ಕಿಡಿಗೇಡಿಗಳಿಂದ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಬ್ರಿಗೇಡಿಯರ್ ಸಮಾಧಿ ಧ್ವಂಸ!

Published : Dec 28, 2020, 08:17 PM IST
ಕಿಡಿಗೇಡಿಗಳಿಂದ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಬ್ರಿಗೇಡಿಯರ್ ಸಮಾಧಿ ಧ್ವಂಸ!

ಸಾರಾಂಶ

1947-48ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ಮೊದಲ ಯುದ್ಧದಲ್ಲಿ ಎದುರಾಳಿಗಳನ್ನು ಹೆಮ್ಮೆಟ್ಟಿಸಿ, ಯುದ್ಧಭೂಮಿಯಲ್ಲಿ ಹುತಾತ್ಮರಾದ ವಾರ್ ಹೀರೋ, ಬ್ರಿಗೇಡಿಯರ್ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ನವದೆಹಲಿ(ಡಿ.28): ಪಾಕಿಸ್ತಾನ ವಿರುದ್ಧ ಯುದ್ಧ ಮಾತ್ರವಲ್ಲ, ಕ್ರೀಡೆ ಕೂಡ ಭಾರತೀಯರಿಗೆ ಯುದ್ಧದ ರೀತಿ ಇದ್ದಂತೆ. ಹೀಗಾಗಿ ಪಾಕ್ ವಿರುದ್ಧ ಗೆದ್ದ ಕ್ರೀಡಾಪಟುಗಳು, ಕ್ರಿಕೆಟಿಗರು ಹೀರೋಗಳಿದ್ದಂತೆ. ಇನ್ನು ಪಾಕಿಸ್ತಾನ ವಿರುದ್ಧ ಯುದ್ಧ ಮಾಡಿದ ಭಾರತೀಯ ಯೋಧರು ನಮಗೆ ಹೀರೋಗಳಿಗಿಂತ ಮಿಗಿಲು. ಆದರೆ ಭಾರತ-ಪಾಕಿಸ್ತಾನ ಮೊದಲ ಯುದ್ಧದಲ್ಲಿ ಬೆಟಾಲಿಯನ್ ಪಡೆ ಮುನ್ನಡೆಸಿ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ ಹುತಾತ್ಮರಾದ ಬ್ರಿಗೇಡಿಯರ್ ಉಸ್ಮಾನ್ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ಹುತಾತ್ಮ ಯೋಧ ಮನೀಶ್ ಅವರ ಅಂತಿಮ ದರ್ಶನಕ್ಕೆ ಜನಸಾಗರ, ಜೈ ಹಿಂದ್..

ಬ್ರಿಗೇಡಿಯರ್ ಉಸ್ಮಾನ್ ಸಮಾಧಿ ದಕ್ಷಿಣ ದೆಹಲಿಯ ಜಾಮಿಯಾ ಇಸ್ಲಾಮಿಯಾದ ಖಬರಿಸ್ತಾನ ಬಾಟ್ಲಾ ಹೌಸ್ ಬಳಿ ಇದೆ.  50 ಪ್ಯಾರಾಚೂಟ್ ಬ್ರಿಗೇಡ್ ಮುನ್ನಡೆಸಿದ ಕೀರ್ತಿ ಬ್ರಿಗೇಡಿಯರ್ ಉಸ್ಮಾನ್‌ಗಿದೆ. ಇವರಿಗೆ ನೌಶೇರ ಕಾ ಶೇರ್ ಅನ್ನೋ ಬಿರುದು ಕೂಡ ಇದೆ. 1948ರಲ್ಲಿ ಪಾಕಿಸ್ತಾನ ವಶಪಡಿಸಿಕೊಂಡಿದ್ದ ಜಮ್ಮ ಮತ್ತು ಕಾಶ್ಮೀರದ ಭಾಗ ನೌಶೇರಾ ಹಾಗೂ ಜಹಾಂಗರ್  ವಲಯವನ್ನು ಕೈವಶ ಮಾಡಿದ್ದರು. 

18ನೇ ವಯಸ್ಸಿಗೆ ಸೈನಿಕನಾದ, 24ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧ!

ಯುದ್ಧದಲ್ಲಿ ಹುತಾತ್ಮರಾದ ಬ್ರಿಗೇಡಿಯರ್ ಉಸ್ಮಾನ್ ಅಂತ್ಯಸಂಸ್ಕಾರದಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಸೇರಿದಂತೆ ಸಂಪುಟ ಸಚಿವರು ಪಾಲ್ಗೊಂಡು ಗೌರವ ನಮನ ಸಲ್ಲಿಸಿದ್ದರು. ದೇಶದ ಹೀರೋ ಬ್ರಿಗೇಡಿಯರ್ ಉಸ್ಮಾನ್ ಸಮಾಧಿಯನ್ನು ಯಾರೋ ಕೇಡಿಗೇಡಿಗಳು ಧ್ವಂಸ ಮಾಡಿದ್ದಾರೆ.

ಈ ಸಮಾಧಿ ಸ್ಥಳ ಸರಿಯಾಗಿ ನಿರ್ವಹಣೆ ಕೂಡ ಮಾಡಿಲ್ಲ. ಎರಡೂ ಗೇಟ್‌ ದಿನದ 24 ಗಂಟೆಯೂ ತೆರೆಯುತ್ತಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ. ಇತ್ತ ಸಮಾಧಿ ಸ್ಥಳದ ನಿರ್ವಹಣೆ ಮಾಡುತ್ತಿರುವ ಜಾಮಿಯಾ ಯುನಿವರ್ಸಿಟಿ ಇದಕ್ಕೆ ನಾವು ಕಾರಣರಲ್ಲ ಎಂದಿದೆ. ಸಮಾಧಿ ಸ್ಥಳ ಮಾತ್ರ ನಾವು ನಿರ್ವಹಣೆ ಮಾಡುತ್ತೇವೆ. ಆದರೆ ಪ್ರತಿಯೊಬ್ಬರ ಸಮಾಧಿಯನ್ನು ನಾವು ನಿರ್ವಹಣೆ ಮಾಡುತ್ತಿಲ್ಲ ಎಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು