
ಶ್ರೀನಗರ(ಏ.16) ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಇದೀಗ ಮಜುಗರಕ್ಕೆ ಒಳಗಾಗಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತ ನದಿಯಂತೆ ಹರಿಯಲಿದೆ ಎಂದು ಬೆದರಿಕೆ ಹಾಕಿದ್ದ ಫಾರೂಖ್ ಅಬ್ದುಲ್ಲಾ ಅಸಲಿಗೆ ಮಾಡಿದ್ದೇ ಬೇರೆ ಎಂದು ಭಾರತದ R&AW ಮಾಜಿ ಮುಖ್ಯಸ್ಥ ಎಎಸ್ ದುಲತ್ ಹೇಳಿದ್ದಾರೆ. ಫಾರೂಖ್ ಅಬ್ದುಲ್ಲಾ ರಹಸ್ಯವಾಗಿ ಆರ್ಟಿಕಲ್ 370 ರದ್ದು ಮಾಡುವ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದರು. ಆದರೆ ಸಾರ್ವಜನಿಕವಾಗಿ ವಿರೋಧಿಸಿದ್ದರು ಎಂದು ಎಎಸ್ ದುಲತ್ ಹೇಳಿದ್ದಾರೆ.
ಫಾರೂಖ್ ಅಬ್ದುಲ್ಲಾ ತಮ್ಮ ರಾಜಕೀಯ ಜೀವನದಲ್ಲಿ ಎದುರಿಸಿದ ಅತೀ ದೊಡ್ಡ ಮುಜುಗರ ಇದಾಗಿದೆ. ಎಸ್ ದುಲತ್ ಬರೆದಿರುವ ಚೀಫ್ ಮಿನಿಸ್ಟರ್ ಹಾಗೂ ಸ್ಪೈ ಅನ್ನೋ ಪುಸ್ಕತ ಎಪ್ರಿಲ್ 18 ರಂದು ಬಿಡುಗಡೆಯಾಗುತ್ತಿದೆ. ಈ ಪುಸ್ತಕದಲ್ಲಿ ಆರ್ಟಿಕಲ್ 370 ರದ್ದು ಸೇರಿದಂತೆ ಹಲವು ಸ್ಫೋಟಕ ಮಾಹಿತಿಗಳಿವೆ. ಇದೀಗ ಈ ಪೈಕಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯ ಡಬಲ್ ಸ್ಟಾಂಡರ್ಟ್ ಬಹಿರಂಗಪಡಿಸಿದ್ದಾರೆ. ಫಾರೂಖ್ ಅಬ್ದುಲ್ಲಾ ಸಾರ್ವಜನಿಕವಾಗಿ ಆರ್ಟಿಕಲ್ 370 ರದ್ದು ಕುರಿತು ಹೇಳಿಕೆ ನೀಡಿದ್ದರು. ಕೇಂದ್ರದ ವಿರುದ್ಧ ಹರಿಹಾಯ್ದ ಅಬ್ದುಲ್ಲಾ, ಸತತವಾಗಿ ಗಂಭೀರ ಆರೋಪ, ಟೀಕೆಗಳನ್ನು ಮಾಡಿದ್ದರು. ಆದರೆ ಖಾಸಗಿಯಾಗಿ ಕೇಂದ್ರ ಸರ್ಕಾರದ ಈ ನಡೆಯನ್ನು ಬೆಂಬಲಿಸಿದ್ದರು ಎಂದು ಎಎಸ್ ದುಲತ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಟ್ರಂಪ್ ಬೆದರಿಕೆಯಿಂದ ಭಾರತದ ಸಖ್ಯ ಬಯಸಿದ ಚೀನಾ, 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್
ಆರ್ಟಿಕಲ್ 370 ರದ್ದು ಕುರಿತು ಫಾರೂಖ್ ಅಬ್ದುಲ್ಲಾ ತೀರಾ ಕೆಳಮಟ್ಟದ ರಾಜಕೀಯ ನಡೆಸಿದ್ದರು ಎಂದು ಎಎಸ್ ದುಲತ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡುವ ಕೆಲವೇ ದಿನ ಮೊದಲು ಫಾರೂಕ್ ಅಬ್ದುಲ್ಲಾ ಹಾಗೂ ಪುತ್ರ ಒಮರ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ನವ ದೆಹಲಿಯಲ್ಲಿ ಭೇಟಿಯಾಗಿ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಏನು ಅನ್ನೋದು ಕೆಲವರಿಗಷ್ಟೇ ಗೊತ್ತಿದೆ ಎಂದಿದ್ದಾರೆ.
ಆರ್ಟಿಕಲ್ 370 ಜಾರಿ ಮಾಡಿದ ಬೆನ್ನಲ್ಲೇ ಫಾರೂಕ್ ಅಬ್ದುಲ್ಲಾ ಅವರನ್ನು 7 ತಿಂಗಳ ಕಾಲ ಗೃಹ ಬಂಧನದಲ್ಲಿ ಇಡಲಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ವಾಸ್ತವಿಕ ಪರಿಸ್ಥಿತಿ, ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು ಎಂದು ಎಎಸ್ ದುಲತ್ ಪುಸ್ತಕದಲ್ಲಿ ಹೇಳಿದ್ದಾರೆ. ಈ ಸ್ಫೋಟಕ ಹೇಳಿಕೆ ಇದೀಗ ಬಿರುಗಾಳಿಯಿಂದ ಹಬ್ಬಿದೆ. ಆದರೆ ಈ ಕುರಿತು ಫಾರೂಖ್ ಅಬ್ದುಲ್ಲಾ ಆಗಲಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫಾರೂಖ್ ಅಬ್ದುಲ್ಲಾ ಕಾದು ನೋಡುವ ತಂತ್ರ ಅನುಸರಿಸುವ ಸಾಧ್ಯತೆ ಇದೆ.
ಏಪ್ರಿಲ್ 18 ರಂದು ಈ ಎಎಸ್ ದುಲತ್ ಪುಸ್ತಕ ಬಿಡುಗಡೆಯಾಗಲಿದೆ. ಈಗಲೇ ಪ್ರತಿಕ್ರಿಯೆ ನೀಡಿ ಮತ್ತಷ್ಟು ಸಂಕಷ್ಟಕ್ಕೆ ಬೀಳುವುದಕ್ಕಿಂತ, ಪುಸ್ತಕದಲ್ಲಿ ಏನಿದೆ? ಯಾವ ದಾಖಲೆ ನೀಡಿದ್ದಾರೆ ಅನ್ನೋದು ಆಧರಿಸಿ ಪ್ರತಿಕ್ರಿಯೆ ನೀಡಲು ಫಾರೂಖ್ ಅಬ್ದುಲ್ಲಾ ಮುಂದಾಗಿದ್ದಾರೆ.
ಭಾರತೀಯ ರೈಲು ಪ್ರಯಾಣಿಕರಿಗೆ ಮತ್ತೊಂದು ಕೊಡುಗೆ, ಟ್ರೈನ್‌ನಲ್ಲೇ ಎಟಿಎಂ ಸೌಲಭ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ