ಕೋಳಿಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿದ ಮನೆಮಂದಿ

By Suvarna News  |  First Published Jan 6, 2022, 8:22 PM IST
  • ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿದ ಕುಟುಂಬ
  • ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ದೆಹಲಿ(ಜ.6): ನೀವು ಇದುವರೆಗೂ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಹುಟ್ಟುಹಬ್ಬವನ್ನು ಮನೆಮಂದಿ ಆಚರಿಸಿರುವುದನ್ನು ಕೇಳಿದ್ದೀರಿ. ಆದರೆ ನಾವೀಗ ಹೇಳ ಹೊರಟಿರುವುದು ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿದ ಬಗೆ. ಹೌದು ಮನೆಮಂದಿಯೆಲ್ಲಾ ಸೇರಿ ಈ ಹುಟ್ಟುಹಬ್ಬವನ್ನು ಕೇಕ್‌(cake) ಕತ್ತರಿಸಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಆದರೆ ಯಾವ ಊರಿನಲ್ಲಿ ಇದು ನಡೆದಿದ್ದು, ಹೀಗೆ ಹುಟ್ಟುಹಬ್ಬ ಆಚರಿಸಿದವರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಕೋಳಿಯ ಹುಟ್ಟುಹಬ್ಬ ಆಚರಿಸಿದ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದ(social Media) ತುಂಬಾ ವೈರಲ್ ಆಗಿರುವುದಂತು ನಿಜ.

ಹೌದು ಈ ಹುಟ್ಟುಹಬ್ಬವನ್ನು ಯಾವುದೇ ಮನೆ ಮಂದಿಯ ಹುಟ್ಟುಹಬ್ಬಕ್ಕೂ ಕಮ್ಮಿ ಇಲ್ಲದಂತೆ ಆಚರಿಸಲಾಗಿದೆ. ಅಲ್ಲದೇ ಈ ಸಂಭ್ರಮಾಚರಣೆಗೆ ಅತಿಥಿಗಳನ್ನು ಕೂಡ ಕರೆಸಿ ಎಲ್ಲರೆದುರು ಕೇಕ್‌ ಕತ್ತರಿಸಿ ಈ ಹುಟ್ಟಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋದಲ್ಲಿ ದೊಡ್ಡದಾದ ಕೇಕ್‌ ಅನ್ನು ಟೇಬಲ್‌ ಮೇಲೆ ಇರಿಸಲಾಗಿದೆ. ಕೇಕ್‌ ಇರಿಸಿರುವ ರೂಮ್‌ನ್ನು ಬಣ್ಣ ಬಣ್ಣದ ಬಲೂನ್‌ಗಳಿಂದ ಸಿಂಗರಿಸಲಾಗಿದ್ದು, ಹಾಗೂ ಲೇಂಟರ್ನ್ಸ್‌, ಪೊಮ್‌ ಪೊಮ್‌ ಹಾಗೂ  ಹುಟ್ಟು ಹಬ್ಬದ ಶುಭಾಶಯ ತಿಳಿಸುವ ಬ್ಯಾನರ್‌ಗಳನ್ನು ಇರಿಸಲಾಗಿತ್ತು. ಜೊತೆಗೆ ಅಲ್ಲಿ ಸಾಕಷ್ಟು ಜನ ಸೇರಿದ್ದು, ಗುಂಪಿನ ಮಧ್ಯದಲ್ಲಿದ್ದ ಹುಡುಗಿಯೊಬ್ಬಳು ಕೈಯಲ್ಲಿ ಹುಂಜವನ್ನು ಹಿಡಿದಿದ್ದಾಳೆ. ಇಲ್ಲಿಗೆ ಇದು ಹುಂಜದ ಹುಟ್ಟು ಹಬ್ಬ ಎಂಬುದು ಸ್ಪಷ್ಟವಾಗಿದೆ. ನಂತರ ಓರ್ವ ಮಹಿಳೆ ಹುಂಜದ ಕಾಲಿನಲ್ಲಿ ಕೇಕ್‌ ಕತ್ತರಿಸುವ ಚಾಕ್‌ ಇಡುತ್ತಾಳೆ. ಇದೇ ವೇಳೆ ಜೊತೆಗೆ ಸೇರಿರುವ ಅನೇಕರು ಹ್ಯಾಪ್‌ ಬರ್ತಡೇ ಹಾಡು ಹಾಡಿ ಜನ್ಮದಿನದ ಶುಭಾಶಯ ವಿನಿಮಯ ಮಾಡುತ್ತಾರೆ. ನಂತರ ಕೇಕ್‌ನ ಸಣ್ಣ ತುಂಡೊಂದನ್ನು ಹುಂಜಕ್ಕೆ ತಿನ್ನಿಸುತ್ತಾರೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by MEMES.BKS🤟🙂 (@memes.bks)

 

ಇನ್ಸ್ಟಾಗ್ರಾಮ್‌ನ memes.bks. ಹೆಸರಿನ ಖಾತೆಯಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ.  ನೆಟ್ಟಿಗರು ಈ ವಿಡಿಯೋಗೆ  ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ಫನ್ನಿ ಎಂದರೆ ಮತ್ತೂ ಕೆಲವರು ಚಿಕನ್ ಬಗೆಗೆ ಜೋಕ್ ಮಾಡಿದ್ದಾರೆ. ಇದು ನಮಗಿಷ್ಟವಾಯಿತು ಎಂದು ಕೆಲವರು ಹೇಳಿದರೆ, ಈ ಜನ ಯಾರೂ ಎಲ್ಲಿಂದ ಬಂದಿದ್ದಾರೆ ಎಂದು  ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

KFC Chicken: ಕೆಎಫ್‌ಸಿ ಚಿಕನ್‌ನಲ್ಲಿ ಸಿಕ್ತು ಕೋಳಿಯ ಇಡೀ ತಲೆ

ಇತ್ತೀಚೆಗೆ ತಮಿಳುನಾಡಿನ ಕುಟುಂಬವೊಂದು ತಮ್ಮ ಎರಡು ಮುದ್ದಾದ ಪರ್ಷಿಯನ್‌ ಗರ್ಭಿಣಿ ಬೆಕ್ಕುಗಳಿಗೆ ಸಾಮಾನ್ಯವಾಗಿ ಗರ್ಭಿಣಿ ಹೆಣ್ಮಗಳಿಗೆ ಮಾಡುವಂತೆಯೇ ಸಂಪ್ರದಾಯ ಬದ್ಧವಾಗಿ ಸೀಮಂತ ಮಾಡಿದ್ದರು. ಈ ಬೆಕ್ಕುಗಳ ಸೀಮಂತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಸಾಕುಪ್ರಾಣಿಗಳಾದ ಬೆಕ್ಕು, ನಾಯಿಗಳನ್ನು ಸಾಕುವವರಿಗೆ ಅವುಗಳ ಮೇಲೆ ಮನುಷ್ಯರಿಗಿಂತಲೂ ಹೆಚ್ಚಾದ ಪ್ರೀತಿ ಇರುತ್ತದೆ. ಅವುಗಳನ್ನು ಮನೆಯ ಸದಸ್ಯರಂತೆ ಕಾಣುವ ಅವರು ಅವುಗಳಿಗೆ ಏನಾದರೂ ಹೆಚ್ಚು ಕಮ್ಮಿಯಾದರು ತುಂಬಾ ಸಂಕಟ ಪಡುತ್ತಾರೆ. 

ತಮಿಳುನಾಡಿನ ಕೊಯಂಬತ್ತೂರಿನ ಕುಟುಂಬವೊಂದು ತಮ್ಮ ಮನೆಯ ಮುದ್ದಾದ ಪರ್ಷಿಯನ್‌ ಬೆಕ್ಕು (Persian cats)ಗಳಿಗೆ ಸೀಮಂತ ಮಾಡಿದ್ದರು. ಪೆಟ್‌ ಕ್ಲಿನಿಕ್‌ (pet clinic) ವೊಂದರಲ್ಲಿ ಸೀಮಂತ ನಡೆದಿತ್ತು, ಗರ್ಭಿಣಿ ಹೆಣ್ಮಗಳನ್ನು ಸೀಮಂತಕ್ಕೆ ಸಿದ್ಧಗೊಳಿಸುವಂತೆ ಈ ಬೆಕ್ಕುಗಳಿಗೂ ಹೊಸ ಬಟ್ಟೆ , ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಸರ ಹಾಕಿ ಶೃಂಗಾರ ಮಾಡಿದ್ದರು. ಜೊತೆಗೆ ಬೆಕ್ಕುಗಳ ವಿಶೇಷ ತಿನಿಸುಗಳನ್ನು ಸಿದ್ಧಪಡಿಸಿದ್ದರು. ಸೀಮಂತ ನಡೆದ ಸ್ಥಳವನ್ನೂ ಕೂಡ ಬೆಲೂನ್‌ಗಳನ್ನು ಕಟ್ಟಿ ಲೈಟಿಂಗ್‌ಗಳನ್ನು ಹಾಕಿ ಶೃಂಗರಿಸಿದ್ದರು. ಜೊತೆಗೆ ತರಹೇವಾರಿ ತಿನಿಸು ಹಣ್ಣು ಹಂಪಲುಗಳನ್ನು ತಂದಿರಿಸಿದ್ದರು. ಬಿಳಿ ಹಾಗೂ ಕಪ್ಪು ಬಣ್ಣದ ಈ ಎರಡು ಬೆಕ್ಕುಗಳಿಗೆ ಕೆಂಪು ಬಣ್ಣದ ಹೂವಿನ ಮಾಲೆಯನ್ನು ಹಾಕಿ, ಬಳಿಕ  ಈ ಎರಡು ಬೆಕ್ಕುಗಳನ್ನು ತಮಗೆ ಬೇಕಾದನ್ನು ತಿನ್ನಲು ಬಿಟ್ಟಿದ್ದರು. 

KSRTC Bus : 10 ರು. ಕೋಳಿ ಮರಿಗೆ ಬಸ್ಸಲ್ಲಿ 52 ರು. ಟಿಕೆಟ್‌!

ಈ ವಿಶೇಷ ಸಮಾರಂಭದಲ್ಲಿ ಒಂದು ವರ್ಷದ ಎರಡು ಹೆಣ್ಣು ಬೆಕ್ಕುಗಳಿಗೆ ಸೀಮಂತ ಮಾಡಲಾಗಿತ್ತು. ಈ ಎರಡು ಬೆಕ್ಕುಗಳಿಗೆ ಕ್ಷಿರಾ( Kshira) ಹಾಗೂ  ಐರಿಶ್‌(Iris) ಎಂದು ಹೆಸರಿಡಲಾಗಿದೆ. ಎರಡು ಬೆಕ್ಕುಗಳಿಗೂ ಕ್ರಮವಾಗಿ ತಮ್ಮ 50ನೇ ಹಾಗೂ 35ನೇ ದಿನದಲ್ಲಿ ಸೀಮಂತ ಮಾಡಲಾಗಿದೆ. ವರದಿಗಳ ಪ್ರಕಾರ ಬೆಕ್ಕುಗಳ ಗರ್ಭಾವಸ್ಥೆಯ ಅವಧಿ 62 ದಿನಗಳಾಗಿವೆ. ಈ ಕಾರ್ಯಕ್ರಮದಲ್ಲಿ ಪೆಟ್‌ ಕ್ಲಿನಿಕ್‌ನ ವೈದ್ಯರು ಸೇರಿದಂತೆ ಹಲವು ಹೆಂಗಳೆಯರು ಭಾಗಿಯಾಗಿದ್ದರು. 

click me!