ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 32.45 ಲಕ್ಷ ಜಾಗತಿಕ ಹೂಡಿಕೆ ಸೆಳೆದ ಭಾರತ: ಪ್ರಲ್ಹಾದ್ ಜೋಶಿ

Published : Sep 18, 2024, 05:09 PM IST
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 32.45 ಲಕ್ಷ ಜಾಗತಿಕ ಹೂಡಿಕೆ ಸೆಳೆದ ಭಾರತ: ಪ್ರಲ್ಹಾದ್ ಜೋಶಿ

ಸಾರಾಂಶ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಈಗ 32.45 ಲಕ್ಷ ಕೋಟಿ ಹೂಡಿಕೆಯನ್ನು ಸೆಳೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. 

ನವದೆಹಲಿ (ಸೆ.18): ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಈಗ 32.45 ಲಕ್ಷ ಕೋಟಿ ಹೂಡಿಕೆಯನ್ನು ಸೆಳೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಗುಜರಾತ್ ನ ಗಾಂಧಿನಗರದಲ್ಲಿ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ 4ನೇ ಜಾಗತಿಕ ಸಭೆ ಮತ್ತು  EXPO ಮುಕ್ತಾಯ ಸಮಾವೇಶದಲ್ಲಿ ಮಾತನಾಡಿ, ಮೂರು ದಿನಗಳ ಈ ಐತಿಹಾಸಿಕ ಸಮಾವೇಶಕ್ಕೆ 40000 ಹೂಡಿಕೆದಾರರು ಸಾಕ್ಷಿಯಾದರು ಎಂದು ಬಣ್ಣಿಸಿದರು.

ಹಸಿರು ಇಂಧನ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕಾಗಿ ಗಣನೀಯ ಹೂಡಿಕೆ ಮಾಡಲು ಎಲ್ಲಾ ಪಾಲುದಾರರು ಮುಂದಾಗಿದ್ದಾರೆ. 2030ರ ವೇಳೆಗೆ ಶಪತ್ ಪಾತ್ರದ ರೂಪದಲ್ಲಿ 32.45 ಲಕ್ಷ ಕೋಟಿ ಮೌಲ್ಯದ ದಾಖಲೆಯ ಹೂಡಿಕೆಗೆ ವಾಗ್ದಾನವಾಗಿದೆ ಎಂದು ತಿಳಿಸಿದರು. ಡೆವಲಪರ್‌ಗಳು ಹೆಚ್ಚುವರಿ 570 GW, ತಯಾರಕರು ಸೌರ ಘಟಕಗಳಲ್ಲಿ 340 GW, ಸೌರ ಕೋಶಗಳಲ್ಲಿ 240 GW, ವಿಂಡ್ ಟರ್ಬೈನ್‌ಗಳಲ್ಲಿ 22 GW ಮತ್ತು ಎಲೆಕ್ಟ್ರೋಲೈಸರ್‌ಗಳಲ್ಲಿ 10 GW ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ತೋರಿದ್ದಾರೆ ಎಂದರು.

ಹೃದಯ ವಿದ್ರಾವಕ ಘಟನೆ: ಆಂಬ್ಯುಲೆನ್ಸ್ ಸಿಗದೆ ಬೈಕ್‌ನಲ್ಲಿ ತಂದೆಯ ಶವವನ್ನ ಸಾಗಿಸಿದ ಮಕ್ಕಳು

ಆರ್ಥಿಕತೆಗೆ ಪ್ರೇರಕ ಶಕ್ತಿ: ನವೀಕರಿಸಬಹುದಾದ ಇಂಧನ ಶಕ್ತಿಯು ಆರ್ಥಿಕತೆಗೆ ಪ್ರೇರಕ ಶಕ್ತಿಯಾಗಿದೆ ಎಂದ ಸಚಿವರು, ಭಾರತ ಜಾಗತಿಕವಾಗಿ, ವಿಶೇಷವಾಗಿ ರಿನಿವೆಬಲ್ ಎನರ್ಜಿ ವಲಯದಲ್ಲಿ ನಂಬಿಕೆಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.

ಜಗತ್ತೇ ಭಾರತವನ್ನು ಎದಿರು ನೋಡುತ್ತಿದೆ: ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಹಾದಿಯಲ್ಲಿರುವ ಭಾರತವನ್ನು ಜಗತ್ತೇ ಎದಿರು ನೋಡುತ್ತಿದೆ. ಭಾರತ ಈಗ 500 GW ಹಸಿರು ಇಂಧನ ಉತ್ಪಾದನಾ ಗುರಿಯತ್ತ ಹೆಚ್ಚು ಗಮನಹರಿಸಿದೆ ಎಂದು ಸಚಿವ ಜೋಶಿ ಘೋಷಿಸಿದರು. ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್ (IFSC Ltd): IREDA ಗಿಫ್ಟ್ ಸಿಟಿಯಲ್ಲಿ "IREDA ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್ IFSC Ltd" ಎಂಬ ಹೊಸ ಅಂಗಸಂಸ್ಥೆಯನ್ನು ಸಂಯೋಜಿಸಿದೆ ಎಂದು ತಿಳಿಸಿದರು.

ಗದಗ ಜನತಾ ದರ್ಶನದಲ್ಲಿ ಹಿರಿಯಜ್ಜಿಯ ಗತ್ತು: ಬಲಗೈನಿಂದ ಹ್ಯಾಂಡ್ ಶೇಕ್ ಮಾಡು ಅಂತಾ ಡಿಸಿಗೆ ಗದರಿದ ಅಜ್ಜಿ!

ಸಮಾರೋಪದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಖರ್ ಅವರು ಮಾತನಾಡಿ, ಜಗತ್ತಿನ ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನದ ಅಗತ್ಯವನ್ನು ಪ್ರತಿಪಾದಿಸಿದರು. ಹಸಿರು ಇಂಧನ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಭಾರತ ದೃಢವಾದ ಬದ್ಧತೆ ತೋರುತ್ತಿದ್ದು, ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಗುಜರಾತ್ ಗವರ್ನರ್ ಆಚಾರ್ಯ ದೇವವ್ರತ್, ಪಂಜಾಬ್‌ ಗವರ್ನರ್  ಗುಲಾಬ್ ಚಂದ್ ಕಟಾರಿಯಾ, ಗುಜರಾತ್ ಸಿಎಂ ಭೂಪೇಂದ್ರಭಾಯಿ ಪಟೇಲ್ ಹಾಗೂ ಸಮಾವೇಶದ ಪಾಲುದಾರ ರಾಜ್ಯಗಳು ಮತ್ತು ದೇಶಗಳು, ಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..