
Shocking Viral Video Today: ಸೋಶಿಯಲ್ ಮೀಡಿಯಾದ ವಿಚಿತ್ರ ಜಗತ್ತಿನಲ್ಲಿ ಒಂದಲ್ಲಾ ಒಂದು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವು ವೈರಲ್ ಸುದ್ದಿಗಳು ನಮ್ಮನ್ನು ನಗುವಂತೆ ಮಾಡಿದರೆ, ಇನ್ನೂ ಕೆಲವು ಸುದ್ದಿಗಳು ನಾವು ಅಚ್ಚರಿಪಡುವಂತೆ ಮಾಡುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳ ವಿವಾಹ ನಡೆಯುತ್ತಿರುವುದನ್ನು ಕಾಣಬಹುದಾಗಿದ್ದು, ಮದುವೆ ಮನೆಯಲ್ಲಿ ಇಬ್ಬರೂ ಪರಸ್ಪರ ವರಮಾಲೆ ಬದಲಿಸಿಕೊಳ್ಳುತ್ತಿರುವುದು ಕಾರಣಬಹುದಾಗಿದೆ. ಆದರೆ, ಈ ಮದುವೆ ಇಬ್ಬರಿಗೂ ಒಪ್ಪಿಗೆಯಿರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಿದ್ದರೂ ಇವರ ಕುಟುಂಬದವರು ಮದುವೆ ಮಾಡಿರುವ ಹಿಂದಿನ ಕಾರಣ ಇವರಿಬ್ಬರ ವಾಟ್ಸಾಪ್ ಚಾಟ್.
ಇವರಿಬ್ಬರ ವಾಟ್ಸಾಪ್ ಚಾಟ್‌ಅನ್ನು ನೋಡಿದ ಕುಟುಂಬಸ್ಥರು, ತರಾತುರಿಯಲ್ಲಿ ಬಲವಂತವಾಗಿ ಇಬ್ಬರ ಮದುವೆ ಮಾಡಿದೆ. ಇವರ ಚಾಟ್‌ಗಳನ್ನು ಓದಿ ಎರಡೂ ಕುಟುಂಬ ಶಾಕ್ ಆಗಿತ್ತು.
ಮಾಧ್ಯಮ ವರದಿಗಳ ಪ್ರಕಾರ ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಹುಡುಗ ಹಾಗೂ ಹುಡುಗಿ ಪರಸ್ಪರ ರಹಸ್ಯವಾಗಿ ಮಾತನಾಡುತ್ತಿದ್ದರು. ನಂತರ ಅವರು ವಾಟ್ಸಾಪ್‌ನಲ್ಲಿ ಸುದೀರ್ಘ ಕಾಲ ಚಾಟ್ ಮಾಡಲು ಆರಂಭಿಸಿದ್ದರು. ತಿಂಗಳುಗಳ ಕಾಲ ಇಬ್ಬರ ಕುಟುಂಬಕ್ಕೂ ಗೊತ್ತಿಲ್ಲದೆ ಮಾತುನಾಡುತ್ತಿದ್ದರು. ಇದನ್ನು ಯಾರೂ ಕೂಡ ಗಮನಿಸಿರಲಿಲ್ಲ. ಅವರ ಸ್ನೇಹ ಕ್ರಮೇಣ ಪ್ರೀತಿಯಾಗಿ ಅರಳಿದ್ದು ಅವರ ಸಂವಹನ ಇನ್ನಷ್ಟು ವಿಸ್ತರಣೆ ಆಗಿದ್ದವು. ತಮ್ಮ ಖಾಸಗಿ ಚಾಟ್‌ಗಳನ್ನು ಕುಟುಂಬ ನೋಡೋದಿಲ್ಲ ಎಂದೇ ಅವರು ಭಾವಿಸಿದ್ದರು. ಆದರೆ, ಒಂದು ದಿನ ಇಬ್ಬರ ವಾಟ್ಸಾಪ್‌ಅನ್ನು ಪರಿಶೀಲನೆ ಮಾಡಿದಾಗ ಆಘಾತಗೊಂಡಿದ್ದಾರೆ.
ಗ್ರಾಮದ "ಗೌರವ" ಮತ್ತು "ಸಂಪ್ರದಾಯ"ವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಗಂಭೀರವೆಂದು ಪರಿಗಣಿಸಲಾದ ಸಂದೇಶಗಳನ್ನು ಚಾಟ್ ಒಳಗೊಂಡಿತ್ತು. ಎರಡೂ ಕುಟುಂಬಗಳು ಈ ಬಗ್ಗೆ ಒಟ್ಟಾಗಿ ನಿರ್ಧಾರ ಮಾಡಿ, ಮಕ್ಕಳನ್ನು ಮದುವೆ ಮಾಡಲು ನಿರ್ಧರಿಸಿದವು. ಕುತೂಹಲಕಾರಿಯಾಗಿ, ಅಪ್ರಾಪ್ತ ವಯಸ್ಕರು ಮದುವೆಗೆ ಸಿದ್ಧರಿರಲಿಲ್ಲ, ಆದರೆ ಕುಟುಂಬವು ಅವರನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ