ನಾಗರ ಕೊಂದ ತಂದೆ, 15 ಗಂಟೆಯೊಳಗೆ ಮಗನ ಕೊಂದು ಸೇಡು ತೀರಿಸಿಕೊಂಡ ನಾಗಿಣಿ

Published : Apr 09, 2022, 03:43 PM ISTUpdated : Apr 09, 2022, 03:51 PM IST
ನಾಗರ ಕೊಂದ ತಂದೆ, 15 ಗಂಟೆಯೊಳಗೆ ಮಗನ ಕೊಂದು ಸೇಡು ತೀರಿಸಿಕೊಂಡ ನಾಗಿಣಿ

ಸಾರಾಂಶ

ಹಾವಿನ ದ್ವೇಷ ವರ್ಷಾನುಗಟ್ಟಲೇ ಇರುತ್ತದೆ. ಅದರಲ್ಲೂ ಸಂಗಾತಿಯನ್ನು ಕೊಂದ ಸರ್ಪ ಆ ಸಾವಿಗೆ ಸೇಡು ಪಡೆದೇ ತೀರುತ್ತದೆ ಎಂಬ ಮಾತುಗಳಿವೆ. ಸದ್ಯ ಭೋಪಾಳ್‌ನಲ್ಲಿ ಈ ಮಾತನ್ನು ನಿಜವಾಗಿಸಿದ ಶಾಕಿಂಗ್ ಘಟನೆ ವರದಿಯಾಗಿದೆ. 

ಭೋಪಾಳ್(ಏ.09): ನಾಗ-ನಾಗಿಣಿ ಇವುಗಳ ಜೋಡಿಯಲ್ಲಿ ಒಂದನ್ನು ಕೊಂದರೆ, ಜೀವಂತವಾಗಿ ಉಳಿದಿರುವ ಹಾವು ಅಪಾಯಕಾರಿಯಾಗಿ ಸೇಡು ತೀರಿಸಿಕೊಳ್ಳುತ್ತದೆ ಎನ್ನಲಾಗುತ್ತದೆ. ಏಕೆಂದರೆ ಅದು ತನ್ನ ಸಂಗಾತಿಯನ್ನು ಕೊಂದಾತನ ಮುಖವನ್ನು ತನ್ನ ಮುಖವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತದೆ. ಎಷ್ಟೇ ವರ್ಷಗಳಾದರೂ ಅದು ತನ್ನ ಸೇಡು ಇಟ್ಟುಕೊಂಡಿರುತ್ತದೆ. ಈ ವಿಚಾರವನ್ನು ನಿಜವಾಗಿಸುವ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಸೆಹೋರ್ ನಿಂದ ಬೆಳಕಿಗೆ ಬಂದಿದೆ. ಇದನ್ನು ಕೇಳಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಇಲ್ಲಿ ವ್ಯಕ್ತಿಯೊಬ್ಬ ಹಾವನ್ನು ಹೊಡೆದು ಸಾಯಿಸಿದ್ದಾನೆ. ಮರುದಿನ ಅಂದರೆ 15 ವರ್ಷಗಳ ನಂತರ ಬದುಕಿದ್ದ ಸರ್ಪ ಆತನ ಮಗನನ್ನು ಕಚ್ಚಿದೆ. ಈ ಕಾದಾಟದಲ್ಲಿ ಮಗು ಸಾವನ್ನಪ್ಪಿದೆ.

ರಾತ್ರಿ ಎರಡು ಗಂಟೆಗೆ ಮಗುವನ್ನು ಕಚ್ಚಿ ಸೇಡು ತೀರಿಸಿಕೊಂಡ ಸರ್ಪ

ವಾಸ್ತವವಾಗಿ, ಸಿನಿಮಾ ಶೈಲಿಯಲ್ಲಿ ಈ ಆಘಾತಕಾರಿ ಘಟನೆ ಸೆಹೋರ್ ಜಿಲ್ಲೆಯ ಜೋಶಿಪುರ ಗ್ರಾಮದಿಂದ ನಡೆದಿದೆ. ಇಲ್ಲಿನ ನಿವಾಸಿ ಹಾಗೂ ಕೂಲಿ ಕಾರ್ಮಿಕ ಕಿಶೋರಿ ಲಾಲ್ ನವರಾತ್ರಿಯ ಆಭರಣಗಳನ್ನು ತಮ್ಮ ಮನೆಯಲ್ಲಿ ಇಟ್ಟಿದ್ದರು. ಈ ನಡುವೆ ಗುರುವಾರ ಅವರ ಮನೆ ಬಳಿ ಹಾವು ಕಾಣಿಸಿಕೊಂಡಿದೆ. ಇದನ್ನು ಕಂಡು ಭಯಭೀತರಾದ ಕಿಶೋರಿ ಲಾಲ್ ದೊಣ್ಣೆಯಿಂದ ಆ ನಾಗರ ಹಾವನ್ನು ಹೊಡೆದು ಕೊಂದು ಕಾಡಿಗೆ ಎಸೆದಿದ್ದಾನೆ. ಆದರೆ ಅದೇ ದಿನ ಇತ್ತ ಕಿಶೋಲಿ ಲಾಲ್ 12 ವರ್ಷದ ಮಗ ರೋಹಿತ್‌ಗೆ ಮತ್ತೊಂದು ಹಾವು ಕಚ್ಚಿದೆ.

ಎಂಥಾ ಧೈರ್ಯ... ಅಂಗೈ ಮೇಲೆ ಹಾವಿಗೆ ನೀರು ಕುಡಿಸಿದ ವ್ಯಕ್ತಿ

ಚಿಕಿತ್ಸೆ ನೀಡಿದರೂ ಹಾವಿನ ವಿಷ ಹೊರಬರಲಿಲ್ಲ

ಅದೇ ದಿನ ರಾತ್ರಿ ಎರಡು ಗಂಟೆಗೆ ಮಲಗಿದ್ದ ರೋಹಿತ್‌ಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎದ್ದು ಬಂದು ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಮಗನ ಮಾತು ಕೇಳಿ ಮನೆಯವರು ಮತ್ತಷ್ಟು ಭಯಗೊಂಡಿದ್ದಾರೆ. ಇಡೀ ಗ್ರಾಮದಲ್ಲಿ ಈ ವಿಚಾರ ಸಂಚಲನ ಮೂಡಿಸಿದೆ. ಕುಟುಂಬದ ಸದಸ್ಯರು ಅವರನ್ನು ತಂತ್ರಿ ಬಳಿ ಕರೆದೊಯ್ದು ಭೂತೋಚ್ಚಾಟನೆ ಆರಂಭಿಸಿದ್ದಾರೆ. ಆದರೆ ಅವರ ಆರೋಗ್ಯ ಹದಗೆಟ್ಟಾಗ ಅವರನ್ನು ನರ್ಮದಾಪುರಂ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಪರಿಸ್ಥಿತಿ ನೋಡಿದ ವೈದ್ಯರು ಅವರನ್ನು ಭೋಪಾಲ್‌ಗೆ ಕಳುಹಿಸಿದ್ದಾರೆ. ಆದರೆ ಮನೆಯವರು ಭೋಪಾಲ್‌ಗೆ ತೆರಳದೆ ರೋಹಿತ್ ನನ್ನು ಊರಿಗೆ ವಾಪಸ್ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ವಿಷ ದೇಹವಿಡೀ ವ್ಯಾಪಿಸಿ ರೋಹಿತ್ ಸಾವನ್ನಪ್ಪಿದ್ದಾನೆ.

ಆಗ ಗ್ರಾಮದ ಜನರು ಸರ್ಪವನ್ನು ಕೊಂದರು

ಮಗುವಿನ ಸಾವಿನ ನಂತರ ಗ್ರಾಮಸ್ಥರಲ್ಲಿ ಸಂಚಲನ ಉಂಟಾಗಿದ್ದು, ನಾಗರಹಾವಿನ ಭಯ ಆವರಿಸಿದೆ. ಇದಾದ ನಂತರ ಮಗುವನ್ನು ಕಚ್ಚಿದ ಹಾವನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಅದನ್ನೂ ಹೊಡೆದು ಸಾಯಿಸಿದ್ದಾರೆ. ಅಆದರೆ ಅತ್ತ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಮನೆ ಮಾಡಿದೆ. 

ಹಾವುಗಳ ಜೊತೆ ಸರಸವಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ: ವಿಡಿಯೋ ವೈರಲ್‌

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯುವಕನೋರ್ವ ಮೂರು ಹಾವುಗಳೊಂದಿಗೆ ಏಕಕಾಲಕ್ಕೆ ಸರಸವಾಡಲು ಹೋಗಿ ಒಂದು ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದ್ದಾನೆ. ಹಾವುಗಳ ಬಗ್ಗೆ ಆಸಕ್ತಿ ಹೊಂದಿರುವ ಶಿರಸಿ ಯುವಕ ಮಾಜ್‌ ಸಯೀದ್‌ (Maaz Sayed) ಎಂಬಾತನೇ ಹೀಗೇ ಹಾವುಗಳೊಂದಿಗೆ ಸರಸವಾಡಲು ಹೋಗಿ ಕಚ್ಚಿಸಿಕೊಂಡ ಯುವಕ. ವಿಡಿಯೋದಲ್ಲಿ ಈತ ಮೂರು ಹೆಡೆ ಎತ್ತಿ ನಿಂತಿರುವ ನಾಗರಹಾವುಗಳ ಮುಂದೆ ಕುಳಿತು ಮೆಲ್ಲ ಮೆಲ್ಲನೇ ಅವುಗಳನ್ನು ಮುಟ್ಟಲು ಅವುಗಳ ಬಾಲವನ್ನು ಎಳೆಯಲು ಆರಂಭಿಸಿದ್ದಾನೆ. ಅಲ್ಲದೇ ಅವುಗಳ ಮುಂದೆ ತನ್ನ ಕೈಗಳನ್ನು ಹಾಗೂ ಕಾಲುಗಳನ್ನು ಹೆಡೆ ಆಡಿಸಿದಂತೆ ಆಡಿಸಿದ್ದಾನೆ. ಈ ವೇಳೆ ಭಯಗೊಂಡ ಹಾವೊಂದು ಆತನ ಮೊಣಕಾಲಿಗೆ ಕಚ್ಚಿದೆ.

ಆಪರೇಷನ್ ಸಕ್ಸಸ್... ಮೂರು ದಿನದ ವೈದ್ಯರ ಆರೈಕೆ ಬಳಿಕ ಕಾಡಿಗೆ ಹೊರಟ ನಾಗಪ್ಪ

ಹಾವಿನಿಂದ ಕಚ್ಚಿಸಿಕೊಂಡ ಈ ಸೈಯದ್‌ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಇಂತಹದ್ದೇ ದೃಶ್ಯಗಳಿರುವ ವಿಡಿಯೋಗಳೇ ತುಂಬಿವೆ. ಅಂದರೆ ಈತ ಈ ಹಿಂದೆಯೂ ಇಂತಹ ಹುಚ್ಚು ಸಾಹಸ ಮಾಡಿ ಯಶಸ್ವಿಯಾಗಿದ್ದಾನೆ. ಆದರೆ ಈ ಬಾರಿ ಆತನ ಗ್ರಹಚಾರ ಕೆಟ್ಟಿತ್ತೇನೋ. ಹಾವು ಚಂಗನೇ ಮೇಲೇರಿ ಈತನಿಗೆ ಕಚ್ಚಿದೆ. ಈ ವೇಳೆ ಕುಳಿತಿದ್ದ ಆತನೂ ಒಮ್ಮೆಲೆ ಮೇಲೇರಿದ್ದು, ಕಚ್ಚಿದ  ಹಾವನ್ನು ತನ್ನ ಕೈಯಿಂದ ಎಳೆಯುತ್ತಾನೆ. ಆದರೆ ಅದು ಗಟ್ಟಿಯಾಗಿ ಕಚ್ಚಿ ಹಿಡಿದಿತ್ತು.

ಈ ಬಗ್ಗೆ ಸುವರ್ಣ ನ್ಯೂಸ್‌.ಕಾಮ್‌ ಜೊತೆ ಮಾತನಾಡಿದ ಯುವಕ ಸೈಯದ್‌ , ಭಾನುವಾರ ಈ ಘಟನೆ ನಡೆದಿದ್ದಾಗಿ ಹೇಳಿದ್ದಾನೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ. ಈ ಘಟನೆಯ ಬಗ್ಗೆ ಆರ್‌ಎಫ್‌ಒ ಬಸವರಾಜ್‌ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಯುವಕ ಸೈಯದ್ ಹೇಳಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!