ನೇಪಾಳಿ ಪ್ರಜೆಯ ಕೂದಲು ಬೋಳಿಸಿ ವಿಕೃತಿ ಮೆರೆದ ವಿಶ್ವ ಹಿಂದೂ ಸೇನೆ, FIR ದಾಖಲು

Published : Jul 18, 2020, 09:06 PM IST
ನೇಪಾಳಿ ಪ್ರಜೆಯ ಕೂದಲು ಬೋಳಿಸಿ ವಿಕೃತಿ ಮೆರೆದ ವಿಶ್ವ ಹಿಂದೂ ಸೇನೆ, FIR ದಾಖಲು

ಸಾರಾಂಶ

ಶ್ರೀರಾಮ ನೇಪಾಳಿ ಇಷ್ಟೇ ಅಲ್ಲ ನಿಜವಾದ ಆಯೋಧ್ಯ ಇರುವುದು ನೇಪಾಳದಲ್ಲಿ ಅನ್ನೋ ನೇಪಾಳ ಪ್ರಧಾನಿ ಕೆಪಿ ಶರ್ಮಾ ಹೇಳಿಕೆ ಭಾರತದಲ್ಲಿ ಆಕ್ರೋಷ ಹೆಚ್ಚಾಗಿದೆ. ಇದೇ ಹೇಳಿಕೆ ಬೆನ್ನಲ್ಲೇ ವಾರಾಣಸಿಯಲ್ಲಿನ ನೇಪಾಳಿ ಪ್ರಜೆ ಮೇಲೆ ವಿಶ್ವ ಹಿಂದೂ ಸೇನೆ ವಿರುದ್ಧ ಕೇಸ್ ದಾಖಲಾಗಿದೆ. 

ವಾರಣಸಿ(ಜು.17): ಭಾರತದ ಜೊತೆ ಗಡಿ ಖ್ಯಾತೆ ತೆಗೆದ ನೇಪಾಳ ಬಳಿಕ ಶ್ರೀರಾಮ ನೇಪಾಳಿ, ಆಯೋಧ್ಯೆ ಇರುವುದು ನೇಪಾಳದಲ್ಲಿ ಎಂಬ ಹೇಳಿಕೆ ನೀಡಿತ್ತು. ಇದು ಭಾರತೀಯರ ಆಕ್ರೋಷಕ್ಕೆ ಕಾರಣವಾಗಿತ್ತು. ಈ ಹೇಳಿಕೆ ಬೆನ್ನಲ್ಲೇ ವಾರಣಸಿ ವಿಶ್ವ ಹಿಂದೂ ಸೇನೆ, ನೇಪಾಳಿ ಪ್ರಜೆ ಮೇಲೆ ಹಲ್ಲೆ ಮಾಡಿದೆ. ನೇಪಾಳಿ ಪ್ರಧಾನಿ ಹೇಳಿಕೆಯಿಂದ ಕೆರಳಿದ ವಿಶ್ವ ಹಿಂದೂ ಸೇನೆ ಹಲ್ಲೆ ನಡೆಸಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ವಿಶ್ವ ಹಿಂದೂ ಸೇನೆ ವಿರುದ್ಧ ಪ್ರಕರಣ ದಾಖಲಾಗಿದೆ.

'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ

ವಾರಣಸಿಯಲ್ಲಿನ ನೇಪಾಳಿ ಪ್ರಜೆ ಮೇಲೆ ವಿಶ್ವ ಹಿಂದೂ ಸೇನೆ ಹಲ್ಲೆ ಮಾಡಿದೆ. ನೇಪಾಳಿ ಪ್ರಧಾನಿ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು, ನೇಪಾಳಿಗರು ಭಾರತದಿಂದಲೇ ತೊಲಗಬೇಕು ಎಂದು ವಿಶ್ವ ಹಿಂದೂ ಸೇನೆ ಸಂಸ್ಥಾಪಕ ಅರುಣ್ ಪಾತಕ್ ನೇಪಾಳಿ ಪ್ರಜೆಯ ತಲೆ ಕೂದಲು ಬೋಳಿಸಿದ್ದಾರೆ. ಇಷ್ಟೇ ಅಲ್ಲ ಹಿಂದೂಸ್ಥಾನ್ ಜಿಂದಾಬಾದ್, ಜೈ ಶ್ರೀರಾಮ್ ಎಂಬ ಹೇಳಿಕೆಯನ್ನು ನೀಡಿಲು ಬೆದರಿಸಲಾಗಿದೆ. . ಈ ವೇಳೆ ಇತರ ಕಾರ್ಯಕರ್ತರೂ ಸಾಥ್ ನೀಡಿದ್ದಾರೆ. ವಿಡಿಯೋ ಆಧರಿಸಿ ಇದೀಗ ಪೊಲೀಸರು ಅರುಣ್ ಪಾತಕ್ ಹಾಗೂ ಹಲವರ ಮೇಲೆ ಕೇಸ್ ದಾಖಲಾಗಿದೆ.

ರಾಮನ ಕುರಿತ ಓಲಿ ಹೇಳಿಕೆಗೆ ನೇಪಾಳದಲ್ಲೇ ತೀವ್ರ ಟೀಕೆ!

ಭೇಲುಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಪಾಳಿ ಪ್ರಧಾನಿ ಹೇಳಿಕೆಯನ್ನು ಉಲ್ಲೇಖಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಇಷ್ಟೇ ಅಲ್ಲ ನೇಪಾಳಿ ಪ್ರಧಾನಿ ವಿರುದ್ಧ ಘೋಷಣೆಗಳನ್ನೂ ಕೂಗಲಾಗಿದೆ.  ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಹಲ್ಲೆ , ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಭಾರತದಲ್ಲಿರುವ ಪ್ರತಿಯೊಬ್ಬರಿಗೂ ರಕ್ಷಣೆ ನೀಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ ಎಂದು ವಾರಣಸಿ ಸಿಟಿ ಪೊಲೀಸ್ SP ಚಂದ್ರ ತ್ರಿಪಾಠಿ ಹೇಳಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಧಾನಿ ಮೋದಿ, ಅಮಿತ್‌ ಶಾ ಜೊತೆ ರಾಹುಲ್‌ ಗಾಂಧಿ 90 ನಿಮಿಷದ ಅಪರೂಪದ ಸಭೆ, ಚರ್ಚೆ ಆಗಿದ್ದೇನು?
ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?