
ನವದೆಹಲಿ(ಡಿ.18): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆ ಪ್ರಧಾನಿ ಮೋದಿ ಮಧ್ಯಪ್ರದೇಶದ 23,000 ಹಳ್ಳಿಗಳ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ಪ್ರಮುಖವಾಗಿ ಮೋದಿ, ಕೃಷಿ ಮಸೂದೆ ರೈತರಿಗೆ ಮತ್ತಷ್ಟು ಶಕ್ತಿ ತುಂಬಲಿದೆ, ರೈತರ ಆದಾಯ ಹೆಚ್ಚಿಸಲಿದೆ. ಆದರೆ ರೈತರನ್ನು ಹಾದಿ ತಪ್ಪಿಸಿ, ರೈತರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನಕ್ಕೆ ವಿಪಕ್ಷಗಳು ಕೈಹಾಕಬಾರದು ಎಂದು ಮೋದಿ ಹೇಳಿದ್ದಾರೆ.
"
ಉಗ್ರ ಸಂಘಟನೆಯಿಂದ ರೈತ ಪ್ರತಿಭಟನೆ ಹೈಜಾಕ್; ಖಲಿಸ್ತಾನ ವಿರುದ್ಧ ತನಿಖೆಗೆ ಸಜ್ಜಾದ MHA!
ಕೇಂದ್ರ ಬಿಜೆಪಿ ಸರ್ಕಾರ ಕೃಷಿ ಮಸೂದೆಯನ್ನು ಒಂದೇ ರಾತ್ರಿಯಲ್ಲಿ ಜಾರಿಗೆ ತಂದಿಲ್ಲ. ಕೃಷಿ ಮಸೂದೆ ಕುರಿತು ಕಳೆದ 20 ರಿಂದ 30 ವರ್ಷ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಚರ್ಚೆ ನಡೆಸಿದೆ. ಎಲ್ಲಾ ಅಂಶಗಳನ್ನು ಕ್ರೋಡಿಕರಿಸಲಾಗಿದೆ. ಕೃಷಿ ತಜ್ಞರು, ಆರ್ಥಿಕ ತಜ್ಞರು, ರೈತರು ಹಲವು ವರ್ಷಗಳ ಬೇಡಿಕೆಯನ್ನು ನಾವು ಪೂರೈಸಿದ್ದೇವೆ ಎಂದು ಮೋದಿ ಹೇಳಿದರು.
ರೈತರನ್ನು ಗೊಂದಲಗೊಳಿಸುವ ಪ್ರಯತ್ನಕ್ಕೆ ಕೈಹಾಕಬೇಡಿ, ಜೊತೆಗೆ ರೈತರಿಗೆ ಮೋಸ ಮಾಡಬೇಡಿ ಎಂದು ವಿರೋಧ ಪಕ್ಷಗಳಿಗೆ ಮೋದಿ ಎಚ್ಚರಿಸಿದ್ದಾರೆ. ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ರೈತರು ಸ್ಪರ್ಧೆಯಿಂದ ಹಿಂದೆ ಬೀಳಲು ಬಿಡುವುದಿಲ್ಲ. ಹೀಗಾಗಿ ಹಲವು ದಶಕಗಳಿಂದ ಕಡೆಗಣಿಸಲ್ಪಟ್ಟ ರೈತರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದು ಮೋದಿ ಹೇಳಿದ್ದಾರೆ.
ಸಿಖ್ ಧರ್ಮ ಗುರು ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ರೈತ ಪ್ರತಿಭಟನೆಯ ಸ್ಫೋಟಕ ಮಾಹಿತಿ!..
ನೂತನ ಕೃಷಿ ಮಸೂದೆ ಜಾರಿಗೆ ತಂದು 6 ರಿಂದ 7 ತಿಂಗಳು ಆಗಿವೆ. ಇದೀಗ ರೈತರಿಗೆ ಸುಳ್ಳುಗಳನ್ನು ಹರಡಿ, ಮಸೂದೆ ರೈತ ವಿರೋಧಿ ಎಂದು ಹಬ್ಬಿಸಿ ಮುಗ್ದ ರೈತರನ್ನು ಪ್ರತಿಭಟನೆಗೆ ಎಳೆದು ತರಲಾಗಿದೆ. ಕಾಲಕಾಲಕ್ಕೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಸರ್ಕಾರ ಒತ್ತು ನೀಡಿದೆ.
ರೈತರೊಂದಿಗೆ ಮೋದಿ ಮಾತುಕತೆ; ಅನ್ನದಾತನ ಹಾದಿತಪ್ಪಿಸುತ್ತಿದೆ ವಿಪಕ್ಷ ಎಂದ ಪ್ರಧಾನಿ!.
ಹಿಂದಿನ ಕೃಷಿ ಮಸೂದೆ ಪ್ರಕಾರ ರೈತರು ತಮ್ಮ ಬೆಳೆಯನ್ನು ಮಂಡಿಯಲ್ಲಿ ಮಾತ್ರ ಮಾರಾಟಮಾಡಬೇಕಿತ್ತು. ದಲ್ಲಾಳಿಗಳಿಗೆ ಕಮಿಷನ್ ರೂಪದಲ್ಲಿ ಹಣ ನೀಡಬೇಕಿತ್ತು. ಇನ್ನ ದಲ್ಲಾಳಿಗಳು ನಿರ್ಧರಿಸುವ ಬೆಲೆಗೆ ಮಾರಾಟ ಮಾಡಬೇಕಿತ್ತು. ಆದರೆ ನಾವು ತಂದಿರುವ ಹೊಸ ಕೃಷಿ ಮಸೂದೆಯಲ್ಲಿ ರೈತರು ತಮ್ಮ ಬೆಳೆಯನ್ನು ಮೊದಲಿನಂತೆ ಮಂಡಿಯಲ್ಲೂ ಮಾರಾಟ ಮಾಡಬುಹುದು, ಅಥವಾ ತಮಗಿಷ್ಟವಾದ ಕಡೆ, ಅಥವ ಲಾಭ ಬರವು ಕಡೆ ಮಾರಾಟ ಮಾಡಬಹುದು. ರೈತರು ತಮ್ಮ ಬೆಳೆಯನ್ನು ಎಲ್ಲಿ ಮಾರಾಟ ಮಾಡಬೇಕು ಅನ್ನೋ ಹಕ್ಕು ನೀಡಿದ್ದು ತಪ್ಪೇ? ಎಂದು ಮೋದಿ ಪ್ರಶ್ನಿಸಿದ್ದಾರೆ.
ರೈತರೊಂದಿಗೆ ಮಾತುಕತೆಗೆ ನಮ್ಮ ಸರ್ಕಾರ ಬದ್ದವಾಗಿದೆ. ರೈತರ ನಿಜವಾದ ಕಾಳಜಿ, ರೈತರ ಸಮಸ್ಯೆಗೆ ನಮ್ಮ ಸರ್ಕಾರ ಸ್ಪಂದಿಸಲಿದೆ. ನಮ್ಮ ಪ್ರಮುಖ ಆದ್ಯತೆಗಳಲ್ಲಿ ರೈತರು ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ನಾನು ಕೈಮುಗಿದು ಎಲ್ಲರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ, ನಿಮಗೆ ಸಮಸ್ಯೆಯಾಗುವ ಯಾವುದೇ ಅಂಶ ಈ ಮಸೂದೆಯಲ್ಲಿ ಇಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ