AQI cities: ಗಾಳಿಯಲ್ಲ, ವಿಷವನ್ನೇ ಉಸಿರಾಡುತ್ತಿದ್ದಾರಾ ಜನರು? ದೇಶದ ಅತ್ಯಂತ ಕಲುಷಿತ ನಗರಗಳ ಪಟ್ಟಿ ನೋಡಿದರೆ ಶಾಕ್ ಆಗ್ತೀರಾ!

Published : Nov 06, 2026, 08:47 AM IST
Bathinda Panipat Face Extreme Air Pollution

ಸಾರಾಂಶ

Bathinda Panipat Face Extreme Air Pollution ಚಳಿಗಾಲ ಮತ್ತು ದೀಪಾವಳಿ ಪಟಾಕಿಗಳಿಂದಾಗಿ ದೇಶದ ಹಲವು ನಗರಗಳಲ್ಲಿ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಪಂಜಾಬ್‌ನ ಬಟಿಂಡಾ ಮತ್ತು ಹರಿಯಾಣದ ಪಾಣಿಪತ್ ಅತ್ಯಂತ ಕಲುಷಿತ ನಗರಗಳಾಗಿದ್ದು, ದೆಹಲಿಯಲ್ಲೂ ಉಸಿರಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣ

ಚಳಿಗಾಲ, ದೀಪಾವಳಿ ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಹಲವು ನಗರಗಳಲ್ಲಿನ ವಾಯು ಮಾಲಿನ್ಯ ಕೂಡ ಏರಿಕೆಯಾಗಿದೆ. ಒಂದು ಕಡೆ ಹೊಲದಲ್ಲಿ ಕಳೆ ಸುಡುವಿಕೆ, ಇನ್ನೊಂದೆಡೆ ದೀಪಾವಳಿ ಪಟಾಕಿ ಸುಡುವಿಕೆ ಅದರಿಂದ ಬರುವ ಹೊಗೆಯ ಪರಿಣಾಮವಾಗಿ ಗಾಳಿಯ ಗುಣಮಟ್ಟವನ್ನು ಹದಗೆಡಿಸಿದೆ. ಶುಕ್ರವಾರ ದೇಶಾದ್ಯಂತ 43 ನಗರಗಳು ಅಪಾಯಕಾರಿ ವಾಯು ಗುಣಮಟ್ಟದ ಮಟ್ಟವನ್ನು ದಾಖಲಿಸಿವೆ. ಅವುಗಳಲ್ಲಿ ಮುಖ್ಯವಾಗಿ ಪಂಜಾಬ್‌ನ ಬಟಿಂಡಾದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 1069 ತುಂಬಾ ಅಪಾಯಕಾರಿ ಮಟ್ಟ ತಲುಪಿದೆ, ಇನ್ನು ಹರಿಯಾಣದ ಪಾಣಿಪತ್‌ನಲ್ಲೂ ಕೂಡ ಗಾಳಿಯ ಗುಣಮಟ್ಟದ ಸೂಚ್ಯಂಕ 1003 ದಾಖಲಾಗಿದೆ. ಈ ಎರಡೂ ನಗರಗಳು ದೇಶದ ಅತ್ಯಂತ ಕಲುಷಿತ ನಗರಗಳಲ್ಲಿ ಸ್ಥಾನ ಪಡೆದಿವೆ. ಅಷ್ಟೇ ಅಲ್ಲ ಉತ್ತರ ಪ್ರದೇಶ, ಹರಿಯಾಣದ ಕೆಲವು ನಗರಗಳು ಸಹ ಗಾಳಿಯ ಸೂಚ್ಯಂಕ ಹೆಚ್ಚಳವಾಗಿದೆ.

ದೇಶದ ಅತ್ಯಂತ ಕಲುಷಿತ ನಗ ಬಟಿಂಡಾ

ದೇಶದ ಅತ್ಯಂತ ಕಲುಷಿತ ನಗರಗಳಲ್ಲಿ ಬಟಿಂಡಾ 1069 AQI ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಣಿಪತ್ 1003 ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ಮೀರತ್ 961 AQI ಮೂರನೇ ಸ್ಥಾನದಲ್ಲಿದೆ. ಹರಿಯಾಣದ ಸಿರ್ಸಾದಲ್ಲಿ 938, ಸೋನಿಪತ್‌ನಲ್ಲಿ 917, ರೋಹ್ಟಕ್‌ನಲ್ಲಿ 847 AQI ದಾಖಲಾಗಿದೆ. ಇದಲ್ಲದೆ ಉತ್ತರ ಪ್ರದೇಶದ ಹಾಪುರ್‌ನಲ್ಲಿ 899, ಗಾಜಿಯಾಬಾದ್‌ನಲ್ಲಿ 844, ನೋಯ್ಡಾದಲ್ಲಿ 824 AQI ನಂತರದ ಸ್ಥಾನದಲ್ಲಿವೆ. ಹರಿಯಾಣದ ಫರಿದಾಬಾದ್ 821 AQI ಯೊಂದಿಗೆ ಹತ್ತನೇ ಸ್ಥಾನದಲ್ಲಿದೆ. ಒಟ್ಟಾರೆ ಈ ವರದಿಯಲ್ಲಿ ತಿಳಿಸಿದಂತೆ ಹರಿಯಾಣದ ಐದು ನಗರಗಳು ಮತ್ತು ಉತ್ತರ ಪ್ರದೇಶದ ನಾಲ್ಕು ನಗರಗಳು ಟಾಪ್ -10 ಕಲುಷಿತ ನಗರಗಳಲ್ಲಿ ಸೇರಿವೆ.

ದೆಹಲಿಯಲ್ಲಿ ಉಸಿರಾಡೋದೇ ಕಷ್ಟ!

ದೆಹಲಿ-ಎನ್‌ಸಿಆರ್(Delhi NCR) ಪ್ರದೇಶದ ನಗರಗಳು ಸಹ ಗಾಳಿಯ ಗುಣಮಟ್ಟ ಅತ್ಯಂತ ಕೆಟ್ಟದಾಗಿ ದೆಹಲಿಯಲ್ಲಿ ಉಸಿರಾಡೋದೆ ಕಷ್ಟವಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕದಲ್ಲಿ ಗ್ರೇಟರ್ ನೋಯ್ಡಾದಲ್ಲಿ 795, ನವದೆಹಲಿಯಲ್ಲಿ 729, ಗುರುಗ್ರಾಮ್‌ನ 647 ದಾಟಿದೆ. ಈ ಪ್ರಮಾಣದ ವಾಯು ಮಾಲೀನ್ಯದಿಂದ ಜನರ ಜೀವಕ್ಕೆ ಗಂಭೀರ ಆಪಾಯದ ಬಗ್ಗೆ ಕಳವಳ ವ್ಯಕ್ತವಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Ramayana Collection: 'ಟಾಕ್ಸಿಕ್, ಆದಿಪುರುಷ್' ದಾಖಲೆ ಮುರಿಯಲು ವಿಫಲ! 'ರಾಮಾಯಣ' ಫಸ್ಟ್‌ ಡೇ ಕಲೆಕ್ಷನ್ ಎಷ್ಟು ಗೊತ್ತಾ?
India News Today Live Updates: Ramayana Collection - 'ಟಾಕ್ಸಿಕ್, ಆದಿಪುರುಷ್' ದಾಖಲೆ ಮುರಿಯಲು ವಿಫಲ! 'ರಾಮಾಯಣ' ಫಸ್ಟ್‌ ಡೇ ಕಲೆಕ್ಷನ್ ಎಷ್ಟು ಗೊತ್ತಾ?