ಜಾಮೀನಿಗೆ ಅರ್ಹತೆ ಇದ್ದರೂ ದುಡ್ಡಿಲ್ಲದೇ ಜೈಲಲ್ಲಿರುವ ಕೈದಿಗಳ ಬಿಡುಗಡೆಗೆ ಕೇಂದ್ರದಿಂದ ಆರ್ಥಿಕ ನೆರವು

By Kannadaprabha NewsFirst Published Feb 22, 2024, 10:44 AM IST
Highlights

ಜಾಮೀನು ಪಡೆಯುವ ಅವಕಾಶ ಇದ್ದರೂ, ಅದಕ್ಕೆ ಅಗತ್ಯವಾದ ಹಣ ನೀಡಲು ಸಾಧ್ಯವಾಗದೇ ಜೈಲಲ್ಲೇ ಕೊಳೆಯುತ್ತಿರುವ ಕೈದಿಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. 

ನವದೆಹಲಿ: ಜಾಮೀನು ಪಡೆಯುವ ಅವಕಾಶ ಇದ್ದರೂ, ಅದಕ್ಕೆ ಅಗತ್ಯವಾದ ಹಣ ನೀಡಲು ಸಾಧ್ಯವಾಗದೇ ಜೈಲಲ್ಲೇ ಕೊಳೆಯುತ್ತಿರುವ ಕೈದಿಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. 

ಇಂಥ ಕೈದಿಗಳ ಜಾಮೀನು ಹಣ ಪಾವತಿಗೆ 20 ಕೋಟಿ ರು. ಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಅಲ್ಲದೆ ಈ ಸಂಬಂಧ ರಾಜ್ಯಗಳಿಗೆ ಮಾರ್ಗ ಸೂಚಿ ಬಿಡುಗಡೆ ಮಾಡಿದ್ದು, ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ಉನ್ನತಾಧಿಕಾರಿಗಳ ಸಮಿತಿ ಸ್ಥಾಪಿಸುವಂತೆ ತಿಳಿಸಿದೆ. ಜೊತೆಗೆ ರಾಜ್ಯಕ್ಕೊಬ್ಬರಂತೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲು ಸೂಚಿಸಿದೆ. ನೋಡಲ್ ಅಧಿಕಾರಿಗಳು ಕೇಂದ್ರ ಗ್ರಹ ಇಲಾಖೆಯ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೂ ನೋಡಲ್ ಅಧಿಕಾರಿಯೊಂದಿಗೆ ಸಂಪರ್ಕಿಸಿ ಕಾರ್ಯನಿರ್ವಹಿಸಲಿದ್ದಾರೆ.

ಭಾರತವಲ್ಲದೇ 12 ವಿದೇಶಗಳಲ್ಲೂ ಈ ವರ್ಷ ನೀಟ್‌ ಪರೀಕ್ಷೆ ಆಯೋಜನೆ: ಎನ್‌ಟಿಎ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ ಒಂದು ತಿಂಗಳು ಪೂರ್ಣ

ಅಯೋಧ್ಯೆ: ಇಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಯಾಗಿ ಫೆ.22ರ ಗುರುವಾರಕ್ಕೆ ಒಂದು ತಿಂಗಳು ತುಂಬಲಿದೆ. ಆದರೆ ತಿಂಗಳಾದರೂ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಕುಸಿತ ಕಂಡಿಲ್ಲ. ಈಗಲೂ ಪ್ರತಿನಿತ್ಯ 1ರಿಂದ 2 ಲಕ್ಷ ಜನರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್‌ ಹೇಳಿದೆ.

ಅಯೋಧ್ಯೆಯನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಸುಮಾರು 12 ಕಿ.ಮೀ.ವರೆಗೂ ಬಸ್‌ಗಳು ಸಾಲುಗಟ್ಟಿ ನಿಂತಿವೆ. ಸಾಂಪ್ರಾದಾಯಿಕ ಉಡುಗೆಗಳನ್ನು ತೊಟ್ಟ ಲಕ್ಷಾಂತರ ಭಕ್ತರು ದೇಶದ ವಿವಿಧ ಮೂಲೆಗಳಿಂದ ನಿತ್ಯವೂ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಎಡಭಾಗದಲ್ಲಿ ನಡೆದು ಹೋಗಲು ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಮುಸ್ಲಿಮರ ಸೆಳೆಯಲು ಬಿಜೆಪಿ ಹೊಸ ತಂತ್ರ: ಉರ್ದು, ಅರೇಬಿಕ್‌ ಭಾಷೆಗಳಲ್ಲಿ ಪ್ರಚಾರ

ನಿತ್ಯ 1-2 ಲಕ್ಷ ಮಂದಿ ಭೇಟಿ:

ದೇವಸ್ಥಾನದ ಟ್ರಸ್ಟ್‌ ನೀಡಿರುವ ಮಾಹಿತಿಯ ಪ್ರಕಾರ ಈಗಲೂ ಪ್ರತಿನಿತ್ಯ 1ರಿಂದ 2 ಲಕ್ಷ ಮಂದಿ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಮೊದಲ 10 ದಿನದಲ್ಲೇ ಸುಮಾರು 25 ಲಕ್ಷ ಮಂದಿ ರಾಮನ ದರ್ಶನ ಪಡೆದಿದ್ದರು. ಈವರೆಗೆ ಸುಮಾರು 50ರಿಂದ 60 ಲಕ್ಷ ಮಂದಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ನ್ಯಾಯಾಂಗದ ಭೀಷ್ಮ, ನೀರಾವರಿ ಹೋರಾಟದ ಧ್ವನಿ ನಾರಿಮನ್‌ : ಐಎಎಸ್ ಆಗಬೇಕೆಂದುಕೊಂಡಿದ್ದವರು ವಕೀಲರಾದರು

click me!