ಅಮೃತಸರಕ್ಕೆ ನುಗ್ಗಿ IED ಬಾಂಬ್ ಹಾಕಿದ ಪಾಕಿಸ್ತಾನ ಶಂಕಿತ ಡ್ರೋನ್; ಪಂಜಾಬ್‌ ಹೈ ಅಲರ್ಟ್!

By Suvarna NewsFirst Published Aug 9, 2021, 3:42 PM IST
Highlights

*ಮತ್ತೆ ಭಾರತದ ಗಡಿ ದಾಟಿ ಬಂದ ಪಾಕಿಸ್ತಾನ ಶಂಕಿತ ಡ್ರೋನ್
*ಅಮೃತಸರಕ್ಕೆ ನುಗ್ಗಿ ಟಿಫಿನ್ ಬಾಕ್ಸ್ ಬಾಂಬ್ ಹಾಕಿದ ಡ್ರೋನ್
*ಪಂಜಾಬ್‌ನಲ್ಲಿ ಹೈ ಅಲರ್ಟ್ ಘೋಷಣೆ

ಪಂಜಾಬ್(ಆ.09):  ಭಾರತದ ಗಡಿ ಭಾಗದಲ್ಲಿ ಡ್ರೋನ್ ಆತಂಕ ಹೆಚ್ಚಾಗುತ್ತಿದೆ. ಏರ್‌ಬೇಸ್ ಮೇಲಿನ ಡ್ರೋನ್ ದಾಳಿ ಬಳಿಕ ಭಾರತ ಮತ್ತಷ್ಟು ಎಚ್ಚೆತ್ತುಕೊಂಡಿದೆ. ಇದರ ನಡುವೆ ಇದೀಗ ಪಂಜಾಬ್‌ನ ಅಮೃತಸರದ ದಾಲೇಕೆ ಗ್ರಾಮಕ್ಕೆ ಡ್ರೋನ್ ಮೂಲಕ IED ಸ್ಪೋಟಕ ಹಾಕಲಾಗಿದೆ. ಇದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಪಂಜಾಬ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅನುಮಾನಗಳಿಗೆ ಹಲವು ಸಾಕ್ಷ್ಯಗಳನ್ನು ಪೊಲೀಸರು ನೀಡಿದ್ದಾರೆ.

ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆ; ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!

ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಬಳಿ ಉಗ್ರ ಚಟುವಚಿಕೆಗಳು ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಇದೀಗ ಪಂಜಾಬ್‌ನ ಅಮೃತಸರದಲ್ಲಿ ವಶಪಡಿಸಿಕೊಳ್ಳಾದ ಟಿಫಿನ್ ಬಾಕ್ಸ್‌ ಒಳಗಿಟ್ಟ ಸ್ಫೋಟಕ IED, 5 ಗ್ರೇನೆಡ್ ಸೇರಿದಂತೆ ಕೆಲ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಟಿಫಿನ್ ಬಾಕ್ಸ್ ಒಳಗಿಟ್ಟ ಸ್ಫೋಟಕ IEDಯನ್ನು ಡ್ರೋನ್ ಮೂಲಕ ಹಾಕಲಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.

ಟಿಫಿನ್ ಬಾಕ್ಸ್‌ ಒಳಗಿಟ್ಟ ಸ್ಫೋಟಕ IEDಯನ್ನು ಅಮೃತಸರದ ಗ್ರಾಮದಲ್ಲಿ ಹಾಕಲು ಡ್ರೋನ್ ಬಳಸಲಾಗಿದೆ. ಇದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಪಂಜಾಬ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.  IEDಯಲ್ಲಿ 2 ರಿಂದ 3 ಕೆಜಿ RDX ಬಳಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಜಮ್ಮುವಿನಲ್ಲಿ ಸ್ಫೋಟಕ ಹೊತ್ತು ತಂದ ಡ್ರೋನ್ ಪತ್ತೆ

ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಪಡೆ(NSG) ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಕೆಲ ಮಾಹಿತಿಗಳನ್ನು ಕಲೆ ಹಾಕಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಅಡ್ಡಿಯಾಗಲು ಗಡಿಯಲ್ಲಿ 150ಕ್ಕೂ ಹೆಚ್ಚು ಉಗ್ರರು ಒಳ ನುಸುಳುವ ಯತ್ನದಲ್ಲಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಇದರ ಬೆನ್ನಲ್ಲೇ ಗಡಿಯಲ್ಲಿ ಹಲವು ಉಗ್ರ ಚಟುವಟಿಕೆಗಳನ್ನು ಭಾರತೀಯ ಸೇನೆ ಹತ್ತಿಕ್ಕುತ್ತಿದೆ. 

ಜಮ್ಮು ಐಎಎಫ್‌ ಸ್ಟೇಷನ್‌ನಲ್ಲಿ ‘ಡ್ರೋನ್‌ ಜಾಮರ್‌’ ಅಳವಡಿಕೆ!

ಈ ಬೆಳವಣಿಗೆ ನಡುವೆ ಇದೀಗ ಡ್ರೋನ್ ಆತಂಕ ಹೆಚ್ಚಾಗುತ್ತಿದೆ. ಪದೆ ಪದೇ ಗಡಿಯಲ್ಲಿ ಡ್ರೋನ್ ಪತ್ತೆಯಾಗುತ್ತಿದ್ದು, ಭದ್ರತೆ ಸವಾಲಾಗುತ್ತಿದೆ..
 

click me!