
ಭೋಪಾಲ್ (ಜ.23): ಮಧ್ಯಪ್ರದೇಶದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಸೌರಭ್ ವರ್ಮ ವಿಚಾರವಾಗಿ ದಿನಕ್ಕೊಂದು ಮಾಹಿತಿ ಬಿತ್ತರವಾಗುತ್ತಿದೆ. ಬಹುಶಃ ಇದು ಎಷ್ಟು ದೊಡ್ಡ ಭ್ರಷ್ಟಾಚಾರ ಎಂದು ಅರಿವಾಗಲು ಇನ್ನೂ ಕೆಲವು ಕಾಲ ಬೇಕಾಗಬಹುದು ಎನ್ನಲಾಗಿದೆ. ಆರ್‌ಟಿಒದಲ್ಲಿ ಮಾಜಿ ಪೇದೆಯಾಗಿರುವ ವ್ಯಕ್ತಿಯ ಆಸ್ತಿ ಎಷ್ಟಿರಬಹುದು? ಆದರೆ, ಸೌರಭ್ ಶರ್ಮ ಅವರ ಆಸ್ತಿ 500 ರಿಂದ 700 ಕೋಟಿವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆಯ ಆರೋಪವನ್ನು ಇವರು ಹೊತ್ತಿದ್ದು, ಮಧ್ಯಪ್ರದೇಶದಲ್ಲಿ ಇದೇ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಕಾನ್ಸ್‌ಟೇಬಲ್ ಆಗಿದ್ದ ಸೌರಭ್ ಶರ್ಮ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅದರಲ್ಲೂ ಪ್ರಮುಖವಾಗಿ ದುಬೈನಲ್ಲಿ ಐಷಾರಾಮಿ ಬಂಗಲೆಯನ್ನೂ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ ಎಂದು ವರದಿಯಾಗಿದೆ. ಅದರೊಂದಿಗೆ ಮೀನು ಸಾಕಣೆ ಕೇಂದ್ರಗಳು, ವಿವಿಧ ವ್ಯವಹಾರಗಳ ನೆಟ್‌ವರ್ಕ್ ಹಾಗೂ ಸ್ಥಳೀಯ ಪ್ರದೇಶದಲ್ಲಿ ಹೂಡಿಕೆಯನ್ನೂ ಒಳಗೊಂಡಿದೆ ಎಂದು ಹೇಳಲಾಗಿದೆ.
2024ರ ಡಿಸೆಂಬರ್ 19 ರಂದು ಸೌರಭ್ ವರ್ಮ ಅವರಿಗೆ ಸಂಬಂಧಿಸಿದ್ದ ವಾಹನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದೆ ಎಂದು ಗ್ರಾಮದ ಮುಖಂಡರು ದೂರು ನೀಡಿದ್ದರು. ಅದಾದ ಬಳಿಕ ನಡೆದ ತನಿಖೆಯಲ್ಲಿ ಈ ವಿವಾದ ತೀವ್ರಗೊಂಡಿದ್ದು, ಸೌರಭ್ ವರ್ಮ ಅವರ ಆಸ್ತಿಯ ಜಾಲ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ.
ಜಾರಿ ನಿರ್ದೇಶನಾಲಯದಿಂದ ಇದರ ತನಿಖೆ ಆರಂಭವಾಗಿತ್ತು. ಈ ವೇಳೆ ಸಾಕಷ್ಟು ವಿಚಾರಗಳು ಬಹಿರಂತವಾಗಿತ್ತು. ಆರಂಭದಲ್ಲಿ ಸೌರಭ್ ಶರ್ಮಗೆ ಸಂಬಂಧಿಸಿದ್ದ ಈತನ ಆಪ್ತರೊಬ್ಬರ ಮನೆಯಲ್ಲಿ 52 ಕೆಜಿ ಚಿನ್ನ ಹಾಗೂ 10 ಕೋಟಿ ನಗದು ಹಣ ಪತ್ತೆಯಾಗಿತ್ತು. ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ ನಡೆಸಿದ ವಿವರವಾದ ವಿಚಾರಣೆಯು ಶರ್ಮಾ ಅವರ ವ್ಯಾಪಕ ಹಣಕಾಸು ವ್ಯವಹಾರಗಳ ಇನ್ನಷ್ಟು ವಿವರಗಳು ಬಹಿರಂಗವಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬಜೆಟ್‌ನಲ್ಲಿ ಮೋದಿ ಸರ್ಕಾರದ ಗಿಫ್ಟ್?
ಇದರ ಪ್ರಕಾರ, ಸೌರಭ್ ವರ್ಮ ದುಬೈನಲ್ಲಿ ಒಂದು ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಇದರ ಮೌಲ್ಯ ಅಂದಾಜು 150 ಕೋಟಿ ರೂಪಾಯಿ ಎನ್ನಲಾಗಿದೆ. ಅದೊಂದಿಗೆ ಮಧ್ಯಪ್ರದೇಶದ ವಿವಿಧ ಸ್ಥಳಗಳಲ್ಲಿ ಮೀನು ಸಾಕಣೆ ಕೇಂದ್ರಗಳನ್ನು ಹೊಂದಿದ್ದಾರೆ. ಇದಲ್ಲದೆ ಅವಿರಾಲ್ ಬಿಲ್ಡಿಂಗ್ & ಕನಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯನ್ನೂ ಹೊಂದಿದ್ದು, ಇದು 23 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಈ ಕಂಪನಿಯು ಆತನ ಕುಟುಂಬ ಹೆಸರಲ್ಲಿ ನೋಂದಣಿಯಾಗಿದೆ.
ಇನ್ನೊಂದೆಡೆ ಜನವರಿ 20 ರಂದು ಇಡಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಸೌರಭ್ ಶರ್ಮ ಅವರ ಮನೆಯಲ್ಲಿ ಸುಮಾರು 52 ಲಕ್ಷ ರೂಪಾಯಿ ಮೌಲ್ಯದ ನಗದು, ಬ್ಯಾಂಕ್ ಠೇವಣಿ ಮತ್ತು ಆಭರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಇಡಿ ಅಧಿಕಾರಿಗಳು ಒಟ್ಟು 30 ಲಕ್ಷ ರೂ. ಠೇವಣಿ ಹೊಂದಿರುವ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದಾರೆ. ಅದರೊಂದಿಗೆ 12 ಲಕ್ಷ ರೂ. ನಗದನ್ನು ವಶಪಡಿಸಿಕೊಂಡರು ಮತ್ತು ಸುಮಾರು 9.17 ಲಕ್ಷ ರೂ. ಮೌಲ್ಯದ 9.9 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ