
ಭಾರತದಲ್ಲಿ ಮದುವೆ ಮನೆ ಅಂದರೆ ಜಗಳಗಳು ಸಾಮಾನ್ಯ. ಕೆಲವೊಮ್ಮೆ ಊಟದ ಬಗ್ಗೆ, ಇನ್ನು ಕೆಲವೊಮ್ಮೆ ವರದಕ್ಷಿಣೆ ಬಗ್ಗೆ, ಕೆಲವು ಬಾರಿ ವರನ ಹಿಂದಿನ ಸಂಬಂಧಗಳ ಬಗ್ಗೆ ಜಗಳಗಳು ನಡೆಯುತ್ತವೆ. ಏನೇ ಆಗಲಿ, ಮದುವೆ ಮನೆಯಲ್ಲಿ ಜಗಳಗಳು ಮಾಮೂಲು. ಇತ್ತೀಚೆಗೆ, ಮದುವೆ ಮಂಟಪಕ್ಕೆ ಅನಿರೀಕ್ಷಿತವಾಗಿ ಬಂದ ವರನ ಮಾಜಿ ಗೆಳತಿ, ವರನಿಗೆ ಹಿಂದಿನಿಂದ ಕಾಲಿನಿಂದ ಜಾಡಿಸಿ ಒದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ವಧು ವರನಿಗೆ ಮಾಲೆ ಹಾಕಿದ ನಂತರ, ವರ ವಧುವಿಗೆ ಮಾಲೆ ಹಾಕುತ್ತಿರುವಾಗ, ಹಿಂದಿನಿಂದ ಬಂದ ಯುವತಿ ವರನಿಗೆ ಕಾಲಿನಿಂದ ಜಾಡಿಸಿ ಒದ್ದಿದ್ದಾಳೆ. ಇದರಿಂದ ವರ ಮದುವೆ ಮಂಟಪದಲ್ಲಿ ಮುಗ್ಗರಿಸಿ ಮಾರುದ್ದ ಹೋಗಿ ಬಿದ್ದಿದ್ದಾನೆ. ನಂತರ ಬಿದ್ದ ವರನಿಗೆ ಒದೆಯುತ್ತಾ, ಕೈಗಳಿಂದಲೂ ಹಲ್ಲೆ ಮಾಡುತ್ತಾಳೆ. ಅವನನ್ನು ಮೇಲೆ ಎತ್ತಿದ ನಂತರವೂ ಹೊಡೆಯುತ್ತಾಳೆ. ಇದನ್ನು ನೋಡಿ ದಂಗಾದ ವಧು ಏನಾಗುತ್ತಿದೆ ಎಂದು ತಿಳಿಯದೆ ಒಂದು ಕ್ಷಣ ನಿಂತುಬಿಡುತ್ತಾಳೆ.
ಈ ವೇಳೆ ಮತ್ತೊಬ್ಬ ಮಹಿಳೆ ಮದುವೆ ಮಂಟಪಕ್ಕೆ ಬಂದು ಯುವತಿ ಹಲ್ಲೆ ಮಾಡುವುದನ್ನು ತಡೆಯುತ್ತಾಳೆ. ನಂತರ ವಧು ಮತ್ತು ಮಾಜಿ ಗೆಳತಿ ಜಗಳವಾಡುವುದನ್ನು ಕಾಣಬಹುದು. ವಿಡಿಯೋ ಬಹಳ ಬೇಗ ವೈರಲ್ ಆಯಿತು. ಅನೇಕರು ಇದು ಬಾಲಿವುಡ್ ಸಿನಿಮಾ ದೃಶ್ಯದಂತಿದೆ ಎಂದು ಬರೆದಿದ್ದಾರೆ. ಇದಕ್ಕೆ ಒಬ್ಬ ನೆಟ್ಟಿಗ 'ಅವಳ ಒದೆ ಸೂಪರ್. ಅವಳು ಚೆನ್ನಾಗಿ ಪ್ರಾಕ್ಟೀಸ್ ಮಾಡಿರಬೇಕು. ಪಕ್ಕಾ ಮನರಂಜನೆ' ಅಂತ ಒಬ್ಬ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 75 ಸಾವಿರ ದುರಾಸೆಗೆ ಮದ್ಯ ಸೇವಿಸೋ ಚಾಲೆಂಜ್ ಸ್ವೀಕರಿಸಿ, ಯಮನ ಪಾದ ಸೇರಿದ!
'ಇದಕ್ಕೆಂದೇ ಹೇಳ್ತಾರೆ ಹಳೆ ಸಂಬಂಧಗಳನ್ನು ಮದುವೆಗೆ ತರಬಾರದು ಅಂತ' ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ವರನ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ. ಮದುವೆಯಾಗುವ ಹುಡುಗಿಗೆ, ಮಾಜಿ ಗೆಳತಿಗೆ ಪ್ರಾಮಾಣಿಕತೆ ಇಲ್ಲದ ವ್ಯಕ್ತಿ ಹೇಗೆ ಕುಟುಂಬ ಜೀವನ ನಡೆಸುತ್ತಾನೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಒದೆ ತಿಂದ ವರ ಹೊಸ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಾನೋ ಅಥವಾ ಮಾಜಿ ಗೆಳತಿಗೆ ತಾಳಿ ಕಟ್ಟುತ್ತಾನೋ ಎಂಬುದು ತಿಳಿದುಬಂದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ