
ಶ್ರೀನಗರ (ನ.04) ಫಿಸಿಕ್ಸ್ ವಾಲ್ಲಾ ಮೂಲಕ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುವ ಸಂಸ್ಥೆ ಭಾರತದ ಅತೀ ದೊಡ್ಡ ಎಜುಕೇಶನ್ ಟೆಕ್ ಕಂಪನಿಯಾಗಿ ಬೆಳೆದು ನಿಂತಿದೆ. ಆನ್‌ಲೈನ್ ಮೂಲಕ ಕೋಚಿಂಗ್ ನೀಡುವ ಫಿಸಿಕ್ಸ್ ವಾಲ್ಲಾ, ಫಿಸಿಕ್ಸ್, ಮ್ಯಾಥ್ಯ್ ಸೇರಿದಂತೆ ಎಲ್ಲಾ ವಿಷಗಳನ್ನು ಅರೆದು ಕುಡಿದರೂ ಕಾನೂನು ಮರೆತೆ ಬಿಟ್ಟಿದೆ. ಇದರ ಪರಿಣಾಮ ಫಿಸಿಕ್ಸ್ ವಾಲ್ಲಾ ವಿರುದ್ದ ದೂರು ದಾಖಲಾಗಿದೆ. ಇಷ್ಟೇ ಅಲ್ಲ ಸಂಕಷ್ಟ ತೀವ್ರಗೊಂಡಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಕಾರಣ ಫಿಸಿಕ್ಸ್ ವಾಲ್ಲಾ ಸಂಕಷ್ಟಕ್ಕೆ ಸಿಲುಕಿದೆ.
ಫಿಸಿಕ್ಸ್ ವಾಲ್ಲಾ ಕೋರ್ ಸದಸ್ಯರ ಗುಂಪಿನ ಓರ್ವ ಸದಸ್ಯ ಕಾಶ್ಮೀರದ ಸುಂದರ ತಾಣದಲ್ಲಿ ಜಾಹೀರಾತು ಶೂಟ್ ಮಾಡಿದ್ದಾರೆ. ಹೊಚ್ಚ ಹೊಸ 6 ಮಹೀಂದ್ರ ಸ್ಕಾರ್ಪಿಯೋ ಕಾರುಗಳನ್ನು ಮೂಲಕ ಕಾಶ್ಮೀರದ ಅತ್ಯಂತ ಪ್ರಸಿದ್ಧ ಬುದರ್‌ಕೂಟ್ ತಾಣದಲ್ಲಿ ಜಾಹೀರಾತು ವಿಡಿಯೋ ಶೂಟ್ ಮಾಡಲಾಗಿದೆ. ಈ ವಿಡಿಯೋವನ್ನು ಫಿಸಿಕ್ಸ್ ವಾಲ್ಲಾ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೇ ವಿಡಿಯೋ ಸಂಕಷ್ಟ ತಂದಿದೆ. ಕಾಶ್ಮೀರದ ಅರಣ್ಯಾಧಿಕಾರಿ ಫಿಸಿಕ್ಸ್ ವಾಲ್ಲಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಗಂಭೀರ ಸ್ವರೂಪ ಪಡೆದುಕೊಂಡಿದೆ.
ಬುದರ್‌ಕೂಟ್ ಪ್ರದೇಶ ಅತ್ಯಂತ ಸುಂದರ ತಾಣವಾಗಿದೆ. ಆದರೆ ಇದು ಹಲವ ಅತ್ಯಮೂಲ್ಯ ಸಸ್ಯ ಸಂಪತ್ತಿನ ತಾಣ. ಅತೀ ವಿರಳ ಮರ, ಗಿಡಗಳು, ಔಷಧಿ ಸಸ್ಯಗಳು ಸೇರಿದಂತೆ ಭಾರತದ ಅತ್ಯಂತ ಮೌಲ್ಯಯುತ ಸಸ್ಯ ಸಂಪತ್ತಿ ತಾಣ. ಇಲ್ಲಿ ಆಫ್ ರೋಡ್ ಚಾಲನೆ ನಿಷಿದ್ದ. ಇದು ಕಾಡು ಹಾಗೂ ಸಸ್ಯಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅರಣ್ಯ ಕಾಯ್ದೆ ಪ್ರಕಾರ ಸಂರಕ್ಷಿತ ಅರಣ್ಯದಲ್ಲಿ ಆಫ್ ರೋಡ್ ನಡೆಸುವಂತಿಲ್ಲ, ಅನುಮತಿ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ವಿಶೇಷವಾಗಿ ಬುದರ್‌ಕೂಟ್ ತಾಣದಲ್ಲಿ ವಾಹನ ಚಾಲನೆ, ವಾಹನದಲ್ಲಿ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಇದು ನಿರ್ಬಂಧಿತ ಪ್ರದೇಶ, ಇಲ್ಲಿ ಬೇಕಾಬಿಟ್ಟಿ ನಡೆದುಕೊಳ್ಳುವಂತಿಲ್ಲ. ಆದರೆ ಈ ಪ್ರದೇದಲ್ಲಿ ಸಸ್ಯ ಸಂಪತ್ತಿನ ಮೇಲೆ 6 ಕಾರುಗಳನ್ನು ಡ್ರೈವ್ ಮಾಡಲಾಗಿದೆ. ಬಳಿಕ ಹಲವು ಸದಸ್ಯರು, ತಂತ್ರಜ್ಞರು ಈ ಸಸ್ಯ ಸಂಪತ್ತಿನ ಮೇಲೆ ವಿಡಿಯೋ ಶೂಟ್‌ಗಾಗಿ ಓಡಾಡಿದ್ದಾರೆ. ಆಫ್ ರೋಡ್ ಡ್ರೈವ್ ಮಾಡಿದ್ದಾರೆ ಎಂದು ಗುಲ್‌ಮಾರ್ಗ್‌ನ ಫಾರೆಸ್ಟ್ ರೇಂಜ್ ಅಫೀಸರ್ ಇಫ್ತಿಕರ್ ಅಹಮ್ಮದ್ ಖಾದ್ರಿ ದೂರು ನೀಡಿದ್ದಾರೆ.
6 ಸ್ಕಾರ್ಪಿಯೋ ಕಾರುಳು ಯಾವ ಕಾರಿಗೂ ನಂಬರ್ ಪ್ಲೇಟ್ ಇಲ್ಲ, ಈ ವಾಹನಗಳು ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಸೂಚನೆ ಇಲ್ಲದೆ, ಯಾರಿಂದಲೂ ಅನುಮತಿ ಪಡೆಯದೇ ಆಫ್ ರೋಡ್ ಮೂಲಕ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಇಲ್ಲಿನ ನಿಯಮ, ಸಂರಕ್ಷಿತ ಪ್ರದೇಶದ ಸಂರಕ್ಷಣೆ ಹಾಗೂ ಅಭಿವೃದ್ಧಿ ನೀತಿಗಳ ಕುರಿತು ಉಲ್ಲೇಖಿಸಿ ದೂರು ದಾಖಲಿಸಿದ್ದಾರೆ. ವಿಡಿಯೋ ವೆರಿಫಿಕೇಶನ್ ಮಾಡಲಾಗಿತ್ತು ಬುದರ್‌ಕೂಟ್‌ನಲ್ಲ ಶೂಟ್ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ