
ಪಾಟ್ನಾ (ನ.04) ಬಿಹಾರ ವಿಧಾನಸಭೆ ಚುನಾವಣೆಯ ಕಳೆಗಟ್ಟಿದೆ. ಇಂದು (ನ.04) ಬಹಿರಂಗ ಪ್ರಚಾರಕ್ಕೆ ಕೊನೆ.ಹೀಗಾಗಿ ಎಲ್ಲಾ ನಾಯಕರು ಬಿಹಾರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ರಾಹುಲ್ ಗಾಂಧಿ ಕೂಡ ಬಿಹಾರದಲ್ಲಿ ಬದಲಾವಣೆ ಮಾಡಲು ಮತದಾರರಲ್ಲಿ ಮನವಿ ಮಾಡಿದ್ದಾರೆ. ಆದರೆ ರಾಹುಲ್ ಗಾಂದಿ ಭಾಷಣ ಭಾರಿ ವಿವಾದ ಸೃಷ್ಟಿಸಿದೆ. ಈ ದಶದಲ್ಲಿ ಕೇವಲ ಶೇಕಡಾ 10 ರಷ್ಟಿರುವ ಮೇಲು ಜಾತಿಯ ಸಮುದಾಯ ಭಾರತೀಯ ಸೇನೆಯನ್ನು ನಿಯಂತ್ರಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಆದರೆ ಈ ಮಾತುಗಳು ರಾಹುಲ್ ಗಾಂಧಿ ಬಾಯಿತಪ್ಪಿನಿಂದ ಬಂದಿದ್ದಲ್ಲ, ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಕಾರಣ ನೆರೆ ದೇಶಗಳ ಮಾಡೆಲ್.
ಬಿಹಾರದ ಔರಂಗಬಾದ್‌ನಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಭಾರತೀಯ ಸೇನೆ ವಿರುದ್ದ ಮಾತನಾಡಿದ್ದಾರೆ. ಮೇಲು ಜಾತಿಯವರೇ ಭಾರತೀಯ ಸೇನೆಯನ್ನು ನಿಯಂತ್ರಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು, ಬ್ಯೂರೋಕ್ರಸಿ, ಕಾರ್ಪೋರೇಟ್ ಕಂಪನಿ, ನ್ಯಾಯಾಂಗ ವ್ಯವಸ್ಥೆಯಲ್ಲೂ ಇದೇ ಮೇಲು ಜಾತಿಯವರೇ ಇದ್ದಾರೆ. ಭಾರತೀಯ ಸೇನೆ ಕೂಡ ಇದೇ ಶೇಕಡಾ 10ರಷ್ಟಿರುವ ಮೇಲು ಜಾತಿಯವರೇ ನಿಯಂತ್ರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇನ್ನುಳಿದ ಹಿಂದುಳಿದ ವರ್ಗ, ದಲಿತರು, ಪರಿಶಿಷ್ಠ ಜಾತಿ ಹಾಗೂ ಪಂಗಡ, ಅಲ್ಪ ಸಂಖ್ಯಾತರು ಸೇರಿದಂತೆ ಶೇಕಡಾ 90 ರಷ್ಟು ಮಂದಿ ಎಲ್ಲೂ ಇಲ್ಲ. ಎಲ್ಲರಿಗೂ ಸಮಾನ ಅವಕಾಶ ಬೇಕು. ಇದಕ್ಕಾಗಿ ಜಾತಿ ಗಣತಿಗೆ ವಿರೋಧ ಪಕ್ಷ ಆಗ್ರಹಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಭಾರತೀಯ ಸೇನೆಯಲ್ಲಿ ಜಾತಿ ಹುಡುಕುವ ಕೆಲಸ ಮಾಡಿ ವಿವಾದ ಮಾಡಿದ್ದಾರೆ. ಭಾರತೀಯ ಸೇನೆಯನ್ನು ಮೇಲು ಜಾತಿಯವರು ನಿಯಂತ್ರಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಭಾರತೀಯ ವೀರ ಯೋಧರಿಗೆ, ಸೇನೆಗೆ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಈ ವಿವಾದ ಸೃಷ್ಟಿಸಿದ್ದಾರೆ. ಪ್ರಕರಣ ದಾಖಲಾದರೆ ಕೋರ್ಟ್‌ನ್ಲಿ ಕ್ಷಮೆ ಕೇಳಿ ಮತ್ತೆ ಅಬ್ಬರಿಸುತ್ತಾರೆ. ಕಾರಣ ಭಾರತ್ ಜೋಡೋ ಯಾತ್ರೆಯಲ್ಲಿ ಚೀನಾ ಸೇನೆ ಭಾರತೀಯ ಯೋಧರನ್ನು ಅಪ್ಪಚ್ಚಿ ಮಾಡಿದ್ದರು ಎಂದು ಹೇಳಿ ಬಳಿಕ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದರು.
ರಾಹುಲ್ ಗಾಂಧಿ ಯುುವ ಸಮೂದಾಯ ರೀಚ್ ಆಗಲು ಕಳೆದ ಕೆಲ ವರ್ಷಗಳಿಂದ ಕಸರತ್ತು ನಡೆಸುತ್ತಿದ್ದಾರೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ಆಗಿರುವ ಗಲಭೆಗಳ ರೀತಿ ಭಾರತದಲ್ಲೂ ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರಾ ಅನ್ನೋ ಅನುಮಾನಗಳು ಬಲವಾಗುತ್ತಿದೆ. ದೇಶದ ಶೇಕಡಾ 90 ರಷ್ಟಿರುವ ಇತರ ಸಮುದಾಯ, ಜಾತಿಗಳ ಮಂದಿಗೆ ಏನೂ ಇಲ್ಲ, ಎಲ್ಲಾ ಮೇಲು ಜಾತಿಯವರೇ ನಿಯಂತ್ರಿಸುತ್ತಿದ್ದಾರೆ. ಸೇನೆ ಕೊಡ ಹೊರತಾಗಿಲ್ಲ ಎಂದು ಹೇಳಿರುವ ರಾಹುಲ್ ಜೆನ್‌ಜಿ ಸಮೂಹ ಭಾರತೀಯ ಸೇನೆ ಮೇಲೆ ತಿರುಗಿ ಬೀಳುವಂತೆ ಮಾಡುತ್ತಿದ್ದಾರಾ? ಯುವ ಸಮುದಾಯವನ್ನು ಬೀದಿಗಿಳಿದು ಪ್ರತಿಭಟನೆ ಮಾಡಲು ಪ್ರಚೋದನೆ ಮಾಡುತ್ತಿದ್ದಾರಾ? ಈ ಕುರಿತು ರಾಹುಲ್ ಗಾಂಧಿ ನೀಡಿರುವ ಈ ಹಿಂದಿನ ಹೇಳಿಕೆಗಳು ಭಾರಿ ವಿವಾದ ಸೃಷ್ಟಿಸಿದೆ. ಇದೀಗ ನೆರೆ ರಾಷ್ಟ್ರಗಳಂತೆ ಭಾರತದಲ್ಲೂ ಕ್ರಾಂತಿಗೆ ರಾಹುಲ್ ಗಾಂಧಿ ಮುನ್ನಡಿ ಬರೆಯುತ್ತಿದ್ದಾರಾ ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ