
ಕಲ್ಲಿಕೋಟೆ(ಆ.09): ಕೇರಳದಲ್ಲಿ ಸಂಭವಿಸಿದ ವಿಮಾನ ದುರಂತದ ಭೀಕರತೆಯನ್ನು ಪ್ರಯಾಣಿಕರೊಬ್ಬರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
‘ಇದೊಂದು ದೊಡ್ಡ ದುರಂತ. ವಿಮಾನ ಕೆಳಗಿಳಿದ ಕೂಡಲೇ ಅಪಘಾತದ ಮುನ್ಸೂಚನೆ ಲಭಿಸಿತು. ಅಪಘಾತವಾದರೂ ನಾವು ಕೆಳಕ್ಕೆ ಬೀಳಬಾರದು ಎಂದು ಕೈಯನ್ನು ಸೀಟಿಗೆ ಒತ್ತಿ ಹಿಡಿದೆವು. ಅಪಘಾತ ಸಂಭವಿಸಿಯೇ ಬಿಟ್ಟಿತು. ವಿಮಾನ 2 ತುಂಡಾಯಿತು’ ಎಂದು ಕಲ್ಲಿಕೋಟೆಯ ನಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವೊಬ್ಬರು ಹೇಳಿದರು.
ಮಂಗಳೂರು ಸೇರಿ ದೇಶದ 5 ಟೇಬಲ್ ಟಾಪ್ ನಿಲ್ದಾಣಗಳು: ಸಣ್ಣ ಎಡವಟ್ಟಾದ್ರೂ ಅಪಘಾತ!
‘ವಿಮಾನ ತುಂಡಾದ ಕೂಡಲೇ ಎಲ್ಲರೂ ಅಳತೊಡಗಿದರು. ಇಬ್ಬರು ಮಹಿಳೆಯರು ಹಾಗೂ ಪೈಲಟ್‌ಗಳಿಬ್ಬರೂ ಮೃತಪಟ್ಟಿದ್ದಾರೆ ಎಂದು ಕೆಲವರು ಹೇಳಿದರು. ಬೆಳಗ್ಗೆ ನಾವು ಪತ್ರಿಕೆ ನೋಡಿದಾಗ 17-18 ಜನ ಸಾವನ್ನಪ್ಪಿದ್ದು ಗೊತ್ತಾಯಿತು’ ಎಂದರು.‘ವಿಮಾನ ಇಳಿಸಲು ಸೂಕ್ತ ವಾತಾವರಣ ಇಲ್ಲ ಎನ್ನಿಸುತ್ತದೆ. ಇನ್ನೊಂದು ಏರ್‌ಪೋರ್ಟಲ್ಲಿ ಇಳಿಸಬಹುದಾಗಿತ್ತು. ಆದರೆ ಆಗಿದ್ದೆಲ್ಲ ಆಕಸ್ಮಿಕ. ಅದೊಂದು ದುಃಸ್ವಪ್ನದಂತಿತ್ತು. ದೈವೇಚ್ಛೆ ಎನ್ನಿಸುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ