ಚುನಾವಣಾ ಬಾಂಡ್‌ಗೂ, ತನಿಖಾ ಸಂಸ್ಥೆಗಳ ದಾಳಿಗೂ ಲಿಂಕ್‌.. ಏನಂದ್ರು ನಿರ್ಮಲಾ ಸೀತಾರಾಮನ್‌?

By Santosh NaikFirst Published Mar 15, 2024, 3:04 PM IST
Highlights

ತನಿಖಾ ಸಂಸ್ಥೆಗಳ ದಾಳಿಗೂ ಅದರ ಬೆನ್ನಲ್ಲಿಯೇ ಆ ಸಂಸ್ಥೆಗಳು ಚುನಾವಣಾ ಬಾಂಡ್‌ ಖರೀದ ಮಾಡಿದ್ದನ್ನು ಲಿಂಕ್‌ ಮಾಡುವುದು ಬರೀ ಊಹೆಯಷ್ಟೇ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 


ನವದೆಹಲಿ (ಮಾ.15): ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಬಾಂಡ್‌ಗಳ ವಿವರಗಳಲ್ಲಿರುವ ಕನಿಷ್ಠ 30 ಕಂಪನಿಗಳ ಪೈಕಿ 15 ಕಂಪನಿಗಳ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳು ದಾಳಿ ಮಾಡಿವೆ. ಅದರ ಬೆನ್ನಲ್ಲಿಯೇ ಈ ಕಂಪನಿಗಳು ಚುನಾವಣಾ ಬಾಂಡ್‌ ಖರೀದಿ ಮಾಡಿ ಪಕ್ಷಗಳಿಗೆ ನೀಡಿವೆ. ಇದರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಪಾಲು ದೊಡ್ಡದಾಗಿದೆ ಎನ್ನುವ ಆರೋಪಗಳ ಮಧ್ಯೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ವಿಚಾರಾಗಿ ಮಾತನಾಡಿದ್ದಾರೆ.  ಕೇಂದ್ರದ ತನಿಖಾ ಸಂಸ್ಥೆಗಳ ದಾಳಿಗೂ, ಚುನಾವಣಾ ಬಾಂಡ್‌ ಖರೀದಿ ಮಾಡಿದ್ದಕ್ಕೂ ಲಿಂಕ್‌ ಮಾಡುವುದು ಬರೀ ಊಹಾತ್ಮಕ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯು "ಸಂಪೂರ್ಣವಾಗಿ ಅಪೂರ್ಣ" ಎಂದು ಸೀತಾರಾಮನ್ ಹೇಳಿದರು. 2013 ರಲ್ಲಿ ಯುಪಿಎ ಸರ್ಕಾರವು ಪರಿಚಯಿಸಿದ ಚುನಾವಣಾ ಟ್ರಸ್ಟ್ ಯೋಜನೆಯನ್ನು ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ದಾಳಿಯ ನಂತರ ಈ ಕಂಪನಿಗಳು ಹಣವನ್ನು ನೀಡಿದೆ ಎಂಬ ದೊಡ್ಡ ಊಹೆಗಳನ್ನು ನೀವು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಸೀತಾರಾಮನ್ ಹೇಳಿದ್ದಾರೆ. ಚುನಾವಣಾ ಬಾಂಡ್‌ಗಳ ವಿವರದ ಕುರಿತಾದ ಮಾಹಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. ಕಂಪನಿಗಳು ಚುನಾವಣಾ ಬಾಂಡ್‌ಗೆ ಹಣ ನೀಡಿದ ನಂತರೂ ಜಾರಿ ನಿರ್ದೇಶನಾಲಯ ಅವರ ಮೇಲೆ ಮತ್ತೆ ದಾಳಿ ಮಾಡಿದ್ದಲ್ಲಿ ಅದನ್ನು ನೀವು ಏನನ್ನುತ್ತೀರಿ? ಜಾರಿ ನಿರ್ದೇಶನಾಲಯ ಕಂಪನಿಗಳ ಮೇಲೆ ದಾಳಿ ಮಾಡುತ್ತದೆ. ಕಂಪನಿಗಳ ಮಾಲೀಕರು ಇದರಿಂದ ಬಚಾವ್‌ ಆಗಲು, ಚುನಾವಣಾ ಬಾಂಡ್‌ ಖರೀದಿ ಮಾಡುತ್ತಾರೆ ಎನ್ನುವುದು ಎಲ್ಲರ ಊಹಾಪೋಹವಷ್ಟೇ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇನ್ನೊಂದು ನಿಮ್ಮ ಊಹೆ ಏನೆಂದರೆ, ಈ ಕಂಪನಿಗಳನ್ನು ಹಣವನ್ನು ಬಿಜೆಪಿಗೇ ನೀಡಿದ್ದಾರೆ ಅನ್ನೋದು. ಅವರು ಪ್ರಾದೇಶಿಕ ಪಕ್ಷಗಳಿಗೆ ಯಾಕೆ ಈ ಹಣವನ್ನು ನೀಡಿರಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.

ಗುರುವಾರ, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾಹಿತಿಯನ್ನು ಪಡೆದ ನಂತರ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಪ್ರಕಟಿಸಿದೆ. ಶುಕ್ರವಾರ, ರಾಜಕೀಯ ಪಕ್ಷಗಳು ಸ್ವೀಕರಿಸಿದ ಚುನಾವಣಾ ಬಾಂಡ್‌ಗಳ ವಿಶಿಷ್ಟ ಆಲ್ಫಾ-ಸಂಖ್ಯೆಯ ಸಂಖ್ಯೆಗಳನ್ನು ಬಹಿರಂಗಪಡಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಬ್ಯಾಂಕ್‌ನ ಪ್ರತಿಕ್ರಿಯೆಯನ್ನು ಕೇಳಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸೀತಾರಾಮನ್, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ, ತೀರ್ಪು ಬಂದಿದೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏನು ಮಾಡಬೇಕೋ ಅದನ್ನು ಸಲ್ಲಿಸಲಿದೆ. ನನಗಿಂತ ಹಿಂದೆ ಹಣಕಾಸು ಸಚಿವರಾಗಿದ್ದವರು (ಮಾಜಿ ಸಚಿವ ಅರುಣ್‌ ಜೇಟ್ಲಿ) ಈ ಯೋಜನೆಯನ್ನು ಜಾರಿಗೆ ತಂದಿದ್ದಾಗ ಏನು ಹೇಳಿದ್ದರು ಅನ್ನೋದನ್ನೂ ಕೂಡ ನಾನು ಎಲ್ಲರಿಗೂ ನೆನಪಿಸುತ್ತೇನೆ. ಈ ವ್ಯವಸ್ಥೆ ಹಿಂದಿನ ಎಲ್ಲಾ ವ್ಯವಸ್ಥೆಗಿಂತ ಉತ್ತಮವಾಗಿದೆ. ಏಕೆಂದರೆ, ಇಲ್ಲಿ ಹಣ ಒಬ್ಬರ ಖಾತೆಯಿಂದಲೇ ಪಕ್ಷದ ಖಾತೆಗಳಿಗೆ ಹೋಗುತ್ತದೆ ಎಂದಿದ್ದರು. ಚುನಾವಣಾ ಬಾಂಡ್‌ಗಳ ವಿಚಾರದಲ್ಲಿಯೂ ಹಾಗೆಯೇ ಆಗಿದೆ' ಎಂದಿದ್ದಾರೆ.

Electoral bonds: ಎಸ್‌ಬಿಐ, ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿಯ 10 ಪ್ರಮುಖ ಅಂಶಗಳು

ಹಾಗಂತ ಇದು ಪರಿಪೂರ್ಣ ವ್ಯವಸ್ಥೆಯೇ ಎಂದು ಕೇಳಿದರೆ, ಅದಕ್ಕೆ ನಾನು ಇಲ್ಲ ಎಂದೇ ಹೇಳುತ್ತೇನೆ. ಸಂಪೂರ್ಣವಾಗಿ ಅಪೂರ್ಣವಾಗಿರುವ ವ್ಯವಸ್ಥೆಯಿಂದ  ಪರಿಪೂರ್ಣವಲ್ಲದ ವ್ಯವಸ್ಥೆಯೊಂದಕ್ಕೆ ನಾವು ಬಂದಿದ್ದೇವೆ ಎಂದಷ್ಟೇ ಹೇಳುತ್ತೇನೆ ಎಂದಿದ್ದಾರೆ.

ಚುನಾವಣಾ ಬಾಂಡ್‌ಗೆ ಗರಿಷ್ಠ ದೇಣಿಗೆ ನೀಡಿದ Future Gaming and Hotel Services ಬಗ್ಗೆ ಇಲ್ಲಿದೆ ಮಾಹಿತಿ!

click me!