ಹರ್ಯಾಣದಲ್ಲಿ ಬಿಜೆಪಿಗೆ ಶಾಕ್, ಜಮ್ಮು ಕಾಶ್ಮೀರ ಅತಂತ್ರ; ಮತಗಟ್ಟೆ ಸಮೀಕ್ಷೆ ಪ್ರಕಟ!

By Chethan Kumar  |  First Published Oct 5, 2024, 7:22 PM IST

ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ಮತದಾನ ಅಂತ್ಯಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ಪ್ರಕಟಗೊಂಡಿದೆ. ಹರ್ಯಾಣದಲ್ಲಿ ಬಿಜೆಪಿಗೆ ಆಡಳಿತ ವಿರೋಧ ಅಲೆ ಹೊಡೆತ ನೀಡಿದೆ. ಹರ್ಯಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಮತಗಟ್ಟೆ ಸಮೀಕ್ಷೆ ಹೇಳಿದರೆ, ಜಮ್ಮು ಕಾಶ್ಮೀರ ಅತಂತ್ರ ಎಂದಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
 


ನವದೆಹಲಿ(ಅ.05) ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಮತದಾನ ಅಂತ್ಯಗೊಂಡಿದೆ. ಇದೀಗ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದೆ. ಕಳೆದ 10 ವರ್ಷದಿಂದ ಹರ್ಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ಹೊಡೆತ ನೀಡಿದೆ. ಇತ್ತ ಹರ್ಯಾಣದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿದೆ. ಇತ್ತ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯತ್ತ ಮತದಾರ ಒಲವು ತೋರಿದ್ದಾನೆ. ಆದರೆ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಮತಗಚ್ಚೆ ಸಮೀಕ್ಷೆ ಹೇಳುತ್ತಿದೆ.

ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ಎರಡು ವಿಧಾನಸಭೆಯಲ್ಲಿ ಒಟ್ಟು 90 ಸ್ಥಾನಗಳಿವೆ. ಬಹುಮತ ಪಡೆಯಲು 46 ಸ್ಥಾನ ಗೆಲ್ಲಬೇಕಿದೆ. ಹರ್ಯಾಣದಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ಗೆ 55 ರಿಂದ 62 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಇನ್ನು ಆಡಳಿತರೂಢ ಬಿಜೆಪಿ ಭಾರಿ ಕುಸಿತ ಕಾಣಲಿದೆ ಎಂದಿದೆ. ಹರ್ಯಾಣದಲ್ಲಿ ಆಪ್ ಖಾತೆ ತೆರೆಯಲ್ಲ ಎಂದು ಸಮೀಕ್ಷೆ ಹೇಳುತ್ತಿದೆ. ಇತ್ತ ಆರ್ಟಿಕಲ್ 370 ರದ್ದು ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ವೋಟ್ ಶೇರ್ ಹೆಚ್ಚಾಗಿದೆ. ಆದರೆ ಸ್ಪಷ್ಟ ಬಹುಮತ ಪಡೆಯಲು ಎಲ್ಲಾ ಪಕ್ಷಗಳು ವಿಫಲವಾಗಲಿದೆ ಎಂದಿದೆ. 

Tap to resize

Latest Videos

ಬೆಳಗ್ಗೆ ಬಿಜೆಪಿಗೆ ವೋಟು ಕೇಳಿ ಮಧ್ಯಾಹ್ನ ಕಾಂಗ್ರೆಸ್ ಸೇರಿದ ಮಾಜಿ ಸಂಸದ

ಹರ್ಯಾಣ ಚುನಾವಣೆ ಮ್ಯಾಟ್ರಿಝ್ ಮತಗಟ್ಟೆ ಸಮೀಕ್ಷೆ  
ಬಿಜೆಪಿ : 18 ರಿಂದ 24
ಕಾಂಗ್ರೆಸ್: 55 ರಿಂದ 62
ಜೆಜೆಪಿ +: 3 ರಿಂದ 6
ಐಎನ್ಎಲ್‌ಡಿ +: 2 ರಿಂದ 5
ಇತರರು: 2 ರಿಂದ 5

ಹರ್ಯಾಣ ಚುನಾವಣೆ ಪೀಪಲ್ಸ್ ಪ್ಲಸ್ ಮತಗಟ್ಟೆ ಸಮೀಕ್ಷೆ  
ಬಿಜೆಪಿ : 20- 32
ಕಾಂಗ್ರೆಸ್: 49-61
ಜೆಜೆಪಿ +: 0 -1
ಐಎನ್ಎಲ್‌ಡಿ +: 2 -3 
ಇತರರು:  3-5 

ಜಮ್ಮು ಮತ್ತು ಕಾಶ್ಮೀರ ಚುನಾವಣೆ ಇಂಡಿಯಾ ಟುಡೆ ಸಿವೋಟರ್ ಮತಗಟ್ಟೆ ಸಮೀಕ್ಷೆ
ಬಿಜೆಪಿ : 27 ರಿಂದ 31
ಕಾಂಗ್ರೆಸ್+: 11 ರಿಂದ 15
ಜೆಕೆ ಪಿಡಿಪಿ +: 0 ಯಿಂದ 2
ಇತರರು : 1

ಏಕಕಾಲ ಚುನಾವಣೆಗೆ ಶೀಘ್ರ ಕೇಂದ್ರದಿಂದ 3 ವಿಧೇಯಕ? ಎಷ್ಟು ರಾಜ್ಯಗಳ ಒಪ್ಪಿಗೆ ಬೇಕು?

ಜಮ್ಮು ಮತ್ತು ಕಾಶ್ಮೀರ ಚುನಾವಣೆ ಪೀಪಲ್ಸ್ ಪ್ಲಸ್ ಮತಗಟ್ಟೆ ಸಮೀಕ್ಷೆ
ಬಿಜೆಪಿ : 23- 27  
ಕಾಂಗ್ರೆಸ್+: 46 -50  
ಜೆಕೆ ಪಿಡಿಪಿ +:  7 - 11
ಇತರರು :  4 -6 

click me!