ಕೊರೋನಾ ಚಿಕಿತ್ಸಾ ಕೇಂದ್ರದಲ್ಲಿ ಬೆಂಕಿ: 13 ರೋಗಿಗಳು ಸಾವು

By Suvarna NewsFirst Published Apr 23, 2021, 10:50 AM IST
Highlights

ಮಹಾರಾಷ್ಟ್ರದ ಕೊರೋನಾ ಚಿಕಿತ್ಸಾ ಕೇಂದ್ರದಲ್ಲಿ ಬೆಂಕಿ | 13 ಜನ ರೋಗಿಗಳು ಸಾವು

ಮುಂಬೈ(ಏ.23): ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 13 ರೋಗಿಗಳು ಸಾವನಪ್ಪಿದ್ದಾರೆ. ವಿರಾರ್‌ನಲ್ಲಿರುವ ವಿಜಯ ವಲ್ಲಭ ಆಸ್ಪತ್ರೆಯ ಐಸಿಯುವಿನಲ್ಲಿ 15 ಜನ ರೋಗಿಗಳಿದ್ದರು. ಏಸಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಗಢ ಸಂಭವಿಸಿದೆ ಎನ್ನಲಾಗಿದೆ.

"

ಗಂಭೀರ ಸ್ಥಿತಿಯಲ್ಲಿದ್ದರೂ ಸೇರಿದಂತೆ 21 ರೋಗಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಝಕೀರ್ ಹುಸೈನ್ ಮುನ್ಸಿಪಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಲೀಕ್ ಆಗಿ 24 ರೋಗಿಗಳು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.

1700 ಡೋಸ್ ಲಸಿಕೆ ಕದ್ದಾತ ಮರಳಿ ತಂದಿಟ್ಟ: ಜೊತೆಗಿತ್ತೊಂದು ಮೆಸೇಜ್

ಪ್ರಧಾನಿ ನರೇಂದ್ರ ಮೋದಿ ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. ವಿರಾರ್‌ನ ಕೊರೋನಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಲಾಗಿದೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಆಕ್ಸಿಜನ್ ಸೋರಿಕೆಯಿಂದ ವೆಂಟಿಲೇಟರ್‌ನಲ್ಲಿದ್ದ 22 ರೋಗಿಗಳು ಸಾವು; ಪ್ರಧಾನಿ ಮೋದಿ ಸಂತಾಪ!

The fire at a COVID-19 hospital in Virar is tragic. Condolences to those who lost their loved ones. May the injured recover soon: PM

— PMO India (@PMOIndia)
click me!