Fact Check: ‘ಹಿಂದು’ ಪದ ಬಳಸದಂತೆ ಆದೇಶ ಹೊರಡಿಸಿದ ಗೃಹ ಇಲಾಖೆ!

Suvarna News   | Asianet News
Published : Jan 25, 2020, 10:10 AM IST
Fact Check: ‘ಹಿಂದು’ ಪದ ಬಳಸದಂತೆ ಆದೇಶ ಹೊರಡಿಸಿದ ಗೃಹ ಇಲಾಖೆ!

ಸಾರಾಂಶ

ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ‍್ಯದರ್ಶಿಗಳು ತಮ್ಮ ಅಧಿಕೃತ ಸಂವಹನದಲ್ಲಿ ‘ಹಿಂದು’ ಪದವನ್ನು ಬಳಕೆ ಮಾಡಬಾರದೆಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ ಎನ್ನುವ ಸ್ಕ್ರೀನ್‌ಶಾಟ್‌ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ‍್ಯದರ್ಶಿಗಳು ತಮ್ಮ ಅಧಿಕೃತ ಸಂವಹನದಲ್ಲಿ ‘ಹಿಂದು’ ಪದವನ್ನು ಬಳಕೆ ಮಾಡಬಾರದೆಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ ಎನ್ನುವ ಸ್ಕ್ರೀನ್‌ಶಾಟ್‌ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಅಷ್ಟಕ್ಕೂ ಆದಿತ್ಯ ರಾವ್ ಕಲ್ಲಡ್ಕ, ತೇಜಸ್ವಿ ಜತೆ ಇದ್ನಾ!?

ಇದು ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿಬಾರೀ ವೈರಲ್‌ ಆಗುತ್ತಿದೆ. ವೈರಲ್‌ ಆಗಿರುವ ಪತ್ರದಲ್ಲಿ, ‘1995ರಲ್ಲಿ ರಾಜ್ಯಗಳು ತಮ್ಮ ಅಧಿಕೃತ ಸಂವಹನದಲ್ಲಿ ‘ಹಿಂದು’ ಎಂಬ ಪದಬಳಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿತ್ತು. ಕೇಂದ್ರ ಗೃಹ ಇಲಾಖೆ ಇದೀಗ ಅದನ್ನು ಜಾರಿ ಮಾಡುತ್ತಿದೆ ಎಂದಿದೆ.

ಆದರೆ ನಿಜಕ್ಕೂ ಗೃಹ ಸಚಿವಾಲಯ ಇಂಥದ್ದೊಂದು ಪ್ರಕಟಣೆ ಹೊರಡಿಸಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ಬೂಮ್‌ ಜಂಟಿ ಕಾರ‍್ಯದರ್ಶಿ ಪ್ರಕಾಶ ಅವರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು, ಅವರು, ‘ಇದು ಸುಳ್ಳು ಸುದ್ದಿ. ಗೃಹ ಇಲಾಖೆ ಈ ತರದ ಯಾವುದೇ ಪ್ರಕಟಣೆಯನ್ನೂ ಹೊರಡಿಸಿಲ್ಲ’ ಎಂದಿದ್ದಾರೆ.

ಅಲ್ಲದೆ ಸುಪ್ರೀಂಕೋರ್ಟ್‌ ಯಾವತ್ತೂ ‘ಹಿಂದು’ ಪದಬಳಕೆ ಮಾಡುವಂತಿಲ್ಲ ಎಂಬ ಆದೇಶ ನೀಡಿಲ್ಲ. ವೈರಲ್‌ ಆಗಿರುವ ಪತ್ರವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಸಾಕಷ್ಟುವ್ಯಾಕರಣ ದೋಷಗಳಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಅಲ್ಲದೆ ಗೃಹ ಇಲಾಖೆ ಪ್ರಕಟಣೆ ಹೊರಡಿಸುವಾಗಿನ ಸಾಮಾನ್ಯ ನಿಯಮಗಳನ್ನು ಇದರಲ್ಲಿ ಅನುಸರಿಸಿಲ್ಲ ಎಂಬುದೂ ತಿಳಿಯುತ್ತದೆ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?