ಎಚ್ಚರ.. ಸಮುದಾಯಕ್ಕೆ ಹರಡುತ್ತಿದೆ ಕೊರೋನಾ!| ಪ್ರಧಾನಿ ಐಪಿಎಚ್‌ಎ, ಐಎಪಿಎಸ್‌ಎಂ, ಐಎಇ ತಜ್ಞರ ವರದಿ, ಕೊರೋನಾ ನಿಯಂತ್ರಣಕ್ಕೆ 11 ಶಿಫಾರಸು| ಲಾಕ್ಡೌನ್ ಆರಂಭದಲ್ಲೇ ವಲಸೆ ಕಾರ್ಮಿಕರಿಗೆ ಊರಿಗೆ ಮರಳಲು ಬಿಡಬೇಕಿತ್ತು-ವರದಿ
ವದೆಹಲಿ(ಜೂ.02): ದೇಶದಲ್ಲಿ ಕೊರೋನಾ ವೈರಸ್ ಸಮುದಾಯದ ಮಟ್ಟದಲ್ಲಿ ಹರಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿರುವಾಗಲೇ ಸಾರ್ವಜನಿಕ ಆರೋಗ್ಯ ಹಾಗೂ ಸಾಂಕ್ರಾಮಿಕ ರೋಗಗಳ ತಜ್ಞರು ದೇಶದಲ್ಲಿ ಈಗಾಗಲೇ ಕೊರೋನಾ ವೈರಸ್ ಸಮುದಾಯದ ಮಟ್ಟದಲ್ಲಿ ಹರಡಿದೆ ಎಂಬ ಆಘಾತಕಾರಿ ವರದಿಯೊಂದನ್ನು ಸಲ್ಲಿಸಿದ್ದಾರೆ.
ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ (ಐಪಿಎಚ್‌ಎ), ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಆ್ಯಂಡ್ ಸೋಷಿಯಲ್ ಮೆಡಿಸಿನ್ (ಐಎಪಿಎಸ್‌ಎಂ) ಹಾಗೂ ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ (ಐಎಇ) ಸಂಸ್ಥೆಗಳ ತಜ್ಞರು ಈ ವರದಿ ಸಿದ್ಧಪಡಿಸಿದ್ದು, ಪ್ರಧಾನಿಗೆ ಇದನ್ನು ಸಲ್ಲಿಸಿದ್ದಾರೆಂದು ಹೇಳಲಾಗಿದೆ.
ಒಬ್ಬಳೇ ಬಾಲಕಿಗೆ 2 ದಿನ ತಿರುಗಾಡಿದ 70 ಜನ ಸಾಮರ್ಥ್ಯದ ಬೋಟ್!
ವಲಸಿಗರಿಂದ ಅಪಾಯ:
ಲಾಕ್‌ಡೌನ್ ಆರಂಭದಲ್ಲಿ ಸೋಂಕು ಹರಡುವಿಕೆ ಸೀಮಿತ ಪ್ರಮಾಣದಲ್ಲಿದ್ದಾಗಲೇ ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಅನುಮತಿ ನೀಡಬೇಕಿತ್ತು. ಆದರೆ, ಈಗ ಸಮುದಾಯಕ್ಕೆ ಕೊರೋನಾ ಹರಡಿದ ಮೇಲೆ ದೇಶದ ಎಲ್ಲ ಊರುಗಳಿಗೂ ಅವರು ತಮ್ಮೊಂದಿಗೆ ಸೋಂಕು ಒಯ್ದು ಹರಡುತ್ತಿದ್ದಾರೆ. ಆರೋಗ್ಯ ಸೌಕರ್ಯಗಳು ಕಡಿಮೆಯಿರುವ ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಿಗೇ ಹೆಚ್ಚಾಗಿ ವಲಸೆ ಕಾರ್ಮಿಕರು ತೆರಳುತ್ತಿರುವುದರಿಂದ ಅಪಾಯ ಹೆಚ್ಚಾಗಿದೆ ಎಂದು ವರದಿಯಲ್ಲಿ ಆಕ್ಷೇಪಿಸಲಾಗಿದೆ.
ಈ ಹಂತದಲ್ಲಿ ಕೊರೋನಾ ಹರಡುವುದನ್ನು ತಡೆಯಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಕ್ಷ್ಯಗಳನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು. ಅದೇ ವೇಳೆ, ಬಡವರು ಹಾಗೂ ಸಂಕಷ್ಟದಲ್ಲಿರುವವರ ಜೀವನೋಪಾಯಕ್ಕೆ ತೊಂದರೆಯಾಗದಂತೆಯೂ ನೋಡಿಕೊಳ್ಳಬೇಕು. ಹೀಗಾಗಿ ಕ್ಲಸ್ಟರ್ ಮಟ್ಟದಲ್ಲಿ ಲಾಕ್‌ಡೌನ್ ಜಾರಿಗೊಳಿಸಬೇಕು. ಪರೀಕ್ಷೆ ನಡೆಸಲು, ಸೋಂಕಿತರ ಸಂಪರ್ಕಗಳನ್ನು ಪತ್ತೆಹಚ್ಚಲು ಹಾಗೂ ಅವರನ್ನು ಐಸೋಲೇಶನ್‌ನಲ್ಲಿ ಇರಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಹಾಟ್‌ಸ್ಪಾಟ್‌ಗಳನ್ನು ಪತ್ತೆಹಚ್ಚಲು ವಿಚಕ್ಷಣಾ ವ್ಯವಸ್ಥೆ ಬಲಗೊಳಿಸಬೇಕು. ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಉಪಕರಣಗಳನ್ನು ಪೂರೈಸಬೇಕು ಇವೇ ಮೊದಲಾದ 11 ಶಿಫಾರಸುಗಳನ್ನು ತಜ್ಞರು ತಮ್ಮ ವರದಿಯಲ್ಲಿ ಮಾಡಿದ್ದಾರೆ.
ಭಾರತ ಅಂದ್ರೆ ಹೀಗೆ, ಜಾಮೀಯಾ ಮಸೀದಿ ಸಾನಿಟೈಸ್ ಮಾಡಿದ ಸಿಖ್ಖರು
ಇವತ್ತಿನವರೆಗೂ ದೇಶದಲ್ಲಿ ಕೊರೋನಾ ವೈರಸ್ ಕುರಿತಾದ ದತ್ತಾಂಶಗಳನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿಲ್ಲ. ಆದಷ್ಟುಬೇಗ ಈ ದತ್ತಾಂಶಗಳನ್ನು ಪ್ರಕಟಿಸಬೇಕು. ದೇಶದಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಕ್ಷಣಗಳು ಗೋಚರಿಸಿವೆ. ಇವರಿಗೆಲ್ಲ ಆಸ್ಪತ್ರೆಯ ಬದಲು ಮನೆಯಲ್ಲೇ ಚಿಕಿತ್ಸೆ ನೀಡಬಹುದು ಎಂದು ವರದಿ ತಿಳಿಸಿದೆ.
ಸದ್ಯ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ಸರ್ಕಾರವು ಕೊರೋನಾ ನಿಯಂತ್ರಿಸಲು ಆರಂಭದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಇಲ್ಲದವರಿಂದ ಸಲಹೆ ಪಡೆದು ತಪ್ಪು ನಿರ್ಧಾರಗಳನ್ನು ಕೈಗೊಂಡಿದೆ. ಅದರಿಂದಾಗಿ ರೋಗ ಹರಡುವುದೂ ಹೆಚ್ಚಾಗಿದೆ ಮತ್ತು ದೇಶ ಮಾನವೀಯ ವಿಪತ್ತು ಎದುರಿಸುವಂತಾಗಿದೆ.
ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೋಪದೇಶ
ಇದೇ ವರದಿಯಲ್ಲಿ, ‘ಪ್ರಭಾವಿ ಸಂಸ್ಥೆಯೊಂದು ನೀಡಿದ ಕೆಟ್ಟಲೆಕ್ಕಾಚಾರವನ್ನು ಆಧರಿಸಿ ಕೇಂದ್ರ ಸರ್ಕಾರವು ದೇಶದಲ್ಲಿ ಅನಾಹುತಕಾರಿ ಲಾಕ್‌ಡೌನ್ ಜಾರಿಗೊಳಿಸಿತು. ಸರ್ಕಾರ ಗಣಿತದ ಆಧಾರದ ಮೇಲೆ ಲೆಕ್ಕಾಚಾರ ಮಾಡುವವರ ಬದಲು ಸಾಂಕ್ರಾಮಿಕ ರೋಗಗಳ ತಜ್ಞರನ್ನು ಸಂಪರ್ಕಿಸಬೇಕಿತ್ತು. ಲಾಕ್‌ಡೌನ್ ಆರಂಭದಲ್ಲೇ ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಬಿಟ್ಟಿದ್ದರೆ ಈಗ ಅವರು ಕೊರೋನಾ ಸೋಂಕನ್ನು ಊರೂರುಗಳಿಗೂ ತೆಗೆದುಕೊಂಡು ಹೋಗಿ ಹರಡುವುದು ತಪ್ಪುತ್ತಿತ್ತು, ಜೊತೆಗೆ ಕಾರ್ಮಿಕರು ಈ ಪರಿಯ ಬವಣೆ ಅನುಭವಿಸುವುದೂ ತಪ್ಪುತ್ತಿತ್ತು’ ಎಂದು ಹೇಳಲಾಗಿದೆ.