ಕರ್ನಾಟಕ ಹನಿಟ್ರ್ಯಾಪ್: ಪಾಕ್‌ಗೆ ರಹಸ್ಯ ತಿಳಿಸಿ ದೇಶದ್ರೋಹ ಎಸೆದ ಭಾರತದ ಹನಿಟ್ರ್ಯಾಪ್ ಸುಂದರಿಯ ರಹಸ್ಯಗಳು!

Published : Mar 24, 2025, 12:07 PM ISTUpdated : Mar 24, 2025, 12:19 PM IST
ಕರ್ನಾಟಕ ಹನಿಟ್ರ್ಯಾಪ್: ಪಾಕ್‌ಗೆ ರಹಸ್ಯ ತಿಳಿಸಿ ದೇಶದ್ರೋಹ ಎಸೆದ ಭಾರತದ ಹನಿಟ್ರ್ಯಾಪ್ ಸುಂದರಿಯ ರಹಸ್ಯಗಳು!

ಸಾರಾಂಶ

ರಾಜ್ಯದಲ್ಲಿ 48 ನಾಯಕರ ಮೇಲೆ ಹನಿಟ್ರ್ಯಾಪ್ ಆರೋಪ ಕೇಳಿಬಂದಿದೆ. ಡಚ್ ನರ್ತಕಿ ಮಾತಾಹರಿಯಿಂದ ಹನಿಟ್ರ್ಯಾಪ್ ಜಗತ್ತಿಗೆ ಪರಿಚಯವಾಯಿತು. ಭಾರತದಲ್ಲಿ ಮಾಧುರಿ ಗುಪ್ತಾ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದ್ದಳು. ಇರಾನ್‌ನ ರೊಕ್ಷಾನ್ ಸಬೇರಿ ಅಮೆರಿಕಾಗೆ ತನ್ನ ದೇಶದ ಮಾಹಿತಿಯನ್ನು ರವಾನಿಸಿದ್ದಳು. ಹನಿಟ್ರ್ಯಾಪ್‌ನಲ್ಲಿ ಮಹಿಳಾ ಗೂಢಚಾರ್ಯರು ಪ್ರಮುಖ ಪಾತ್ರ ವಹಿಸುತ್ತಾರೆ.

ರಾಜ್ಯ ಇತಿಹಾಸದಲ್ಲೇ ಅತೀ ದೊಡ್ಡ ಹನಿಟ್ರ್ಯಾಪ್ ಆರೋಪ ಕೇಳಿ ಬರ್ತಿದೆ. 48 ನಾಯಕರ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಸಹಕಾರ ಸಚಿವ ಕೆ ಎನ್. ರಾಜಣ್ಣ ಆರೋಪಿಸಿದ್ದಾರೆ.  ಹನಿಟ್ರ್ಯಾಪ್ ಅನ್ನು ಜಗತ್ತಿಗೆ ಪರಿಚಯ ಮಾಡಿಸಿದ್ದು ಒಬ್ಬ ಸುರ ಸುಂದರಿ. ಆಕೆಯೇ ಡಚ್ ಡ್ಯಾನ್ಸರ್ ಆಗಿದ್ದ ಮಾತಾಹರಿ. ಮಾತಾಹರಿಯಿಂದ ಭಾರತದ ಮಾಧುರಿ ಗುಪ್ತಾವರೆಗೂ ಅನೇಕ ಲಲತೆಯರು ಹನಿಟ್ರ್ಯಾಪ್ ಫೇಮಸ್ ಆಗಿದ್ದಾರೆ. ತಮ್ಮ ಬದುಕಿನ ಇತಿಹಾಸವನ್ನು ತಾವೇ ರೋಚಕವಾಗಿ ಬರೆದುಕೊಂಡಿದ್ದಾರೆ. ಹಾಗೆನೇ ಹನಿಟ್ರ್ಯಾಪ್ ಪ್ರಕರಣದಲ್ಲಿ ಜಗತ್ತಿನಲ್ಲಿ ಮೊದಲ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು ಇದೇ ಸುಂದರಿ ಮಾತಾಹರಿ.

ಮಾತಾಹರಿಯ ಸಂಪೂರ್ಣ ಕಥೆ ಇಲ್ಲಿ ಓದಿ: ರಾಜ್ಯದಲ್ಲಿ ಹನಿಟ್ರ್ಯಾಪ್ ಸ್ಫೋಟ: ಜಗತ್ತಿಗೆ ಮೊದಲು ಹನಿಟ್ರ್ಯಾಪ್ ಪರಿಚಯಿಸಿದ ಸುಂದರಿಯ ರೋಚಕ ಕಥೆ!

ಭಾರತದಲ್ಲಿ ಹೆಚ್ಚು ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿದ ಹನಿಟ್ರ್ಯಾಪ್ ಎಂದ್ರೆ ಮಾಧುರಿ ಗುಪ್ತಾಳ ಪ್ರಕರಣ. ಮಾಧುರಿ ಗುಪ್ತಾ ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡಿದ್ದಳು. 2018ರಲ್ಲಿ ದೆಹಲಿ ಕೋರ್ಟ್ ಅವಳಿಗೆ ಶಿಕ್ಷೆಯನ್ನು ವಿಧಿಸಿತ್ತು.  ಮಾಧುರಿ ಗುಪ್ತಾ ಈ ಹಿಂದೆ ಇಸ್ಲಾಮಾಬಾದ್ನಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಇವಳು ಭಾರತಕ್ಕೆ ಬಹು ದೊಡ್ಡ ದ್ರೋಹವನ್ನು ಮಾಡಿದ್ದಾಳೆ. ಇವಳು ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿ ಅಲ್ಲಿ ಹ್ಯಾಂಡ್ಲರ್ನನ್ನು  ಬಲೆಗೆ ಬೀಳಿಸಿಕೊಳ್ತಾಳೆ. ಆತ ಜೆಮ್ಶೇಡ್ ಎಂಬ ಕೋಡ್ ನೇಮ್ ಹೊಂದಿದ್ದ. ಆತನನ್ನು ಬಲೆಗೆ ಬೀಳಿಸಿಕೊಂಡಿದ್ದ ಇವಳು ಭಾರತದ ಕೆಲವೊಂದು ರಹಸ್ಯಗಳನ್ನು ಪಾಕಿಸ್ತಾನಿ ಹ್ಯಾಂಡ್ಲರ್ಗೆ ನೀಡಿದ್ದಳು. ಇವಳು ಹನಿಟ್ರ್ಯಾಪ್ಗೆ ಒಳಗಾಗಿದ್ದಾಳೆ ಅನ್ನೋದು 2010ರಲ್ಲಿ ಭಾರತೀಯ ‘ರಾ’ ಅಧಿಕಾರಿಗಳಿಗೆ ತಿಳಿಯುತ್ತೆ. ಆಗ ತಕ್ಷಣ ಇವಳನ್ನು ಬಂಧಿಸಿ ಭಾರತಕ್ಕೆ ತರಲಾಗುತ್ತೆ. 
 
ತನಿಖೆಯಲ್ಲಿ ಇವಳು ಪಾಕಿಸ್ತಾನಿ ಹ್ಯಾಂಡ್ಲರ್ಗಳಿಗೆ ರಹಸ್ಯವಾಗಿ ಮಾಹಿತಿ ಹಂಚಿಕೊಂಡಿರೋದು ತಿಳಿದು ಬರುತ್ತೆ. ಪಾಕಿಸ್ತಾನದಲ್ಲಿ ಬಳಸುತ್ತಿದ್ದ ಸಿಮ್ ಬಳಸಿ ಮಾಹಿತಿ ಹಂಚಿಕೊಂಡಿದ್ದಳು. ಹಾಗೆನೇ ಇಮೇಲ್, ಸಿಡಿ ಮತ್ತು ಫ್ಲಾಪಿ ಮೂಲಕವೂ ಇವಳು ಮಾಹಿತಿ ಹಂಚಿಕೊಂಡಿದ್ದು ಸಾಕ್ಷಿ ಸಮೇತ ಸಿಕ್ಕಿತ್ತು. ಇವಳ ಮನೆ ಮತ್ತು ಕಚೇರಿಯಲ್ಲಿ ಅಂದು 42 ಸಿಡಿಗಳು, 21 ಫ್ಲಾಪಿಗಳು ಸೇರಿದಂತೆ ಇನ್ನರೇ ಸಾಕ್ಷಿಗಳು ಸಿಕ್ಕಿದ್ದವು.


 
ಜೊತೆಗೆ ವಿಚಾರಣೆಯಲ್ಲಿ ತಾನು ಪಾಕಿಸ್ತಾನಿ ಹ್ಯಾಂಡ್ಲರ್ನನ್ನು ಪ್ರೀತಿಸಿರುವುದಾಗಿ, ಅವನ ಪ್ರೀತಿಗೆ ಮನಸೋತು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ಒಪ್ಪಿಕೊಂಡಿದ್ಲು. ಈ ಹನಿಟ್ರ್ಯಾಪ್ ಪ್ರಕರಣದಲ್ಲಿ 2010ರಲ್ಲಿ ಮಾಧುರಿ ಗುಪ್ತಾ ಬಂಧನಕ್ಕೊಳಗಾಗ್ತಾಳೆ. ನಂತರ 2013ರಲ್ಲಿ ಬೇಲ್ ಮೇಲೆ ಆಚೆ ಬಂದಿರ್ತಾಳೆ. ಆದರೆ 2018ರಲ್ಲಿ ದೆಹಲಿ ಕೋರ್ಟ್ ಮಾಧುರಿ ಗುಪ್ತಾ ಮಾಡಿದ್ದ ದೇಶದ್ರೋಹದ ಕೆಲಸಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಪಾಕ್ ಗೆ ರಹಸ್ಯ ಮಾಹಿತಿ : ಮಾಧುರಿಗೆ 3 ವರ್ಷ ಜೈಲು
 
2010ರಲ್ಲಿ ಈ ಮಾಧುರಿ ಗುಪ್ತಾಳ ಹನಿಟ್ರ್ಯಾಪ್ ಪ್ರಕರಣ ಭಾರತದಲ್ಲಿ ದೊಡ್ಡ ಸದ್ದು ಮಾಡಿತ್ತು. ಮಾಧುರಿ ಗುಪ್ತಾ ಹನಿಟ್ರ್ಯಾಪ್ಗೆ ಒಳಗಾಗಿ ತನ್ನ ದೇಶದ ವಿರುದ್ಧ ದೇಶ ವಿರೋಧಿ ಕೆಲಸ ಮಾಡಿದ್ದಳು. ಈ ರೀತಿ ದೇಶದ್ರೋಹದ ಕೆಲಸ ಮಾಡಿದ್ದು ಇವಳು ಮಾತ್ರವಳ. ಇವಳಂತೆ ಅನೇಕರು ಇದ್ದಾರೆ. ಆದ್ರೆ ಮಾಧುರಿ ಗುಪ್ತಾಳ ನಂತರ ಹಿಟ್ ಲಿಸ್ಟ್ನಲ್ಲಿ ಬರೋದು ಇರಾನಿನ ಒಬ್ಬ ಸುಂದರಿ. ತನ್ನದೇ ದೇಶದ ವಿರುದ್ದ ಗೂಢಚರ್ಯ ನಡೆಸಿದ್ದರ ಕುರಿತು ಮಾತ್ನಾಡುವ ಸಂದರ್ಭದಲ್ಲಿ ಇರಾನ್ನ ರೊಕ್ಷಾನ್ ಸಬೇರಿ ಅವರನ್ನು ಮರೆಯುವ ಹಾಗಿಲ್ಲ. ರೊಕ್ಷಾನ್ ಸಬೇರಿ ತನ್ನ ದೇಶದ ವಿರುದ್ಧವೇ ಅಮೆರಿಕಾಗೆ ಗುಪ್ತ ಮಾಹಿತಿ ರವಾನಿಸಿದ್ದಳು. 
 
ರೊಕ್ಷಾನ್ ಸಬೇರಿ (Roxana Saberi ) ಎಂಬ ಇರಾನ್ ಚೆಲುವೆ ತನ್ನ ದೇಶದ ವಿರುದ್ಧವೇ ಅಮೆರಿಕಾಗೆ ಸಹಾಯ ಮಾಡಿದ್ದಳು. ಇವಳು ಹುಟ್ಟಿದ್ದು 1977ರ ಏಪ್ರಿಲ್ 26ರಂದು. ಇರಾನ್ನಲ್ಲೇ ವಿದ್ಯಾಭ್ಯಾಸ ಮುಗಿಸಿದ್ದ ಈಕೆ, ಪ್ರತಿಷ್ಠಿತ ಸಿಬಿಎಸ್ ನ್ಯೂಸ್ಗೆ ಅಮೆರಿಕನ್ ಪತ್ರಕರ್ತೆಯಾಗಿ ಕೆಲಸ  ಮಾಡ್ತಿರ್ತಾಳೆ. 
2009ರಲ್ಲಿ ಇರಾನ್ ಸರ್ಕಾರ ಅವಳನ್ನು ಸಡನ್ನಾಗಿ ಬಂಧಿಸುತ್ತೆ. ಇವಳ ಬಂಧನಕ್ಕೆ ಇರಾನ್ ಸರ್ಕಾರ ಕೊಟ್ಟ ಕಾರಣ ಬೇಹುಕಾರಿಕೆ. ಆದ್ರೆ ಸಬೇರಿ ಅದನ್ನು ನಿರಾಕರಿಸಿದ್ದಳು. ತಾನು ಯಾವುದೇ ದೇಶಕ್ಕೆ ಬೇಹುಗಾರಿಕೆ ನಡೆಸಿಲ್ಲವೆಂದು ಹೇಳಿದ್ದಳು. ಇವಳು ಅರ್ಧ ಇರಾನಿ ಇನ್ನರ್ಧ ಜಪಾನಿ. ಯಾಕೆಂದ್ರೆ ಇವಳ ತಂದೆ ಜಪಾನ್ ಆದ್ರೆ ತಾಯಿ ಇರಾನ್. ಪ್ರಾರ್ಥಮಿಕ ಶಿಕ್ಷಣ ಇರಾನ್ನಲ್ಲಿ ಪಡೆದ ಇವಳು ನಂತರ ಓದಿದ್ದೆಲ್ಲ ನ್ಯೂಜೆರ್ಸಿಯಲ್ಲಿ. ಅದರ ನಂತರ 2003ರಲ್ಲಿ ಇರಾನ್‌ಗೆ ವಾಪಸ್ ಆಗ್ತಾಳೆ. ಅಲ್ಲಿಂದ ಜರ್ನಲಿಸ್ಟ್ ಆಗಿ ಕೆಲಸ ಮಾಡ್ತಿರ್ತಾಳೆ.

ಇವಳು ಹನಿಟ್ರ್ಯಾಪ್ಗೆ ಒಳಗಾಗಿ ಅಮೆರಿಕಾ ಪರವಾಗಿ ಗೂಢಚಾರ್ಯ ಮಾಡಿದ್ದಳು ಎನ್ನುವುದು ಇರಾನ್ ಆರೋಪ. ಇರಾನ್‌ನ ಕೆಲ ಸೂಕ್ಷ್ಮ ವಿಚಾರಗಳನ್ನು ಮತ್ತು ಕೆಲವೊಂದು ರಹಸ್ಯಗಳನ್ನು ಅಮೆರಿಕಾಗೆ ರವಾಸಿನಿದ್ದಾಳೆ ಎಂದು ಇರಾನ್ ಆರೋಪಿಸುತ್ತೆ. ಆ ಆರೋಪದ ಮೇಲೆ ಇವಳನ್ನು 2009ರಲ್ಲಿ ಇರಾನ್ ಸರ್ಕಾರ ಬಂಧಿಸುತ್ತೆ. ಜನವರಿ 31, 2009ರಲ್ಲಿ ಬಂಧನಕ್ಕೊಳಗಾದ ಸಬೇರಿ ಅದರ ನಂತರ 8 ವರ್ಷಗಳ ಕಾಲ ಇರಾನ್ ಜೈಲಿನಲ್ಲಿ ಕಳೆಯುತ್ತಾಳೆ. ಈ ಸಬೇರಿ ಅಂದು ಅಮೆರಿಕಾ ಅಧ್ಯಕ್ಷರಾಗಿದ್ದ ಒರಾಕ್ ಒಬಾಮ ವರೆಗೂ ಸಂಪರ್ಕ ಹೊಂದಿದ್ದಳು ಎಂದು ಇರಾನ್ ಆರೋಪಿಸಿತ್ತು. 
 
ಹನಿಟ್ರ್ಯಾಪ್ ಮತ್ತು ಮಹಿಳಾ ಗೂಢಚಾರ್ಯ ಅಂತ ಬಂದಾಗ ಜರ್ಮನ್ನ ಮತಾಹರಿ ಮೊದಲ ಸ್ಥಾನದಲ್ಲಿರುತ್ತಾಳೆ. ಇನ್ನು ಭಾರತದ ವಿಚಾರಕ್ಕೆ ಬಂದ್ರೆ ಮಾಧುರಿ ಗುಪ್ತಾ ಬರ್ತಾಳೆ. ಹಾಗೆನೇ ರಷ್ಯಾದ ರಹಸ್ಯ ಸುಂದರಿ ಕ್ರಿಸ್ಟೇನ್ಳನ್ನು ಮರೆಯುವಂತಿಲ್ಲ. ಅವಳು ಇಂಗ್ಲೆಂಡ್ ಸರ್ಕಾರವನ್ನೇ ಅಲ್ಲಾಡಿಸಿದ್ದಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್