
ನವದೆಹಲಿ[ಜ.25]: ವೈಯಕ್ತಿಕ ವಿಷಯಗಳ ಬಗ್ಗೆ ಅಷ್ಟಾಗಿ ಎಲ್ಲೂ ಮಾತನಾಡದ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾಂತಿಯುಕ್ತ ಚರ್ಮದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೂ ನಾನು ಮಾಡಿದಂತೆ ಮಾಡಿದರೆ ನಿಮ್ಮ ತ್ವಚೆಯೂ ಹೊಳೆಯುತ್ತದೆ ಎಂದು ಸಲಹೆ ನೀಡಿದ್ದಾರೆ. ಹೀಗೆ ದೇಹ ಸೌಂದರ್ಯದ ಕುರಿತ ಮಾಹಿತಿ ಹಂಚಿಕೊಳ್ಳಲು ಮೋದಿಗೆ ಅವಕಾಶ ನೀಡಿದ್ದು, ‘ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ’ ಪುರಸ್ಕೃತ ಮಕ್ಕಳ ಜೊತೆಗೆ ಶುಕ್ರವಾರ ಇಲ್ಲಿ ನಡೆದ ಸಂವಾದ ಕಾರ್ಯಕ್ರಮ.
ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ನಿವಾಸದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆಲ ವರ್ಷಗಳ ಹಿಂದೆ ಯಾರೋ ಒಬ್ಬರು ನಿಮ್ಮ ಮುಖ ಕಾಂತಿಯುತವಾಗಿರುವುದರ ರಹಸ್ಯ ಏನೆಂದು ಕೇಳಿದ್ದರು. ಅದಕ್ಕೆ ನಾನು ಸರಳ ಉತ್ತರ ಕೊಟ್ಟಿದ್ದೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಅದರಿಂದಾಗಿ ಅದೆಷ್ಟುಬೆವರುತ್ತೇನೆ ಎಂದರೆ ಅದರಿಂದಲೇ ಮುಖಕ್ಕೆ ಮಸಾಜ್ ಮಾಡುತ್ತೇನೆ ಅದು ನನ್ನ ಮುಖಕ್ಕೆ ಕಾಂತಿ ನೀಡುತ್ತದೆ ಎಂದು ಅವರಿಗೆ ಉತ್ತರಿಸಿದ್ದೆ ಎಂದರು.
ಕೇಮ್‌ಛೋ ಟ್ರಂಪ್’ ಗುಜರಾತಲ್ಲಿ ಬೇಡ, ದಿಲ್ಲಿಯಲ್ಲಾಗಲಿ: ಅಮೆರಿಕ ಪಟ್ಟು
ಇದೇ ಕಾರಣಕ್ಕೆ ‘ದಿನಕ್ಕೆ ನಾಲ್ಕು ಬಾರಿಯಾದರೂ ಶ್ರಮಪಟ್ಟು ಬೆವರಿ’ ನಾನು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇನೆ ಎಂದರು. ಅಲ್ಲದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಮಕ್ಕಳಿಗೆ ಸಲಹೆ ನೀಡಿದ ಪ್ರಧಾನಿ, ಚಿಕಿತ್ಸೆಗಿಂತ ಹೆಚ್ಚು ನೀರು,ಜ್ಯೂಸ್ ಕುಡಿಯಿರಿ. ನಿಮ್ಮ ದೇಹವನ್ನು ಆರೋಗ್ಯವಾಗಿಡಿ ಎಂದು ಹೇಳಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಸಮಾಜ ಹಾಗೂ ದೇಶಕ್ಕೆ ನಿಮ್ಮ ಸೇವೆ ನೋಡಿ ಹೆಮ್ಮೆಯಾಗುತ್ತಿದೆ. ನಿಮ್ಮಿಂದ ನನಗೆ ಪ್ರೇರಣೆ ಹಾಗೂ ಶಕ್ತಿ ದೊರಕಿದೆ. ಇಷ್ಟುಸಣ್ಣ ವಯಸ್ಸಿನಲ್ಲಿಯೇ ವಿವಿಧ ವಿಭಾಗಗಳಲ್ಲಿ ನೀವು ಮಾಡಿದ ಸಾಧನೆ ನಿಜಕ್ಕೂ ಅದ್ಭುತ ಎಂದು ಹೇಳಿದ್ದಾರೆ. ಈ ವೇಳೆ ಕರ್ನಾಟಕದಿಂದ ಶೌರ್ಯ ಪ್ರಶಸ್ತಿ ಪುರಸ್ಕೃತರಾದ ಪ್ರಗುನ್, ಮೂರ್ಜೆ ಸುನೀತಾ ಹಾಗೂ ಯಶ್ ಆರಾಧ್ಯ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ