ಕಣ್ಣೂರಿನಲ್ಲಿ ಮದುವೆ ಮನೆಯಲ್ಲಿ ಪಟಾಕಿ ಸಿಡಿಸಿದ ಪರಿಣಾಮ 18 ದಿನದ ಮಗುವಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಮಗುವನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಕಣ್ಣೂರು (ಜ.16): ಕೇರಳದ ಕಣ್ಣೂರಿನ ಪಾನೂರು ಬಳಿಯ ತೃಪ್ಪಂಗೊತ್ತೂರಿನಲ್ಲಿ ಮದುವೆ ಮನೆಯಲ್ಲಿ ಪಟಾಕಿ ಸಿಡಿದ ನಂತರ ಪಕ್ಕದ ಮನೆಯ 18 ದಿನದ ಮಗುವಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಮಗುವನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆಯ ನಂತರ ಮತ್ತು ಸೋಮವಾರ ಮುಂಜಾವಿನ ವೇಳೆ ಕೊಳವಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಸಮಾರಂಭ ಅದ್ದೂರಿಯಾಗಿ ನಡೆದಿದೆ. ರಾತ್ರಿ ಭರ್ಜರಿ ಬ್ಯಾಂಡ್ ಪ್ರದರ್ಶನ ಮತ್ತು ಸಣ್ಣ ಪ್ರಮಾಣದ ಪಟಾಕಿಗಳು ಸಿಡಿಸಿದ್ದವು. ಮಗುವನ್ನು ನೋಡಿಕೊಳ್ಳುತ್ತಿದ್ದ ಮಹಿಳೆ, ಪಟಾಕಿ ಶಬ್ದ ಕೇಳಿದ ನಂತರ ಮಗು ಭಯಭೀತಗೊಂಡು ನಡುಗಿತು ಮತ್ತು ವಿಚಿತ್ರ ಶಬ್ದ ಮಾಡಿತು ಎಂದು ಹೇಳಿದ್ದಾರೆ.
ಹಿಂದಿನ ಸಂಜೆ, ಮನೆಯ ಹತ್ತಿರದ ಹೊಲದಲ್ಲಿ ಪಟಾಕಿಗಳು ಸಿಡಿದವು. ಸಾಮಾನ್ಯ ಪಟಾಕಿಗಳಿಗಿಂತ ಶಬ್ದ ಜೋರಾಗಿತ್ತು. ಈ ಶಬ್ದ ಕೇಳಿದ ನಂತರ ಮಗು ಸಂಪೂರ್ಣವಾಗಿ ಆತಂಕಕ್ಕೆ ಒಳಗಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪೂರ್ಣವಾಗಿ ಭಯಗೊಂಡಿದ್ದ ಮಗು ನಿರಂತರವಾಗಿ ಅಳುತ್ತಿತ್ತು. ಈ ವೇಳೆ ಮಗುವಿನ ಪಾದವನ್ನು ನೀರಿನಲ್ಲಿ ಇಳಿಸಿ ಸಮಾಧಾನ ಮಾಡಲಾಗಿತ್ತು. ಆ ನಂತರ ಮಗು ನಿದ್ರೆಗೆ ಜಾರಿತ್ತು ಎಂದಿದ್ದಾರೆ. ಮಗುವಿನ ಅಕ್ಕ ಸಹ ಪಟಾಕಿಯ ಶಬ್ದದಿಂದ ಆತಂಕಕ್ಕೆ ಒಳಗಾಗಿದ್ದಳು ಎಂದಿದ್ದಾರೆ.
Viral: ಕೇರಳ ಉತ್ಸವದ ಭಯಾನಕ ವಿಡಿಯೋ; ವ್ಯಕ್ತಿಯನ್ನ ಸೊಂಡಿಲಿನಲ್ಲಿ ಎತ್ತಿ ಗರಗರನೆ ತಿರುಗಿಸಿ ಎಸೆದ ಆನೆ!
ಮಗುವಿಗೆ ಸಮಸ್ಯೆಗಳಿದ್ದವು ಎಂದು ವರದಿಯಾಗಿದ್ದು. ಮದುವೆ ಸಮಾರಂಭದ ಗದ್ದಲವನ್ನು ಕಡಿಮೆ ಮಾಡುವಂತೆ ಮಗುವಿನ ಕುಟುಂಬದವರು ಮನವಿ ಮಾಡಿದ್ದರು. ಆದರೆ, ಅವರ ಮನವಿಯನ್ನು ಯಾರೂ ಆಲಿಸಿರಲಿಲ್ಲ.ಮಗು ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಘಟನೆಯ ಬಗ್ಗೆ ಮಗುವಿನ ತಂದೆ ಅಶ್ರಫ್ ಕೊಳವಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಂಕ್ ಸೀಲ್ ಇರುವ ಸ್ಲಿಪ್ ತೋರಿಸಿ ಫೋನ್ ಕದ್ದ ಕಳ್ಳ!