ್ನು ತೋರಿಸಿಯೇ ಕಾರ್ಯಕ್ರಮದ ಒಳಗೆ ಪ್ರವೇಶ ಪಡೆಯಬೇಕಿದೆ. ಇದೊಂದು ಸಂಪೂರ್ಣ ಡಿಜಿಟಲ್ ಪ್ರಯೋಗವಾಗಿದ್ದು, ಯುವಜನತೆ ಮತ್ತು ವೃತ್ತಿಪರರನ್ನು ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ವಡೋದರಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಪೆವಿಲಿಯನ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಸುಮಾರು 35,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ರೈಲ್ವೆ ಸಂಪರ್ಕ, ಫ್ರೈಟ್ ಕಾರಿಡಾರ್ (ಸರಕು ಸಾಗಣೆ ಹಾದಿ), ಸೌರಶಕ್ತಿ ಯೋಜನೆಗಳು ಮತ್ತು ರಸ್ತೆ ಅಭಿವೃದ್ಧಿ ಕಾರ್ಯಗಳು ಸೇರಿವೆ.

ವಡೋದರಾದ ಕಾರ್ಯಕ್ರಮ ಮುಗಿಸಿದ ನಂತರ ಪ್ರಧಾನಿ ಮೋದಿ ಅವರು ಮುಂಬೈಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ನಡೆಯಲಿರುವ 'ಗ್ಲೋಬಲ್ ಫಿನ್ ಟೆಕ್ ಫೆಸ್ಟ್ 2026' ಅನ್ನು ಉದ್ಘಾಟಿಸಲಿದ್ದಾರೆ. ಒಟ್ಟಿನಲ್ಲಿ, ಸಿನಿಮಾ ಟಿಕೆಟ್‌ಗಳಂತೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಪಾಸ್‌ಗಳು ಕಣ್ಮಿಚ್ಚಿ ಬಿಡುವುದರೊಳಗೆ ಖಾಲಿಯಾಗಿರುವುದು ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೃಷ್ಣಂ ವಂದೇ ಜಗದ್ಗುರುಂ: ಪಾಕಿಸ್ತಾನದಲ್ಲಿ ಜನಸಾಗರ, ಈ ಸಂಭ್ರಮ ನೋಡಿದ್ರೆ ಶಾಕ್ ಆಗ್ತೀರಿ - VIDEO
ಪ್ರಾಮಾಣಿಕತೆ ಇನ್ನೂ ಜೀವಂತ; 3 ಲಕ್ಷ ಹಣವಿದ್ದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್