ಪಡಿತರ ಅಂಗಡಿ ವಾರವಿಡೀ ತೆರೆದಿಡಿ, ಅವಧಿಯೂ ವಿಸ್ತರಿಸಿ: ಕೇಂದ್ರದ ಸೂಚನೆ

Published : May 17, 2021, 07:56 AM ISTUpdated : May 17, 2021, 09:14 AM IST
ಪಡಿತರ ಅಂಗಡಿ ವಾರವಿಡೀ ತೆರೆದಿಡಿ, ಅವಧಿಯೂ ವಿಸ್ತರಿಸಿ: ಕೇಂದ್ರದ ಸೂಚನೆ

ಸಾರಾಂಶ

* ಪಡಿತರ ಅಂಗಡಿ ವಾರವಿಡೀ ತೆರೆದಿಡಿ, ಅವಧಿಯೂ ವಿಸ್ತರಿಸಿ * ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ * ಹೀಗಾಗಿ ಸುರಕ್ಷಿತ ಖರೀದಿಗಾಗಿ ಈ ಕ್ರಮ ಜಾರಿ

ನವದೆಹಲಿ(ಮೇ.17): ಪಡಿತರ ವ್ಯವಸ್ಥೆಯಡಿ ವಿತರಿಸುವ ಆಹಾರ ಪದಾರ್ಥಗಳ ಸುರಕ್ಷತೆ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಗಳು ವಾರದ ಎಲ್ಲಾ ದಿನವೂ ತೆರೆದಿರುವಂತೆ ನೋಡಿಕೊಳ್ಳಿ ಮತ್ತು ಅವುಗಳು ತೆರೆದಿರುವ ಸಮಯವನ್ನೂ ವಿಸ್ತರಿಸಿ ಎಂದು ಎಲ್ಲಾ ರಾಜ್ಯ ಸರ್ಕಾಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಲಾಕ್ಡೌನ್‌ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆದಿರುವ ಸಮಯವನ್ನು ಕಡಿತ ಮಾಡಲಾಗಿದೆ. ಹೀಗಾಗಿ ಇರುವ ಸೀಮಿತ ಅವಧಿಯಲ್ಲೇ ಖರೀದಿಯ ನಿಟ್ಟಿನಲ್ಲಿ ಜನ, ಕೋವಿಡ್‌ ನಿಯಮ ಮರೆತು ಖರೀದಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಜೊತೆಗೆ ಹಲವೆಡೆ ಜನರು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಖರೀದಿಯೂ ಸಾಧ್ಯವಾಗದೇ ಹಿಂದಿರುಗುತ್ತಿರುವ ವರದಿಗಳು ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂಥದ್ದೊಂದು ಆದೇಶ ಹೊರಡಿಸಿದೆ.

"

ಈ ಸಂಬಂಧ ಸುತ್ತೋಲೆ ಬಿಡುಗಡೆ ಮಾಡಿರುವ ಕೇಂದ್ರ ಆಹಾರ ಸಚಿವಾಲಯ, ‘ಲಾಕ್‌ಡೌನ್‌ ವೇಳೆ ನ್ಯಾಯಯುತ ಪಡಿತರ ಅಂಗಡಿಗಳ ಕಾರಾರ‍ಯವಧಿಯನ್ನು ಕಡಿತ ಮಾಡಲಾಗಿದೆ. ಆದರೆ ಇಷ್ಟುಸೀಮಿತ ಅವದಿಯಲ್ಲಿ ಎಲ್ಲಾ ಫಲಾನುಭವಿಗಳಿಗೂ ದಿನಸಿ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಿಂಗಳ ಎಲ್ಲಾ ದಿನದಲ್ಲಿಯೂ ಪಡಿತರ ಅಂಗಡಿ ತೆರೆಯುವಂತೆ ಕ್ರಮ ರೂಪಿಸಿ’ ಎಂದು ತಿಳಿಸಿದೆ.

ಕಾರಣ ಏನು?

ಸೀಮಿತ ಅವಧಿಯಲ್ಲೇ ಖರೀದಿ ಅನಿವಾರ್ಯ

ಹೀಗಾಗಿ ಕೋವಿಡ್‌ ನಿಯಮ ಮೂಲೆಗುಂಪು

ಹೀಗಾಗಿ ಸುರಕ್ಷಿತ ಖರೀದಿಗಾಗಿ ಈ ಕ್ರಮ ಜಾರಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ