ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಬೆಂಕಿ

By Suvarna News  |  First Published Dec 30, 2019, 9:54 PM IST

ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಕಾಣಿಸಿಕೊಂಡ ಬೆಂಕಿ/ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ/ ಯಾವುದೇ ಅವಘಡ ಸಂಭವಿಸಿಲ್ಲ


ನವದೆಹಲಿ(ಡಿ.30)  ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಬೆಂಕಿ ಅವಘಡ ಸಂಭವಿಸಿದ ವರದಿಯಾಗಿದೆ.  ದೆಹಲಿಯ ಲೋಕಕಲ್ಯಾಣ ಮಾರ್ಗದ ಪ್ರಧಾನಿ ಅವರ ಅಧಿಕೃತ ನಿವಾಸದ ಸಮೀಪ  ಬೆಂಕಿ ಕಾಣಿಸಿಕೊಂಡಿದ್ದು ನಿಯಂತ್ರಣಕ್ಕೆ ತರಲಾಗಿದೆ.

ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸ ಅಥವಾ ಕಚೇರಿ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಮೋದಿ ಅವರಿಗೆ ಭದ್ರತೆ ಒದಗಿಸುತ್ತಿರುವ ಎಸ್‌ಪಿಜಿ ಕಚೇರಿ ಬಳಿ ಬೆಂಕಿ ಅವಘಡ ಸಂಭವಿಸಿದೆ ಎಂಬ ಸ್ಪಷ್ಟನೆ ಸಿಕ್ಕಿದೆ.

Tap to resize

Latest Videos

2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ಹೇಗಿದೆ?

ಬೆಂಕಿ ಅವಘಡದ ಬಗ್ಗೆ ಪ್ರಧಾನಿ ಕಾರ್ಯಾಲಯವು ಟ್ವೀಟ್ ಮಾಡಿದ್ದು, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಅವಘಡವು ಪ್ರಧಾನಿ ಕಚೇರಿಯ ಅಥವಾ ನಿವಾಸದ ಆವರಣದಲ್ಲಿ ಸಂಭವಿಸಿಲ್ಲ ಎಂದು ತಿಳಿಸಿದೆ. ಬೆಂಕಿ ಕಾಣಿಸಿದ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡು ಬಂದಿತು.

 

Delhi: The minor fire that broke out at Prime Minister's residence at 7 Lok Kalyan Marg, is under control now. pic.twitter.com/sARPlEud7k

— ANI (@ANI)
click me!