ಟೆಕ್ ಕಂಪನಿಯಲ್ಲಿ ಇದ್ದ ಕೆಲಸ ಹೋಯಿತು. ಸಾಲದ ಕಂತು ಸೇರಿ ಹಲವು ಸಮಸ್ಯೆಗಳಿಂದ ಎದುರಾದ ಆರ್ಥಿಕ ಸಂಕಷ್ಟ ನೀಗಲು ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸಕ್ಕಿಳಿದ ಈತ ಇದೀಗ ತನ್ನ ಕಠಿಣ ದಿನ ನೆನೆದು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಈತನ ಕಷ್ಟದ ಜೀವನದಲ್ಲಿ ಇದೀಗ ಹೊಸ ಬೆಳಕು ಮೂಡಿದೆ.
ಜೀವನ ಹಲವು ಪಾಠ ಕಲಿಸುತ್ತೆ. ಈ ಪೈಕಿ ಸಂಕಷ್ಟ ದಿನಗಳ ಪಾಠ ಆತ್ಮವಿಶ್ವಾಸ ಮಾತ್ರವಲ್ಲ, ಎಂತಹ ಸವಾಲನ್ನು ಎದುರಿಸುವ ಧೈರ್ಯ ನೀಡಲಿದೆ. ಇದಕ್ಕೆ ತಾಳ್ಮೆ ಇರಬೇಕು ಅಷ್ಟೆ. ಇದೀಗ ಟೆಕ್ಕಿಯ ಸ್ಪೂರ್ತಿಯ ಜೀವನ ಎಲ್ಲರಿಗೂ ಮಾದರಿಯಾಗಲಿದೆ. ಕಷ್ಟ ಬಂದಾಗ ಎದೆಗುಂದದೆ ತಾಳ್ಮೆಯಿಂದ ಇದ್ದರೆ ಆ ಸಮಯ ಕಳೆದುಹೋಗಿ, ಒಳ್ಳೆಯ ದಿನ ಬರಲಿದೆ ಅನ್ನೋದಕ್ಕೆ ಈ ಟೆಕ್ಕಿಯ ಜೀವನವೇ ಉದಾಹರಣೆ. ಕೈತುಂಬ ಸಂಬಳ ಪಡೆಯುತ್ತಿದ್ದ ಟೆಕ್ಕಿ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಳ್ಳಬೇಕಾಯಿತು. ಇಎಂಐ, ಇತರ ಖರ್ಚು ವೆಚ್ಚು ಎಲ್ಲವೂ ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಕೈಯಲ್ಲಿ ದುಡ್ಡಿಲ್ಲ, ಸಾಲು ನಿಲ್ಲುತ್ತಿಲ್ಲ. ಜೀವನ ಸಾಗಿಸಲು ಟೆಕ್ಕಿ ಸ್ವಿಗ್ಗಿಯ ಡೆಲವರಿ ಬಾಯ್ ಆಗಿ ಕೆಲಸಕ್ಕೆ ಸೇರಿ ಪರಿಸ್ಥಿತಿ ನಿಭಾಯಿಸುವ ಪ್ರಯತ್ನ ಮಾಡಿದ್ದಾನೆ. ಕೆಲವೊಮ್ಮೆ ಇಡೀ ದಿನ ಓಡಾಡಿದೂ ಸಿಕ್ಕಿದ್ದು 65 ರೂಪಾಯಿ. ಆದರೆ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದ ಈ ಟೆಕ್ಕಿಯ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಇದೀಗ ಸ್ವಿಗ್ಗಿ ಡೆಲಿವರಿ ಬಾಯ್ ಕೆಲಸಕ್ಕೆ ವಿದಾಯ ಹೇಳುವಾಗ ಭಾವುಕನಾಗಿದ್ದಾನೆ. ಈ ಟೆಕ್ಕಿಯ ರೋಚಕ ಹಾಗೂ ಸ್ಪೂರ್ತಿಯ ಬದುಕು ಇಲ್ಲಿದೆ.
ರಿಯಾಝುದ್ದಿನ್ ಎ ತನ್ನ ಲಂಕ್ಡ್ಇನ್‌ನಲ್ಲಿ ಈ ಬದುಕಿ ಏಳು ಬೀಳುಗಳನ್ನು ಹೇಳಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ನನ್ನ ಜೀವನದಲ್ಲಿ ಬಿರುಗಾಳಿಯೊಂದು ಎದ್ದಿತ್ತು. ಉದ್ಯೋಗ ಕಡಿತದಿಂದ ಸಾಫ್ಟವೇರ್ ಡೆವಲ್ಪಪ್ಪರ್ ಆಗಿ ಕೆಲಸ ಮಾಡುತ್ತಿದ್ದ ನಾನು ಕಳಸ ಕಳೆದುಕೊಂಡೆ. ತಕ್ಷಣಕ್ಕೆ ಕೆಲಸ ಸಿಗಲಿಲ್ಲ. ಇತ್ತ ಹಲವು ಬಿಲ್ ಬಾಕಿ ಉಳಿಯಿತು. ಆರ್ಥಿಕ ಸಂಕಷ್ಟ ಹೆಚ್ಚಾಯಿತು. ಈ ಕಠಿಣ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ನಾನು ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಲು ನಿರ್ಧರಿಸಿದೆ. ಇದು ನನ್ನ ಆರ್ಥಿಕ ಸಂಕಷ್ಟ ಮತ್ತಷ್ಟು ಹದಗೆಡದಂತೆ ಮಾಡಲು ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ಟೆಕ್ಕಿ ಹೇಳಿಕೊಂಡಿದ್ದರೆ.
undefined
ತರಕಾರಿ ಖರೀದಿಗೆ ಪತ್ನಿ ಕೊಟ್ಟ ಚೀಟಿ ಹಂಚಿಕೊಂಡ ನಿವೃತ್ತ ಅಧಿಕಾರಿ, ನಿಮಗೂ ಬೇಕಾಗಬಹುದು ಖಚಿತ!
ಬೆಳಗ್ಗೆ ಬೇಗನೆ ಎದ್ದು ಫುಡ್ ಡೆಲಿವರಿಗಾಗಿ ಓಟ, ಮಧ್ಯಾಹ್ನ ಸೂರ್ಯನ ಬಿಸಿಸಿನಡಿಯಲ್ಲಿ ಓಟ, ಮಳೆಯನ್ನೂ ಲೆಕ್ಕಿಸದೆ ಕೆಲಸ, ತಡ ರಾತ್ರಿ ಡೆಲವರಿ. ಪ್ರತಿ ಡೆಲಿವರಿ ಹಿಂದೆ ಹಣಗಳಿಕೆ ಮಾತ್ರ ಆಗಿರಲಿಲ್ಲ. ನಾನು ಸಂಕಷ್ಟದ ದಿನಗಳಲ್ಲಿ ಧೈರ್ಯವಾಗಿ ಮುನ್ನುಗ್ಗಬೇಕಾದ ಅನಿವಾರ್ಯತೆ ಇತ್ತು. ನನ್ನ ಎಲ್ಲಾ ಬಾಗಿಲು ಮುಚ್ಚಿದಾಗ, ದೋಣಿ ಮುಳುಗುತ್ತಿದೆ ಅನ್ನೋ ಪರಿಸ್ಥಿತಿಯಲ್ಲಿ ನನಗೆ ಸ್ವಿಗ್ಗಿ ವೇದಿಕೆ ಅವಕಾಶವಾಗಿ ಬದಲಾಯಿತು. ಇದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ, ತಿರಸ್ಕಾರಗಳಿಂದ ಅವಮಾನಿತನಾಗದೆ, ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುತ್ತಾ ಪ್ರತಿ ದಿನ ಹೆಜ್ಜೆ ಹಾಕುತ್ತಿದೆ ಎಂದು ರಿಯಾಝುದ್ದೀನ್ ಹೇಳಿಕೊಂಡಿದ್ದಾರೆ.
ಸ್ವಿಗ್ಗಿ ನನ್ನ ಕಷ್ಟದ ದಿನಗಳಲ್ಲಿ ನೆರವು ನೀಡಿತು. ಸ್ವಿಗ್ಗಿ ಕೇವಲ ಆರ್ಥಿಕ ನೆರವು ಮಾತ್ರವಲ್ಲ, ನನಗೆ ಜೀವನ ಪಾಠವನ್ನೇ ಕಲಿಸಿತು. ಈ ಪೈಕಿ ಮೂರು ವಿಚಾರಗಳೆಂದರೆ ತಾಳ್ಮೆ, ನಿರಂತರತೆ ಹಾಗೂ ನಮ್ರತೆ. ಪ್ರತಿ ಆರ್ಡರ್ ನಾನು ಡೆಲಿವರಿ ಮಾಡಿದರೂ ಬದುಕಿನಲ್ಲಿ ಮತ್ತಷ್ಟು ಬಲಿಷ್ಠನಾಗುತ್ತಾ ಹೋದೆ, ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗುತ್ತಾ ಹೋಯಿತು ಎಂದಿದ್ದಾರೆ.
ಕಂಗಾಲಾದ ಬೆಂಗಳೂರು ಸಿಇಒ: ಬಾಸ್ ಪಾಸ್‌ಪೋರ್ಟ್ ಕದ್ದೊಯ್ದ ಕೆಲಸ ಕಳೆದುಕೊಂಡ ಉದ್ಯೋಗಿ!
ಇದೀಗ ಹೊಸ ಅಧ್ಯಾ ಆರಂಭಿಸುತ್ತಿದ್ದೇನೆ ಎಂದು ಅತೀವ ಸಂತೋಷ ಹಾಗೂ ಕೃತಜ್ಞತಾ ಭಾವದಿಂದ ಹೇಳುತ್ತಿದ್ದೇನೆ. ಹೊಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದೇನೆ. ಇದೀಗ ಸ್ವಿಗ್ಗಿಗೆ ವಿದಾಯ ಹೇಳುತ್ತಿದ್ದೇನೆ. ಸ್ವಿಗ್ಗಿ ನನಗೆ ಹಲವು ನೆನಪುಗಳನ್ನು ಕಟ್ಟಿಕೊಟ್ಟಿದೆ. ರಸ್ತೆಯಿಂದ, ರಸ್ತೆಯಲ್ಲಿ ಕಟ್ಟಿದ ಜೀವನ ಗಟ್ಟಿಯಾಗಿದೆ. ಈ ವೇಳೆ ನನಗೆ ಸ್ವಿಗ್ಗಿ ನೀಡಿದ ನೆರವು ನಾನು ನೆನಪಿಸಲೇ ಬೇಕು. ಯಾರಾದರೂ ತಮ್ಮ ಕಠಿಣ ದಿನಗಳು ಎದುರಿಸುತ್ತಿದ್ದರೆ ಎದೆಗುಂದಬೇಡಿ, ನನಗೆ ಜೀವನ ಕಲಿಸಿದ ಮೂರ ಪಾಠಗಳನ್ನು ನೆನಪಿನಲ್ಲಿಡಿ, ಜೀವನ ಬದಲಾಗುತ್ತೆ. ಒಳ್ಳೆಯ ದಿನಗಳು ನಿಮ್ಮನ್ನು ಅರಸಿ ಬರಲಿದೆ ಎಂದು ರಿಯಾಝುದ್ದೀನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ರಿಯಾಝುದ್ದೀನ್ ಪೋಸ್ಟ್‌ಗೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಶುಭಾಶಯಗಳ ಸುರಿಮಳೆಯಾಗಿದೆ. ಇದೇ ವೇಳೆ ಸ್ಪೂರ್ತಿಯ ಬದುಕು ಎಲ್ಲರಿಗೂ ಪಾಠವಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.