
ಮುಂಬೈ(ಜು.11): ಮುಂಬೈನ ಬೋರಿವಲಿಯಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಶನಿವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಬೋರಿವಲಿಯ ಎಸ್‌ವಿ ರಸ್ತೆಯಲ್ಲಿರುವ ಇಂದ್ರಪ್ರಸ್ತ ಮಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗ್ಗೆ 3 ಗಂಟೆಗೆ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಬಂದಿತ್ತು. ಬೇಸ್‌ಮೆಂಟ್ ಹೊರತುಪಡಿಸಿ ಮೂರು ಮಹಡಿಯ ಮಾಲ್‌ನಲ್ಲಿ ದೊಡ್ಡ ಮಟ್ಟದಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ.
26 ವರ್ಷದ ಕಿರುತೆರೆ ನಟಿಯ ಅತ್ಯಾಚಾರ; ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಪರಿಚಿತ ವ್ಯಕ್ತಿ!
ಬೇಸ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೇಲಿನ ಎರಡು ಮಹಡಿಗಳಿಗೆ ಬೆಂಕಿ ಹಬ್ಬಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಬೆಂಕಿಯ ತೀವ್ರತೆ ಆರಂಭದಲ್ಲಿ ಲೆವೆಲ್ 2 ನಲ್ಲಿದ್ದು, ನಂತರ 4 ಗಂಟೆಯ ಹೊತ್ತಿಗೆ 3ನೇ ಲೆವೆಲ್‌ಗೆ ಬಂದಿತ್ತು. ಬೆಳಗ್ಗೆ 6.25ರ ಹೊತ್ತಿಗೆ ಬೆಂಕಿಯ ತೀವ್ರತೆ ಲೆವೆಲ್ 4ರಷ್ಟಿತ್ತು.
'ಏನು ಆಗಲ್ಲ, ಮನೆಗೆ ಹೋಗಿ' ಚಿಕತ್ಸೆ ಸಿಗದೆ ಕೊರೋನಾ ಶಂಕಿತ ಉದ್ಯಮಿ ಫ್ಲಾಟ್‌ನಲ್ಲೇ ಸಾವು
ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಅಗ್ನಿ ಶಾಮಕ ರೊಬೋಟ್‌ನ್ನು ಸ್ತಳಕ್ಕೆ ಕಳುಹಿಸಲಾಗಿದೆ ಎಂದು ಮುಖ್ಯ ಅಧಿಕಾರಿ ಪಿಎಸ್ ರಹಂಗ್ಡಲೆ ತಿಳಿಸಿದ್ದಾರೆ. 14 ಫೈರ್ ಎಂಜಿನ್. 13 ಜಂಬೋ ಟ್ಯಾಂಕರ್ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ರೋಬೋಟ್ ಕೂಡಾ ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ