DRDOನ ದೇಶಿ ಕೋವಿಡ್‌ ಔಷಧಿ 2ಡಿಜಿ ಬಿಡುಗಡೆ!

By Suvarna News  |  First Published May 17, 2021, 9:41 AM IST

* ಡಿಆರ್‌ಡಿಒದ ದೇಶಿ ಕೋವಿಡ್‌ ಔಷಧಿ ಇಂದು ಬೆಳಗ್ಗೆ ಬಿಡುಗಡೆ

* ರಕ್ಷಣಾ ಸಚಿವ ರಾಜ್‌ನಾಥ್‌ರಿಂದ 2ಡಿಜಿ ಔಷಧಿ ಬಿಡುಗಡೆ

* ಮೊದಲ ಹಂತದಲ್ಲಿ 10000 ಪೊಟ್ಟಣ ರೋಗಿಗಳಿಗೆ ನೀಡಿಕೆ


ನವದೆಹಲಿ(ಮೇ.17): ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಹೊಸ ದೇಶಿ ಔಷಧ 2-ಡಿಜಿ ಸೋಮವಾರ ಬಿಡುಗಡೆಯಾಗಲಿದೆ. ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌, ಸೋಮವಾರ ಬೆಳಗ್ಗೆ 10.30ಕ್ಕೆ ಆನ್‌ಲೈನ್‌ ಮೂಲಕವೇ ಔಷಧವನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದಾಗಿ ತೀವ್ರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮತ್ತು ಆಕ್ಸಿಜನ್‌ ಸಿಲಿಂಡರ್‌ ಮೇಲೆ ಅವಲಂಬಿತವಾಗಿರುವ ಕೊರೋನಾ ಸೋಂಕಿತರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುವ ನಿರೀಕ್ಷೆ ಇದೆ.

2-ಡಿಆಕ್ಸಿ-ಡಿ- ಗ್ಲುಕೋಸ್‌ (2ಡಿಜಿ) ಔಷಧವನ್ನು ಡಿಆರ್‌ಡಿಒದ ನ್ಯೂಕ್ಲಿಯರ್‌ ಮೆಡಿಸಿನ್‌ ಆ್ಯಂಡ್‌ ಅಲೈಡ್‌ ಸೈನ್ಸಸ್‌ ವಿಭಾಗವು, ಹೈದ್ರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಈ ಔಷಧಿಗೆ ಈಗಾಗಲೇ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಅನುಮೋದನೆ ನೀಡಿದೆ.

Latest Videos

undefined

ಪೌಡರ್‌ ರೂಪದಲ್ಲಿ ಈ ಔಷಧವನ್ನು ನೀರಿಗೆ ಬಳಸಿ ಕುಡಿಯಬಹುದಾಗಿದೆ. ಪ್ರಾಯೋಗಿಕ ಪರೀಕ್ಷೆಗಳ ವೇಳೆ ಸೋಂಕಿತರಿಗೆ 2ಜಿಡಿ ಔಷಧವನ್ನು ನಿತ್ಯ 2 ಪ್ಯಾಕ್‌ನಂತೆ ಮೂರು ದಿನಗಳ ಕಾಲ ನೀಡಲಾಗಿತ್ತು. ಈ ವೇಳೆ ಅವರಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. ಜೊತೆಗೆ ಆಕ್ಸಿಜನ್‌ ಮೇಲಿನ ಅವಲಂಬನೆ ಕೂಡಾ ಇಳಿಕೆಯಾಗಿತ್ತು. ಹೀಗಾಗಿ ಈ ಔಷಧದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಇದಕ್ಕೆ ಎಷ್ಟುದರ ಆಗಬಹುದು ಎಂದು ಡಿಆರ್‌ಡಿಒ ಇನ್ನು ಹೇಳಿಲ್ಲ. ಆದರೆ ಪ್ರತಿ ಪೊಟ್ಟಣಕ್ಕೆ 500- 600 ರು. ದರ ಇರಬಹುದು ಎಂದು ಮೂಲಗಳು ತಿಳಿಸಿವೆ.

ಪರಿಣಾಮ ಏನು?

ಆಸ್ಪತ್ರೆಗೆ ದಾಖಲಾದ ಸೋಂಕಿತರ ಚೇತರಿಕೆ ಪ್ರಮಾಣ ತೀವ್ರ

ಹೆಚ್ಚುವರಿ ಆಕ್ಸಿಜನ್‌ ಮೇಲಿನ ರೋಗಿಗಳ ಅವಲಂಬನೆ ಇಳಿಕೆ

ಬಳಕೆ ಹೇಗೆ?

ನಿತ್ಯ 2 ಪ್ಯಾಕ್‌ನಂತೆ 3 ದಿನಗಳ ಬಳಕೆ

click me!