ಗಣೇಶನ ಫೋಟೋ ಮುಂದೆ ಮನಿಹೇಸ್ಟ್‌ ಖ್ಯಾತಿಯ ಸ್ಪೆನಿಷ್‌ ನಟಿ... ಹಿಂದೂ ದೇವರ ಆರಾಧಿಸುತ್ತಿದ್ದಾರಾ Esther Acebo

Suvarna News   | Asianet News
Published : Jan 06, 2022, 05:47 PM IST
ಗಣೇಶನ ಫೋಟೋ ಮುಂದೆ ಮನಿಹೇಸ್ಟ್‌ ಖ್ಯಾತಿಯ ಸ್ಪೆನಿಷ್‌ ನಟಿ...  ಹಿಂದೂ ದೇವರ ಆರಾಧಿಸುತ್ತಿದ್ದಾರಾ Esther Acebo

ಸಾರಾಂಶ

ಮನಿಹೇಸ್ಟ್‌ ಖ್ಯಾತಿಯ ಸ್ಪೆನಿಷ್‌ ನಟಿ ಮನೆಯಲ್ಲಿ ಗಣೇಶನ ಫೋಟೋ ಫೋಟೋ ನೋಡಿ ಅಚ್ಚರಿಗೊಳಗಾದ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಎಸ್ತರ್ ಅಸೆಬೋ

ಸ್ಪೇನ್(ಜ.6): ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿರುವುದು ಸಾಮಾನ್ಯ. ಈಗ ಸ್ಪೇನ್‌ ನಟಿ ಎಸ್ತರ್ ಅಸೆಬೋ ಅವರು ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಆದರೆ ಈ ಬಾರಿ ಇವರು ಟ್ರೆಂಡಿಂಗ್‌ನಲ್ಲಿರುವುದು ತಮ್ಮ ನಟನೆಯ ಕಾರಣಕ್ಕೆ ಅಲ್ಲ. ಈ ಬಾರಿ ಮನಿಹೇಸ್ಟ್‌ ಖ್ಯಾತಿಯ ಸ್ಪೇನಿಷ್‌ ನಟಿ (Spanish actress) ಎಸ್ತರ್ ಅಸೆಬೋ ಅವರು, ಹಿಂದೂಗಳ ಆರಾಧ್ಯ ದೇವ ಎನಿಸಿರುವ ಗಣೇಶನ ಫೋಟೋ ಮುಂದೆ  ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅದರಲ್ಲೂ ಅವರ ಭಾರತೀಯ ಅಭಿಮಾನಿಗಳು ಈ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದು, ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್‌ ಮಾಡುತ್ತಿದ್ದಾರೆ. 

ಎಸ್ತರ್ ಅಸೆಬೊ(Esther Acebo) ನೆಟ್‌ಫ್ಲಿಕ್ಸ್‌ನಲ್ಲಿ ಜನಪ್ರಿಯವಾಗಿರುವ ಮನಿ ಹೀಸ್ಟ್‌ ಸೀರಿಸ್‌ನಲ್ಲಿ ಮೋನಿಕಾ ಗಜಟಂಬೆಡೆ ಅಕಾ ಸ್ಟಾಕ್‌ಹೋಮ್ (Mónica Gaztambide aka Stockholm) ಹೆಸರಿನ ಪಾತ್ರ ನಿರ್ವಹಿಸುತ್ತಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಈ ಸೀರಿಸ್‌ ನೋಡುವ ಅನೇಕರು ಇವರ ಅಭಿಮಾನಿಗಳಾಗಿದ್ದಾರೆ. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಎಸ್ತರ್ ಅಸೆಬೊ ಹೊಂದಿದ್ದಾರೆ. 

 

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಗಣೇಶನ ವರ್ಣಚಿತ್ರದ ಪಕ್ಕದಲ್ಲಿಅಥ್ಲೀಸರ್ ಉಡುಪು ಧರಿಸಿ ನಿಂತಿರುವ ಎಸ್ತರ್ ಅಸೆಬೊ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು  ಎಸ್ತರ್ ಅಸೆಬೊ ಇನ್ಸ್ಟಾಗ್ರಾಮ್‌ನಲ್ಲಿ (Instagram) ಲೈವ್ ಸೆಷನ್‌ ನಡೆಸುತ್ತಿದ್ದಾಗ ಅಭಿಮಾನಿಗಳು ತೆಗೆದ ಸ್ಕ್ರೀನ್‌ಶಾಟ್‌ಗಳು ಆಗಿವೆ. 

ಮನೆಯ ಕಾರ್ಯಗಳೆಲ್ಲಾ ಶುಭವಾಗಲು ಗಣೇಶನ ವಿಗ್ರಹ ಎಲ್ಲಿಡಬೇಕು ?

ಇದು ಭಾರತೀಯರಿಗೆ ಒಂದು ಹೆಮ್ಮೆಯ ವಿಚಾರವಾಗಿದೆ. ಸ್ಪೇನಿಷ್‌ ನಟಿ  @EstherAcebo ನೆಟ್‌ಫ್ಲಿಕ್ಸ್‌ನಲ್ಲಿ ಬರುವ ಮನಿಹೇಸ್ಟ್‌ (MoneyHeist) ಸರಣಿಯಲ್ಲಿ ತಾವು ಮಾಡಿದ ಮೋನಿಕಾ ಗಜ್ಟಂಬೆಡೆ ಅಕಾ ಹೆಸರಿನ ಪಾತ್ರಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅವರು ಹೆಮ್ಮೆಯಿಂದ ವೈದಿಕ ಸಂಸ್ಕೃತಿಯ ದೇವರಾದ ಗಣೇಶನ ಫೋಟೋವನ್ನು ಅವರ ಮನೆಯಲ್ಲಿ ಇಟ್ಟಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ ಎಂದು ಬರೆದು  ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಮನಿ ಹೇಸ್ಟ್‌ ಸೀಸನ್‌ 5ರ ವಾಲ್ಯುಮ್‌ 2 ಕಳೆದ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಈ ಸರಣಿಯೂ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. 

ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಗಣಪತಿಯ ಇಂತಹ ಚಿತ್ರ ನೋಡಿದರೆ ಏನಾಗುತ್ತೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ