ಇವಿಎಂ ಹ್ಯಾಕ್ ಮಾಡಬಲ್ಲೆಎಂದವನಿಗೆ ಶಾಕ್ ಕೊಟ್ಟ ಪೊಲೀಸರು

Published : Dec 02, 2024, 08:53 AM IST
ಇವಿಎಂ ಹ್ಯಾಕ್ ಮಾಡಬಲ್ಲೆಎಂದವನಿಗೆ ಶಾಕ್ ಕೊಟ್ಟ ಪೊಲೀಸರು

ಸಾರಾಂಶ

ಇವಿಎಂ ಹ್ಯಾಕ್ ಮಾಡಬಲ್ಲೆ ಎಂದು ಹೇಳಿಕೆ ನೀಡಿದ್ದ ವ್ಯಕ್ತಿಯ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್‌ ದಾಖಲು. ಸೈಯದ್ ಶುಜಾ ಎಂಬಾತನ ವಿರುದ್ಧ ಮಹಾರಾಷ್ಟ್ರ ಚುನಾವಣಾ ಆಯೋಗದ ದೂರಿನ ಮೇರೆಗೆ ಕ್ರಮ.

ನವದೆಹಲಿ: ತಾನು ಇವಿಎಂ (ವಿದ್ಯುನ್ಮಾನ ಮತಯಂತ್ರ) ಹ್ಯಾಕ್‌ ಮಾಡಬಲ್ಲೆ ಎಂದು ಹೇಳಿರುವ ವ್ಯಕ್ತಿಯ ವಿರುದ್ಧ ಮುಂಬೈನ ಸೈಬರ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಸೈಯದ್‌ ಶುಜಾ ಎನ್ನುವ ವ್ಯಕ್ತಿ ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಬಹುದು , ತಿರುಚಬಹುದು ಎಂದು ಹೇಳಿರುವ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆದರೆ ಇದು ಸುಳ್ಳು, ಆಧಾರ ರಹಿತ ಎಂದು ಸ್ಪಷ್ಟಪಡಿಸಿ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ, ಐಟಿ ಕಾಯ್ದೆಯಡಿ ದಕ್ಷಿಣ ಮುಂಬೈನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

‘2019ರಲ್ಲಿ ಶಾಜಾ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ದೆಹಲಿಯಲ್ಲಿ ಅವರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಆತ ಬೇರೆ ದೇಶದಲ್ಲಿ ತಲೆ ಮರೆಸಿಕೊಂಡಿರಬಹುದು’ ಎಂದು ಮಹಾರಾಷ್ಟ್ರದ ಚುನಾವಣಾ ಆಯೋಗ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: ಸಂಭಲ್‌ ಮಸೀದಿ ನಿಯಂತ್ರಣಕ್ಕೆ ಮನವಿ ಸಲ್ಲಿಸಿದ ASI; ಭಾರತದ ಮುಸ್ಲಿಮರ ಸ್ಥಿತಿ ಬಾಂಗ್ಲಾ ಹಿಂದೂಗಳ ರೀತಿ ಎಂದ ಮುಫ್ತಿ

ಸೋನಿಯಾ ಗಾಂಧಿ ವಿರುದ್ಧ ನಜ್ಮಾ ಹೇಳಿಕೆ
‘1999ರಲ್ಲಿ ಅಂತರ್‌ ಸಂಸದೀಯ ಒಕ್ಕೂಟದ (ಐಪಿಯು) ಅಧ್ಯಕ್ಷೆಯಾಗಿ ಆಯ್ಕೆಯಾದ ವಿಚಾರವನ್ನು ತಿಳಿಸಲು ಬರ್ಲಿನ್‌ನಿಂದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಫೋನ್‌ ಮಾಡಿದ್ದೆ. ಆದರೆ ಅವರ ಸಿಬ್ಬಂದಿ ಮೇಡಂ ಬ್ಯುಸಿ ಇದ್ದಾರೆ ಎಂದು ಹೇಳಿ ಒಂದು ಗಂಟೆ ಕಾಯಿಸಿದ್ದರು’ ಎಂದು ಮಾಜಿ ರಾಜ್ಯಸಭೆ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಹೇಳಿದ್ದಾರೆ.

ತಮ್ಮ ಆತ್ಮಚರಿತ್ರೆ ‘ದಿ ಪರ್ಸ್ಯೂಟ್‌ ಆಫ್‌ ಡೆಮಾಕ್ರೆಸಿ: ಬಿಯಾಂಡ್‌ ಪಾರ್ಟಿ ಲೈನ್ಸ್‌’ನಲ್ಲಿ ಈ ಬಗ್ಗೆ ಬರೆದಿರುವ ಅವರು, ‘ಐಪಿಯು ಅಧ್ಯಕ್ಷೆಯಾಗಿ ಆಯ್ಕೆಯಾದಾಗ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಫೋನ್‌ ಮಾಡಿ ಭಾರತಕ್ಕೆ, ಮುಸ್ಲಿಂ ಮಹಿಳೆಗೆ ಬಂದ ಗೌರವಕ್ಕೆ ಹೆಮ್ಮೆ ಪಟ್ಟಿದ್ದರು. ಸೋನಿಯಾ ಗಾಂಧಿಗೆ ವಿಚಾರ ಹೇಳಲು ಫೋನ್ ಮಾಡಿದಾಗ ಸಿಬ್ಬಂದಿ ‘ಮೇಡಂ ಬ್ಯುಸಿ’ ಆಗಿದ್ದಾರೆ ಎಂದರು. ಬರ್ಲಿನ್‌ನಿಂದ ಅಂತರಾಷ್ಟ್ರೀಯ ಕರೆ ಮಾಡಿದ್ದೇನೆ ಎಂದರೂ ಒಂದು ಗಂಟೆ ಕಾಯಿಸಿದರು’ ಎಂದು ಕಿಡಿಕಾರಿದ್ದಾರೆ.  ಕೆಲವು ವರ್ಷ ಹಿಂದೆ ನಜ್ಮಾ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು.

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!