
ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ ವಿರೋಧಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದು 6 ಜನರು ಸಾವನ್ನಪ್ಪಿದ್ದಾರೆ.
Fact Check: ಮೋದಿಗೆ ಕೆಟ್ಟಹೆಸರು ತರಲು ಈರುಳ್ಳಿ ಟ್ರಕ್ ತಡೆದ್ರಾ ಮಮತಾ?
ಈ ಸಂದರ್ಭದಲ್ಲಿ ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ(ಎನ್‌ಆರ್‌ಸಿ)ಯಿಂದ ಹೊರಗುಳಿದ ಅಕ್ರಮ ನಿವಾಸಿಗಳನ್ನು ಬಂಧಿತ ಕೇಂದ್ರಗಳಲ್ಲಿ ಕೂಡಿ ಹಾಕಲಾಗಿದೆ. ಆ ಬಂಧನ ಕೇಂದ್ರಗಳು ಹೀಗಿವೆ ಎಂದು ಚಿಕ್ಕ ಕೋಣೆಯಲ್ಲಿ ಯಾವೊಂದೂ ಸೌಲಭ್ಯವಿಲ್ಲದೆ ಜನರನ್ನು ಕೂಡಿ ಹಾಕಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಅದರೊಂದಿಗೆ ‘ಅಸ್ಸಾಂನ ಬಂಧಿತ ಕೇಂದ್ರಗಳ ಸ್ಥಿತಿ ಹೀಗಿದೆ’ ಎಂದು ಒಕ್ಕಣೆ ಬರೆಯಲಾಗಿದೆ. ಡಿಸೆಂಬರ್ 13ರಂದು ಪೋಸ್ಟ್ ಮಾಡಲಾದ ಈ ಚಿತ್ರವು 5000 ಬಾರಿ ಶೇರ್ ಆಗಿದೆ.
Fact Check| ಈ ಹಕ್ಕಿಯ ವಿಡಿಯೋ ಸೆರೆ ಹಿಡಿಯಲು 62 ದಿನ ಬೇಕಾಯ್ತಂತೆ!
ಈ ಫೋಟೋದ ಹಿಂದಿನ ಸತ್ಯಾಸತ್ಯ ಬಗ್ಗೆ ಪರಿಶೀಲಿಸಿದಾಗ ಇದು ಈಗಿನ ಫೋಟೋವೇ ಅಲ್ಲ ಎಂಬ ಸತ್ಯ ಬಯಲಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಈ ಚಿತ್ರದ ಜಾಡು ಹಿಡಿದು ಹುಡುಕಹೊರಟಾಗ ಡೊಮೆನಿಕನ್ ರಿಪಬ್ಲಿಕ್ ಎಂಬ ವೆಬ್‌ಸೈಟ್‌ನಲ್ಲಿ 2019, ಡಿಸೆಂಬರ್ 15ರಂದು ಇದೇ ರೀತಿಯ ಚಿತ್ರ ಪ್ರಕಟವಾಗಿದ್ದು ಕಂಡುಬಂದಿದೆ.
ಅದರಲ್ಲಿ ಈ ಚಿತ್ರವು ಕೆರಿಬಿಯನ್ ದೇಶದ ಲಾ ರೋಮನ್ ಜೈಲು ಎಂದು ಹೇಳಲಾಗಿದೆ. ಗೂಗಲ್‌ನಲ್ಲಿ ಲಾ ರೋಮನ್ ಜೈಲಿನ ಅನೇಕ ದೃಶ್ಯಗಳು ಲಭ್ಯವಿವೆ. ಫೇಸ್‌ಬುಕ್ ಪೋಸ್ಟ್‌ವೊಂದರಲ್ಲಿ ಇದೇ ಫೋಟೋ ಪೋಸ್ಟ್ ಮಾಡಿ, ಲಾ ರೋಮನ್ ಜೈಲಿನಲ್ಲಿ 30 ಖೈದಿಗಳಿರಬೇಕಾದ ಜಾಗದಲ್ಲಿ 114 ಖೈದಿಗಳನ್ನು ಬಂಧಿಸಡಲಾಗಿದೆ ಎಂದು ಹೇಳಲಾಗಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ