
2025 ರ ಜನವರಿ 1 ರಿಂದ 2039 ರ ನಡುವೆ ಹುಟ್ಟುವ ಮಕ್ಕಳನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತದೆ. 2025 ರ ವೇಳೆಗೆ ಈ ಪೀಳಿಗೆಯು ವಿಶ್ವದ ಜನಸಂಖ್ಯೆಯ 1೬ ಶೇಕಡಾವನ್ನು ಹೊಂದಿರುತ್ತದೆ. 2010 ರಿಂದ 2024 ರ ನಡುವೆ ಜನಿಸಿದ ಮಕ್ಕಳನ್ನು 'ಜನರೇಷನ್ ಆಲ್ಫಾ' ಎಂದು ಕರೆಯಲಾಗುತ್ತದೆ. ಈಗ ಹೊಸ ಪೀಳಿಗೆಯ ಮಕ್ಕಳನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತಿದೆ. ಈ ಪೀಳಿಗೆಯು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುತ್ತದೆ. ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಭೂಮಿಯ ಮೇಲೆ ಬದುಕುಳಿಯಲು ಹೋರಾಟ ಹೆಚ್ಚಾಗುತ್ತದೆ. ಅದಕ್ಕೂ ಈ ಹೊಸ ಪೀಳಿಗೆ ಸಾಕ್ಷಿಯಾಗಲಿದೆ. ವಿಶ್ವದ ಜನಸಂಖ್ಯೆಯಲ್ಲಿ ಬದಲಾವಣೆಗಳಾಗಲಿದ್ದು, ಅದರಲ್ಲಿ ಈ ಮಕ್ಕಳ ಪಾತ್ರ ದೊಡ್ಡದಾಗಿರುತ್ತದೆ.
4ನೇ ವಾರಾಂತ್ಯದಲ್ಲಿ ಹೊಸ ದಾಖಲೆ ಬರೆದ ಪುಷ್ಪ 2 ಬಾಕ್ಸ್ ಆಫೀಸ್ ಕಲೆಕ್ಷನ್!
ಜನರೇಷನ್ ಬೀಟಾ ಏಕೆ ವಿಭಿನ್ನ?: ದೀರ್ಘಕಾಲದಿಂದ ಸಮಾಜದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಮಾರ್ಕ್ ಮೆಕ್ರಿಂಡಲ್ 'ಜನರೇಷನ್ ಆಲ್ಫಾ' ಪದದ ಪ್ರತಿಪಾದಕರು. ಈಗ ಜನರೇಷನ್ ಬೀಟಾ ಬಗ್ಗೆ ಮಾರ್ಕ್ ಹೇಳುವಂತೆ, ಕಳೆದ 14 ವರ್ಷಗಳಲ್ಲಿ ಜನಿಸಿದ ಮಕ್ಕಳಿಗಿಂತ ಈ ಹೊಸ ಪೀಳಿಗೆ ವಿಭಿನ್ನವಾಗಿರುತ್ತದೆ. ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಂತ್ರಜ್ಞಾನದ ಸಹಾಯವನ್ನೂ ಪಡೆಯುತ್ತಾರೆ. ಈ ಪೀಳಿಗೆಯ ಮಕ್ಕಳು ಹೆಚ್ಚು ಕಾಲ ಬದುಕುತ್ತಾರೆ. ಇಲ್ಲಿಯವರೆಗೆ ಬಂದ ಎಲ್ಲಾ ಪೀಳಿಗೆಗಳಿಗಿಂತ ಜನರೇಷನ್ ಬೀಟಾದ ಸರಾಸರಿ ಆಯಸ್ಸು ಹೆಚ್ಚಾಗಿರುತ್ತದೆ. 2025 ರಿಂದ 2039 ರ ನಡುವೆ ಜನಿಸುವ ಮಕ್ಕಳಲ್ಲಿ ಹಲವರು 2100 ರವರೆಗೆ ಆರೋಗ್ಯವಾಗಿ ಬದುಕುತ್ತಾರೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ. ತಂತ್ರಜ್ಞಾನದಲ್ಲೂ ಅಭಿವೃದ್ಧಿಯಾಗಲಿದೆ. ಇದರಿಂದಾಗಿ ಜನರೇಷನ್ ಬೀಟಾದ ಮಕ್ಕಳು ಹಿಂದಿನ ಎಲ್ಲಾ ಪೀಳಿಗೆಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ.
ಅಲ್ಲು ಅರ್ಜುನ್ ಮಾತ್ರವಲ್ಲ ತಂದೆ ಅಲ್ಲು ಅರವಿಂದ್ ಕೂಡ ಥೀಯೇಟರ್ ಘಟನೆಯಲ್ಲಿ ಜೈಲಿಗೆ ಹೋಗಿದ್ದರು!
ಜಗತ್ತಿನಲ್ಲಿ ದೊಡ್ಡ ಬದಲಾವಣೆ ಬರುತ್ತಿದೆಯೇ?: ಜನರೇಷನ್ ಬೀಟಾದ ಮಕ್ಕಳು 'ಜನರೇಷನ್ ವೈ' ನ ಕಿರಿಯ ವ್ಯಕ್ತಿಗಳು ಮತ್ತು 'ಜನರೇಷನ್ ಝಡ್' ನ ಹಿರಿಯ ವ್ಯಕ್ತಿಗಳ ಮಕ್ಕಳು. ಈ ಹೊಸ ಪೀಳಿಗೆಯು ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಆರ್ಥಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿದೆ. ಸಾಮಾಜಿಕ ಬದಲಾವಣೆ, ಹವಾಮಾನ ಬದಲಾವಣೆ, ವಿಶ್ವ ಜನಸಂಖ್ಯೆಯ ಬದಲಾವಣೆ, ವೇಗವಾಗಿ ನಗರೀಕರಣದಂತಹ ಸಮಸ್ಯೆಗಳನ್ನು ಜನರೇಷನ್ ಬೀಟಾ ಎದುರಿಸಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ