West Bengal ಬಿಜೆಪಿ ಸರ್ಕಾರದ ಭಯ; ಜನರ ದಾಳಿ ಭೀತಿಗೆ ಹೆದರಿ ಲಂಚದ ಹಣ ವಾಪಸ್‌ ಕೊಟ್ಟ ಟಿಎಂಸಿ ಪುಡಾರಿಗಳು! (ವಿಡಿಯೋ)

Kannadaprabha News   | Kannada Prabha
Published : Jun 03, 2026, 06:46 AM IST
Fear of BJP Government and pubic outraged West Bengal TMC Leaders Return cut money Amid

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಾನೂನು ಕ್ರಮ ಮತ್ತು ಜನರ ದಾಳಿಯ ಭೀತಿಯಿಂದ ಟಿಎಂಸಿ ನಾಯಕರು ತಾವು ಪಡೆದಿದ್ದ 'ಕಟ್ ಮನಿ' ಅಥವಾ ಲಂಚದ ಹಣವನ್ನು ಫಲಾನುಭವಿಗಳಿಗೆ ಹಿಂದಿರುಗಿಸುತ್ತಿದ್ದಾರೆ. ಇದರೊಂದಿಗೆ, ಟಿಎಂಸಿಯಲ್ಲಿ ಆಂತರಿಕ ಭಿನ್ನಮತ ತೀವ್ರ

ಕೋಲ್ಕತಾ (ಜೂ.3): ಪಶ್ಚಿಮ ಬಂಗಾಳ(West Bengal)ದಲ್ಲಿ ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬಂದ ಬೆನ್ನಲ್ಲೇ ಒಂದೆಡೆ ಅಕ್ರಮ ಬಾಂಗ್ಲಾ ವಲಸಿಗರು(Illegal Bangladeshi immigrants) ದೇಶ ತೊರೆಯುತ್ತಿದ್ದರೆ, ಮತ್ತೊಂದೆಡೆ ಹಿಂದಿನ ಮಮತಾ ಸರ್ಕಾರ(Mamata government)ದ ಅವಧಿಯಲ್ಲಿ ಜನರಿಂದ ಹಣ ಲೂಟಿ ಮಾಡಿದ್ದ ಟಿಎಂಸಿ(TMC) ಪುಡಾರಿಗಳು, ತಾವು ಪಡೆದಿದ್ದ ಹಣವನ್ನು ಜನರಿಗೆ ಮರಳಿಸುತ್ತಿದ್ದಾರೆ. ಸರ್ಕಾರದ ಕಾನೂನು ಕ್ರಮ ಮತ್ತು ಜನರಿಂದ ದಾಳಿಯ ಭೀತಿಗೆ ಒಳಗಾದ ಟಿಎಂಸಿ ನಾಯಕರು ಹೀಗೆ ಲಂಚದ ಹಣ ಮರಳಿಸುತ್ತಿರುವ ಅತ್ಯರೂಪದ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗಿದೆ.

ಬಂಗಾಳದ ಬಿಜೆಪಿ ಸರ್ಕಾರ (West Bengal BJP Govt), ಭ್ರಷ್ಟಾಚಾರ ಆರೋಪ ಹೊರಿಸಿ ಇತ್ತೀಚೆಗೆ ಕೆಲ ಟಿಎಂಸಿ ನಾಯಕರನ್ನು ಬಂಧಿಸಿತ್ತು. ಜತೆಗೆ ಈ ಹಿಂದೆ ಹಣಕ್ಕೆ ಗೂಂಡಾಗಿರಿ ಮಾಡಿದ್ದ ಹಲವು ಟಿಎಂಸಿ ನಾಯಕರ ಮೇಲೆ ಜನರೇ ದಾಳಿ ನಡೆಸಿದ ಹಲವು ಘಟನೆಗಳು ನಡೆದಿದ್ದವು. ಅದರ ಬೆನ್ನಲ್ಲೇ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ವಸೂಲಿ ಮಾಡಿದ ಕಮಿಷನ್‌ ಹಣವನ್ನು ತಾವಾಗಿಯೇ ಹಿಂತಿರುಗಿಸುತ್ತಿದ್ದಾರೆ.

ಇಲ್ಲಿನ ದಕ್ಷಿಣ-24 ಪರಗಣ ಜಿಲ್ಲೆ ನಾಮ್‌ಖಾನಾದಲ್ಲಿ ಸ್ಥಳೀಯ ಟಿಎಂಸಿ ನಾಯಕರೊಬ್ಬರು, ‘ಪ್ರಧಾನ ಮಂತ್ರಿ ವಸತಿ ಯೋಜನೆಯಡಿ(Prime Minister's Housing Scheme) ಮನೆ ಕೊಡಿಸುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ 45 ಮಂದಿಯಿಂದ ಕಮಿಷನ್‌ ರೂಪದಲ್ಲಿ ತಲಾ 5000 ರು. ಸುಲಿಗೆ ಮಾಡಿದ್ದರು ಎನ್ನಲಾಗಿತ್ತು.

ಇದೀಗ ಆ ನಾಯಕ, ತಾನು ಪೀಕಿದ್ದ ತಲಾ 5000 ರು. ಹಣವನ್ನು, ಎಲ್ಲ 45 ಫಲಾನುಭವಿಗಳಿಗೂ ಸೋಮವಾರ ಬಹಿರಂಗವಾಗಿಯೇ ವಾಪಸ್‌ ನೀಡಿದ್ದಾನೆ.

ಇನ್ನು ಪಚಗಢ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಕೀರರ್ ಕುಥಿ ಎಂಬಲ್ಲಿ ಪಂಚಾಯತ್‌ ಸದಸ್ಯರೊಬ್ಬರು ಶಾಲಾ ಮೈದಾನದಲ್ಲಿ ಜನರನ್ನು ಒಟ್ಟು ಸೇರಿಸಿ ಹಣ ಮರಳಿಸಿದ್ದಾರೆ. ಇನ್ನು ಕೆಲ ಕಡೆ ಸುಲಿಗೆ ಹಣ ಪಡೆದಿದ್ದ ಟಿಎಂಸಿ ನಾಯಕರು ನಾಪತ್ತೆಯಾಗಿದ್ದಾರೆ. ಆದರೆ ಬಂಧನಕ್ಕೆ ಭಯ ಬಿದ್ದು ಅವರ ಪೋಷಕರು ಫಲಾನುಭವಿಗೆ ಹಣ ಮರಳಿಸಿರುವ ಬಗ್ಗೆಯೂ ವರದಿಯಾಗಿದೆ.

ಶಿವಸೇನೆ ರೀತಿಯಲ್ಲಿ ಟಿಎಂಸಿ 2 ಹೋಳು? ಶಾಸಕಾಂಗ ಪಕ್ಷದಲ್ಲಿ ಭಾರಿ ಒಡಕು

ಕೋಲ್ಕತಾ: ಬಂಗಾಳದ ರಾಜಕೀಯ ದಿನಕ್ಕೊಂದು ಸ್ಫೋಟಕ ತಿರುವು ತೆಗೆದುಕೊಳ್ಳುತ್ತಿದ್ದು, ಮಮತಾ ಬ್ಯಾನರ್ಜಿ ಅವರ ಟಿಎಂಸಿ ವಿಭಜನೆಯ ಹಂತಕ್ಕೆ ಹೋಗಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರು ಹೇಗೆ ಶಿವಸೇನೆ ವಿಭಜಿಸಿದರೋ ಆ ರೀತಿ ಟಿಎಂಸಿ ವಿಭಜನೆ ಆಗಬಹುದು ಎಂಬ ಗುಲ್ಲು ಹರಿದಾಡುತ್ತಿದೆ.ಮಮತಾ ವಿರೋಧಿ ಬಣವಾದ ಉಚ್ಚಾಟಿತ ಟಿಎಂಸಿ ಶಾಸಕ ರಿತಬೃತ ಬಂಡೋಪಾಧ್ಯಾಯ ಅವರಿಗೆ 50 ಶಾಸಕರ ಬೆಂಬಲವಿದೆ ಎಂದು ಮತ್ತೊಬ್ಬ ಉಚ್ಚಾಟಿತ ನಾಯಕ ರಿಜು ದತ್ತಾ ಹೇಳಿಕೊಂಡಿದ್ದಾರೆ. ಇದು ಪಕ್ಷದ ವಿಭಜನೆಯ ಸೂಚಕ ಎಂದು ವಿಶ್ಲೇಷಿಸಲಾಗಿದೆ.

ಏನಿದು ಕಟ್‌ ಮನಿ?

ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಜನರಿಂದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರು ಸಾಕಷ್ಟು ಹಣ ವಸೂಲಿ ಮಾಡಿದ್ದರು ಎನ್ನಲಾಗಿತ್ತು, ಇದಕ್ಕೆ ‘ಕಟ್‌ ಮನಿ’ ಅಥವಾ ‘ಕಮಿಷನ್‌ ಹಣ’ ಅಥವಾ ‘ಸುಲಿಗೆ ಹಣ’ ಎನ್ನಲಾಗುತ್ತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ಹೊಸ ಸರ್ಕಾರ ರಚನೆ: ದೆಹಲಿಯಲ್ಲಿ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕಾಗಿ ಲಾಬಿ
ಕಾಂಗ್ರೆಸ್​ನ​ 72 ವರ್ಷಗಳ ದಾಖಲೆ ಮುರಿದು ಬೀಗಿದ ಪ್ರಧಾನಿ ನರೇಂದ್ರ ಮೋದಿ: ಏನಿದು ರೆಕಾರ್ಡ್​