ಪಾಕ್ ಆಕ್ರಮಿತ ಕಾಶ್ಮೀರದ ಪ್ರತಿ ಇಂಚೂ ಭಾರತದ್ದು: ಅಮಿತ್ ಶಾ ಗುಡುಗು

By Kannadaprabha NewsFirst Published May 11, 2024, 8:23 AM IST
Highlights

‘ಪಾಕ್ ಪರಮಾಣು ಬಾಂಬ್ ಹೊಂದಿದೆ. ಅದನ್ನು ಗೌರವಿಸಿ’ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್‌ ನೀಡಿದ ಹೇಳಿಕೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಚುನಾವಣಾ ರ್‍ಯಾಲಿ ವೇಳೆ ತಿರುಗೇಟು ನೀಡಿದ್ದಾರೆ. 

ಖುಂಟಿ (ಜಾರ್ಖಂಡ್) (ಮೇ.11): ‘ಪಾಕ್ ಪರಮಾಣು ಬಾಂಬ್ ಹೊಂದಿದೆ. ಅದನ್ನು ಗೌರವಿಸಿ’ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್‌ ನೀಡಿದ ಹೇಳಿಕೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಚುನಾವಣಾ ರ್‍ಯಾಲಿ ವೇಳೆ ತಿರುಗೇಟು ನೀಡಿದ್ದಾರೆ. ‘ಪಾಕ್ ಆಕ್ರಮಿತ ಕಾಶ್ಮೀರದ ಪ್ರತಿ ಭಾಗವೂ ಭಾರತದ್ದು. ಇದನ್ನು ಯಾರಿಗೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ.

ಬಿಜೆಪಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಶಾ, ‘ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್‌, ಪಾಕಿಸ್ತಾನವು ಪರಮಾಣು ಬಾಂಬ್ ಹೊಂದಿದೆ. ಹಾಗಾಗಿ ಅದನ್ನು ಗೌರವಿಸಿ ಎಂದು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಇಂಡಿಯಾ ಮೈತ್ರಿ ಕೂಟದ ನಾಯಕ ಫಾರೂಖ್‌ ಅಬ್ದುಲ್ಲಾ, ಪಾಕಿಸ್ತಾನದಲ್ಲಿ ಪರಮಾಣು ಬಾಂಬ್ ಇರುವುದಿಂದ ಯಾರು ಅದರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಾರೆ. ನಾನು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿ ಕೂಟಕ್ಕೆ ಹೇಳಲು ಬಯಸುತ್ತೇನೆ. ಪಿಒಕೆ ಭಾರತಕ್ಕೆ ಸೇರಿದ್ದು. ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಗುಡುಗಿದರು.

Latest Videos

ಸ್ತ್ರೀಯರಿಗೆ ಕರ್ನಾಟಕ ಸುರಕ್ಷಿತ ತಾಣವಲ್ಲ: ಅಮಿತ್‌ ಶಾ ಚಾಟಿ

‘ಸಂಸತ್‌ನಲ್ಲಿ ಸರ್ವಾನುಮತದಿಂದಲೇ ಪಾಕ್ ಆಕ್ರಮಿತ ಪ್ರದೇಶ ಭಾರತದ್ದು ಎನ್ನುವ ನಿರ್ಣಯ ಅಂಗೀಕಾರವಾಗಿದೆ. ಆದರೆ ಕಾಂಗ್ರೆಸ್‌ಗೆ ಏನಾಗಿದೆ ಗೊತ್ತಿಲ್ಲ. ಈಗ ಪಿಒಕೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಪಿಒಕೆ ಪ್ರತಿ ಇಂಚು ನಮ್ಮದು .ಅಲ್ಲದೇ ಮುಂದೆಯೂ ಹಾಗೆ ಇರಲಿದೆ. ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾಗಿದೆ’ ಕೇಂದ್ರ ಗೃಹ ಸಚಿವ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಸೋನಿಯಾ 20 ಸಲ ವಿಫಲ ಪ್ರಯತ್ನ: ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್‌ ಗಾಂಧಿ ಅವರನ್ನು 20 ಬಾರಿ ರಾಜಕೀಯದಲ್ಲಿ ಲಾಂಚ್‌ ಮಾಡಲು ಪ್ರಯತ್ನಿಸಿದರು. ಆದರೆ ಪ್ರತಿ ಪ್ರಯತ್ನದಲ್ಲೂ ಅವರಿಗೆ ಸೋಲಾಯಿತು. ಇದೀಗ ಇದೀಗ ರಾಹುಲ್‌ ಗಾಂಧಿ ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದು, ಈ ಬಾರಿಯೂ ಅವರನ್ನು ರಾಜಕೀಯ ಮುನ್ನಲೆಗೆ ತರುವ ಪ್ರಯತ್ನ ವಿಫಲವಾಗಲಿದೆ ಎಂದು ಕೇಂದ್ರ ಸಚಿವ ಅಮಿತ್‌ ಶಾ ವ್ಯಂಗ್ಯವಾಡಿದರು. 

Lok Sabha Elections 2024: ಕಾಂಗ್ರೆಸ್‌ ಗೆದ್ದರೆ ಅಯೋಧ್ಯೆಗೆ ಬಾಬ್ರಿ ಬೀಗ: ಅಮಿತ್ ಶಾ ಗುಡುಗು

ಒಂದು ಕಡೆ ಮೋದಿ ಮೊದಲ ಪ್ರಯತ್ನದಲ್ಲೇ ಚಂದ್ರಯಾನ-3 ಉಡ್ಡಯನ ಯಶಸ್ವಿಯಾಗಿದೆ. ಇನ್ನೊಂದು ಕಡೆ ಸೋನಿಯಾ ಗಾಂಧಿ ಅವರು ರಾಹುಲ್‌ ಯಾನದ ಉಡ್ಡಯನ (ರಾಜಕೀಯ ಮುನ್ನಲೆಗೆ ತರುವ ಪ್ರಯತ್ನ)ಕ್ಕೆ ಸುಮಾರು 20 ಬಾರಿ ಪ್ರಯತ್ನ ಮಾಡಿದರು. ಆದರೆ ಪ್ರತಿ ಬಾರಿಯೂ ಅವರ ಯೋಜನೆ ವಿಫಲವಾಯಿತು. ಇದೀಗ 21ನೇ ಪ್ರಯತ್ನದ ಭಾಗವಾಗಿ ರಾಹುಲ್ ಗಾಂಧಿ ಅವರು ಅಮೇಥಿಯಿಂದ ರಾಯ್‌ಬರೇಲಿಗೆ ಪರಾರಿಯಾಗಿದ್ದಾರೆ. ಆದರೆ ರಾಯ್‌ಬರೇರಿಯಲ್ಲೂ ಅವರು ಸೋಲಲಿದ್ದಾರೆ. ಬಿಜೆಪಿ ಅಭ್ಯರ್ಥಿ ಅವರು ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ ಎಂದು ಶಾ ಭವಿಷ್ಯ ನುಡಿದರು.

click me!