2 ವರ್ಷದ ಮಗಳನ್ನು ಎತ್ತಿಕೊಂಡು ಭಂಗಿ ಜಂಪ್‌: ಅಪ್ಪನ ನಡೆಗೆ ನೆಟ್ಟಿಗರ ಕ್ಲಾಸ್

Published : Jun 20, 2025, 11:32 AM ISTUpdated : Jun 20, 2025, 11:38 AM IST
bangee jump

ಸಾರಾಂಶ

ತಂದೆಯೊಬ್ಬ ತನ್ನ ಎರಡು ವರ್ಷದ ಮಗಳೊಂದಿಗೆ ಬಂಗೀ ಜಂಪ್ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ 2018 ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದು, ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಗುವಿನ ಸುರಕ್ಷತೆಯ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ತಂದೆಯೊಬ್ಬ ತನ್ನ ಎರಡು ವರ್ಷದ ಪುಟ್ಟ ಮಗಳನ್ನು ಹಿಡಿದುಕೊಂಡು ಬಂಗಿ ಜಂಪ್ ಮಾಡಿದ್ದು, ಈ ಆಘಾತಕಾರಿ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಂಗಿ ಜಂಪ್‌ ಒಂದು ಸಾಹಸ ಕ್ರೀಡೆಯಾಗಿದ್ದು, ಇದನ್ನು ಮಾಡಲು ಡಬಲ್ ಗುಂಡಿಗೆ ಬೇಕು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಾವು ಪಕ್ಕಾ. ಭಾರೀ ಎತ್ತರದಿಂದ ಸೊಂಟಕ್ಕೆ ಹಗ್ಗ ಕಟ್ಟಿ ಆಳವಾದ ಪ್ರಪಾತಕ್ಕೆ ತಳ್ಳಿ ಬಿಡಲಾಗುತ್ತದೆ. ಇಂತಹ ಸಾಹಸ ಮಾಡುವ ವೇಳೆ ಅಪ್ಪನೋರ್ವ ತನ್ನ ಎರಡು ವರ್ಷದ ಪುಟ್ಟ ಮಗುವನ್ನು ಕೂಡ ಎತ್ತಿಕೊಂಡು ಹಾರಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಅಂದಹಾಗೆ ಇದು 2018ರಲ್ಲಿ ಮಲೇಷ್ಯಾದಲ್ಲಿ ನಡೆದ ಘಟನೆಯಾಗಿದೆ. ಆ ಸಂದರ್ಭದಲ್ಲಿ ಈ ವೀಡಿಯೋ ಮಲೇಷ್ಯಾದ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಇದರಲ್ಲಿ ಮಲೇಷ್ಯಾದ ರಿಯಾಲಿಟಿ ಸ್ಟಾರ್ ಮೊಹಮ್ಮದ್ ರೆಧಾ ರೋಜ್ಲಾನ್, ತನ್ನ ಎರಡು ವರ್ಷದ ಮಗಳನ್ನು ಹಿಡಿದುಕೊಂಡು 200 ಅಡಿ ಎತ್ತರದ ಸೇತುವೆಯಿಂದ ಬಂಗಿ ಜಂಪ್ ಮಾಡುವುದನ್ನು ತೋರಿಸಲಾಗಿದೆ. ಮೊಹಮ್ಮದ್ ರೆಧಾ ರೋಜ್ಲಾನ್ 2014 ರಲ್ಲಿ ಫಿಯರ್ ಫ್ಯಾಕ್ಟರ್ ಮಲೇಷ್ಯಾ ಚಾಂಪಿಯನ್ ಆಗಿ ಮತ್ತು ಜಪಾನಿನ ಮನರಂಜನಾ ಕಾರ್ಯಕ್ರಮ ನಿಂಜಾ ವಾರಿಯರ್‌ನಲ್ಲಿ ಸ್ಪರ್ಧಿಯಾಗಿ ಖ್ಯಾತಿ ಭಾರಿ ಖ್ಯಾತಿ ಗಳಿಸಿದರು.

ಈ ವೀಡಿಯೋದಲ್ಲಿ ಅವರು ಪುಟ್ಟ ಮಗಳು ಮೆಕ್ಕಾಳನ್ನು ಎದೆಗಪ್ಪಿಕೊಂಡು 200 ಮೀಟರ್ ಆಳಕ್ಕೆ ಹಾರುವುದನ್ನು ಕಾಣಬಹುದಾಗಿದೆ. ಜನರ ಆತಂಕಕ್ಕೆ ಮತ್ತೊಂದು ಕಾರಣ ಅವರು ತಮ್ಮ ಪುಟ್ಟ ಮಗಳಿಗೆ ಯಾವುದೇ ರಕ್ಷಣಾ ಉಪಕರಣಗಳಾದ ಹೆಲ್ಮೆಟ್ ಆಗಲಿ ಬೆಲ್ಟ್‌ ಆಗಲಿ ಧರಿಸದೇ ಇರುವುದು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮೊಹಮ್ಮದ್ ರೆಧಾ ಹುಚ್ಚುತನಕ್ಕೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೀಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮತ್ತೆ ಈ ಅಪ್ಪನ ವಿರುದ್ಧ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈ ರೀತಿ ಪುಟ್ಟ ಮಗುವನ್ನು ಎತ್ತಿಕೊಂಡು ಸಾಹಸ ಮಾಡಿ ಮಗುವಿನ ಜೀವಕ್ಕೆ ಅಪಾಯ ತಂದೊಡ್ಡಿದ್ದ ಈತನನ್ನು ಬಂಧಿಸಬೇಕು ಎಂದು ಜನ ಆಗ್ರಹಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಮೊಹಮ್ಮದ್ ಅವರ ಪುಟ್ಟ ಮಗು ಭಯಭೀತವಾದಂತೆ ಕಾಣುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಮಗುವಿನ ಪೋಷಕರು ಹಾಗೂ ಈ ಬಂಗೀ ಜಂಪ್ ನಿರ್ವಹಕರನ್ನು ಬಂಧಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಇದು ಕ್ರಿಮಿನಲ್ ಕೃತ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಬಹಳ ಆಘಾತಕಾರಿಯಾಗಿದೆ ಈ ಮಗುವಿಗೆ ಏನಾಗಲಿದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವಷ್ಟು ವಯಸ್ಸಾಗಿದೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ಮತ್ತೊಬ್ಬರು ಹೇಳಿದರು.

ಇನ್ನು ತಮ್ಮ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಮೊಹಮ್ಮದ್, ತನ್ನ ಮಗಳು ತನ್ನೊಂದಿಗೆ ಬಂಗೀ ಜಂಪ್ ಮಾಡಲು ಬಯಸಿದ್ದಳು ಎಂದು ಪ್ರತಿಕ್ರಿಯಿಸಿದ್ದಾರೆ. ಫ್ರೀ ಮಲೇಷ್ಯಾ ಟುಡೇಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರುನನ್ನೊಂದಿಗೆ ಜಿಗಿತವನ್ನು ಮಾಡಲು ಮೆಕ್ಕಾ ಬಯಸಿದ್ದಳು, ಆಕೆಗೆ ಯಾವುದೇ ಬಲವಂತವಿರಲಿಲ್ಲ. ಅವಳು ತನ್ನ ಮೊದಲ ಜಿಗಿತವನ್ನು ಆನಂದಿಸಿದಳು ಮತ್ತು ಅದನ್ನು ಮತ್ತೆ ಮಾಡಲು ವಿನಂತಿಸಿದಳು. ಆದರೆ ನನಗೆ ಭಯವಾಯಿತು. ಅವಳು ಸಂಪೂರ್ಣ ಸುರಕ್ಷತಾ ಸರಂಜಾಮು ಮತ್ತು ಗೇರ್ ಅನ್ನು ಸಹ ಧರಿಸಿದ್ದಳು ಎಂದು ಅವರು ಹೇಳಿದ್ದಾರೆ.

ಹಾಗೆಯೇ ಈ ಅಪ್ಪ ಮಗಳ ಸಾಹಸವನ್ನು ಆಯೋಜಿಸಿದ ಮಲೇಷ್ಯಾದ ರೆಂಟಾಸ್ ಅಡ್ವೆಂಚರ್ಸ್ ಗುಂಪಿನ ನಿರ್ವಾಹಕರಾದ ಮೊಹಮ್ಮದ್ ಶಫಿಯಾ ಅಜ್ಮಿ ಅವರು ಕೂಡ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದು, ಯಾರಾದರೂ ಜಿಗಿಯುವ ಮೊದಲು ನಮ್ಮ ಸಿಬ್ಬಂದಿ ಉಪಕರಣಗಳನ್ನು ಪರಿಶೀಲಿಸುತ್ತಾರೆ. ಇದು ಸುರಕ್ಷತೆಯು ಒಂದು ಕಾಳಜಿ, ಏಕೆಂದರೆ ಈ ಚಟುವಟಿಕೆಯು ಮಲೇಷ್ಯಾದಲ್ಲಿ ಇದೇ ಮೊದಲನೆಯದು. ವಿಶೇಷವಾಗಿ ಸುರಕ್ಷತಾ ಹಗ್ಗಗಳಂತಹ ಬಳಸುವ ಸಲಕರಣೆಗಳಲ್ಲಿ, ಅರ್ಹ ಸೇವಾ ಪೂರೈಕೆದಾರರನ್ನು ತೊಡಗಿಸಿಕೊಳ್ಳುವ ಮೂಲಕ ನಾವು ಸುರಕ್ಷತಾ ಅವಶ್ಯಕತೆಗಳನ್ನು ಪಾಲಿಸುತ್ತೇವೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಹಾಗೆಯೇ ಮಲೇಷ್ಯಾದ ಮಕ್ಕಳ ಹಕ್ಕುಗಳ ವಕೀಲರಾದ ಗೋಹ್ ಸಿಯು ಲಿನ್, ಪೋಷಕರು ತಮ್ಮ ಚಿಕ್ಕ ಮಗಳನ್ನು ಇಂತಹ ಅಪಾಯಕಾರಿ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕ ಕಳಪೆ ವಿವೇಚನೆಯನ್ನು ತೋರಿಸಿದ್ದಾರೆ ಎಂದು ಟೀಕಿಸಿದರು. ಬಂಗಿ ಜಂಪಿಂಗ್ ಒಂದು ಅಪಾಯಕಾರಿ ಕ್ರೀಡೆಯಾಗಿದ್ದು, ಇದು ವಿಶೇಷವಾಗಿ ಚಿಕ್ಕ ಮಗುವಿಗೆ ಗಾಯ/ಭಯದ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಆ ವಯಸ್ಸಿನ ಮಕ್ಕಳು ಇಂತಹ ಸಾಹಸಗಳಲ್ಲಿ ಭಾಗಿಯಾಗುವುದು ಅಸಾಮಾನ್ಯ ಮತ್ತು ಅಸುರಕ್ಷಿತವಾಗಿದೆ. ದೈಹಿಕ ಅಪಾಯಗಳ ಹೊರತಾಗಿ, ಹಠಾತ್ ಕುಸಿತದಿಂದಾಗಿ ಮಗು ಭಾವನಾತ್ಮಕ ಆಘಾತ ಅಥವಾ ಭಯವನ್ನು ಸಹ ಅನುಭವಿಸಬಹುದು ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..