ಮುದ್ದಿನ ಶ್ವಾನಕ್ಕೆ ಸೀಮಂತ ಮಾಡಿದ ಕುಟುಂಬ

By Anusha Kb  |  First Published Dec 12, 2022, 4:06 PM IST

ಮಹಿಳೆಯೊಬ್ಬರು ತಮ್ಮ ಗರ್ಭಿಣಿ ಶ್ವಾನವೊಂದಕ್ಕೆ ಸೀಮಂತ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಇತ್ತೀಚೆಗೆ ಜನ ತಮ್ಮ ಶ್ವಾನಗಳಿಗೇ ಏನೋ ಮರ್ಯಾದೆ ನೀಡುತ್ತಿದ್ದಾರೆ. ಕುಟುಂಬದ ಸದಸ್ಯರಂತೆ ಶ್ವಾನವನ್ನು ಕಾಣುವ ಶ್ವಾನಪ್ರೇಮಿಗಳು, ಅವುಗಳಿಗೆ ಮನುಷ್ಯರಿಗೂ ಮಾಡದ ಸತ್ಕಾರವನ್ನು ಮಾಡುತ್ತಾರೆ. ಅಲ್ಲದೇ ಅವುಗಳನ್ನು ತಾವು ಹೋದಲೆಲ್ಲಾ ಕರೆದೊಯ್ಯುತ್ತಾರೆ. ಅವುಗಳಿಗೆ ಹುಟ್ಟುಹಬ್ಬ ಆಚರಿಸುತ್ತಾರೆ. ಹಾಗೆಯೇ ಈಗ ಮಹಿಳೆಯೊಬ್ಬರು ತಮ್ಮ ಗರ್ಭಿಣಿ ಶ್ವಾನವೊಂದಕ್ಕೆ ಸೀಮಂತ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ಗರ್ಭಿಣಿ ಶ್ವಾನಕ್ಕೆ (Pragnent dog) ಮನುಷ್ಯರಿಗೆ ಮಾಡುವಂತೆ ವಿವಿಧ ತಿನಿಸುಗಳನ್ನು ತಯಾರಿಸಿ ಮಹಿಳೆ ಬಡಿಸಿದ್ದಾರೆ. ಚಾದರವೊಂದನ್ನು ಹಾಸಿ ನಾಯಿಯನ್ನು ಅದರ ಮೇಲೆ ಕೂರಿಸಲಾಗಿದೆ. ನಂತರ ಶ್ವಾನಕ್ಕೆ ಬಳೆಯನ್ನು ತೊಡಿಸಿ ಹಣೆಗೆ ಸಿಂಧೂರವಿಡಲಾಗಿದೆ (Sindhoor). ಸಾಲನ್ನು ಹೊದಿಸಿ ಹೂವನ್ನು ಮೂಡಿಸಿ ಅದರ ಮುಂದೆ ವಿವಿಧ ತಿನಿಸುಗಳಿರುವ ತಟ್ಟೆಯನ್ನು ಫಲಾಹಾರಗಳನ್ನು ಇಡಲಾಗಿದೆ. ಹೀಗೆ ಶ್ವಾನಕ್ಕೆ ಬಡಿಸಲಾದ ಆಹಾರದಲ್ಲಿ ಐಸ್‌ಕ್ರೀಂ (Ice-cream), ಅನ್ನ, ಮೊಟ್ಟೆ (Egg), ಸಿಗಡಿ ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಇರಿಸಲಾಗಿದೆ. ನಂತರ ಈ ಆಹಾರಗಳನ್ನು ಬೀದಿಯಲ್ಲಿರುವ ಶ್ವಾನಗಳಿಗೆ ತಂದು ಮಹಿಳೆ ನೀಡುತ್ತಿದ್ದಾರೆ.

Tap to resize

Latest Videos

ಅನೇಕರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಜಾತ ಭಾರತಿ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಪುಟ್ಟ ಶ್ವಾನಕ್ಕೆ ಸೀಮಂತ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆಯ ಜೊತೆ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಯೋಚನೆ ಹಾಗೂ ಕೆಲಸ ಕಲ್ಪನೆಗೂ ಮೀರಿದ್ದು, ಶ್ವಾನದ ಪೋಷಕರಾಗಿ ನಿಮ್ಮ ಭಾವನೆ ನಮಗೆ ಅರ್ಥವಾಗುತ್ತದೆ. ನಿಮ್ಮ ಪ್ರೀತಿಯ ಮುದ್ದಾದ ಶ್ವಾನಕ್ಕೆ ನನ್ನ ಕಡೆಯಿಂದ ಪ್ರೀತಿಯ ಶುಭಾಶಯಗಳು ಎಂದು ಒಬ್ಬರು ಬರೆದುಕೊಂಡಿದ್ದಾರೆ. 

ಮತ್ತೊಬ್ಬರು ತಮಾಷೆಯಾಗಿ ಡೆಲಿವರಿ ಎಲ್ಲಿ ಕ್ಲೌಡ್ ನೈನ್ ಅಲ್ಲ ಎಂದು ಪ್ರಶ್ನಿಸಿದ್ದಾರೆ. ಒಂದು ಹೃದಯ ಬೆಚ್ಚಗಾಗಿಸುವ ಕ್ಷಣವನ್ನು ಕಣ್ತುಂಬಿಕೊಂಡೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲದಿನಗಳ ಹಿಂದೆ ಜಾರ್ಖಂಡ್‌ನ ಧನ್ಬಾದ್‌ನಲ್ಲಿ(Dhanbad) ಕುಟುಂಬವೊಂದು ಶ್ವಾನದ ಹುಟ್ಟುಹಬ್ಬವನ್ನು ಊರವರಿಗೆಲ್ಲ ಊಟ ಹಾಕಿ ಅದ್ದೂರಿಯಾಗಿ ಆಚರಿಸಿದ್ದರು. ಶ್ವಾನ ಕುಟುಂಬದ ನೆಂಟರು, ಬಂಧುಗಳು, ಆತ್ಮೀಯರ ಸಮ್ಮುಖದಲ್ಲಿ ಶ್ವಾನಕ್ಕೆ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದರು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಅಲ್ಲದೇ ಈ ಶ್ವಾನದ ಸಮಾರಂಭಕ್ಕೆ ಬಂದ ಅತಿಥಿಗಳು ಶ್ವಾನಕ್ಕೆ(Dog) ಉಡುಗೊರೆಗಳನ್ನು (Gift) ಕೂಡ ತಂದಿದ್ದರು. ಧನ್ಬಾದ್‌ನ ಲೋಯಾಬಾದ್‌ನಲ್ಲಿ(Loyabad) ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೀಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ವಾನದ ಹೆಸರು ಅಕ್ಸರ್, ಅಕ್ಸರ್‌ನ ಪೋಷಕರಾದ ಸುಮಿತ್ರಾ ಕುಮಾರಿ (Sumitra Kumari) ಹಾಗೂ ಸಂದೀಪ್ ಕುಮಾರ್ ಈ ಕಾರ್ಯಕ್ರಮಕ್ಕಾಗಿ ಸುಂದರವಾದ ಆಮಂತ್ರಣ ಪತ್ರವನ್ನು ಕೂಡ ಸಿದ್ಧಪಡಿಸಿದ್ದರು. ಅಷ್ಟೇ ಅಲ್ಲದೇ ಶ್ವಾನಕ್ಕಾಗಿ 4500 ರೂಪಾಯಿ ಮೊತ್ತದ ಬಟ್ಟೆಯನ್ನು ಕೊಂಡು ತಂದಿದ್ದರು. ಒಟ್ಟಿನಲ್ಲಿ ಯಾವುದರಲ್ಲೂ ಕಡಿಮೆ ಇಲ್ಲದಂತೆ ತಮ್ಮ ಶ್ವಾನದ ಹುಟ್ಟುಹಬ್ಬವನ್ನು ಈ ದಂಪತಿ ಆಚರಿಸಿದ್ದರು.

ಶ್ವಾನದೊಂದಿಗೆ ಹೊಸ ಜೀವನಕ್ಕೆ ಎಂಟ್ರಿ ಕೊಟ್ಟ ಮದುಮಗ..!

ಹುಟ್ಟುಹಬ್ಬ ಆಚರಿಸಿಕೊಂಡ ಶ್ವಾನ: ಸಿಕ್ತು ಮೂರು ಚಿನ್ನದ ಲಾಕೆಟ್ ಗಿಫ್ಟ್

Shabarimala: ಗುರುಸ್ವಾಮಿ ಜೊತೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಹೊರಟ ಶ್ವಾನ!

ಮಾಲೀಕನೊಂದಿಗೆ ಶ್ವಾನದ ಲಡಾಖ್ ಟ್ರಿಪ್... ವಿಡಿಯೋ ವೈರಲ್

 

click me!