ಮರ್ಸಿಡಿಸ್‌ ಬೆಂಜ್ ಕಾರನ್ನು ನಾನು ಸಹ ತೆಗೆದುಕೊಳ್ಳಲು ಆಗಲ್ಲ: Nitin Gadkari

By BK Ashwin  |  First Published Oct 2, 2022, 5:04 PM IST

ಮರ್ಸಿಡಿಸ್‌ ಬೆಂಜ್ ಕಾರನ್ನು ನಾನು ಸಹ ತೆಗೆದುಕೊಳ್ಳಲು ಆಗಲ್ಲ. ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದಿಸಿ, ಇದರಿಂದ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ. 


ಮರ್ಸಿಡಿಸ್‌ ಬೆಂಜ್‌ ( Mercedes-Benz) ಶುಕ್ರವಾರ ಭಾರತದಲ್ಲಿ ಮೊದಲ ಜೋಡಿಸಲಾದ EQS 580 4MATIC EV ಎಲೆಕ್ಟ್ರಿಕ್‌ ವಾಹನವನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ವಾಹನವನ್ನು (ಇವಿ) ಪುಣೆಯಲ್ಲಿರುವ ಚಕನ್ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗಿದೆ. ಎಲೆಕ್ಟ್ರಿಕ್‌ ವಾಹನದ ಉದ್ಘಾಟನೆ ವೇಳೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಿತಿನ್‌ ಗಡ್ಕರಿ, ಜರ್ಮನಿಯ ಐಷಾರಾಮಿ ಮತ್ತು ವಾಣಿಜ್ಯ ಕಾರು ತಯಾರಕರು ಭಾರತದಲ್ಲಿ ಹೆಚ್ಚಿನ ಕಾರುಗಳನ್ನು ಉತ್ಪಾದಿಸುವಂತೆ ಮನವಿ ಮಾಡಿದರು. ಕೈಗೆಟುಕುವಿಕೆಯನ್ನು ಹೆಚ್ಚಿಸುವುದರ ಜೊತೆಗೆ ವೆಚ್ಚವನ್ನು ಕಡಿಮೆ ಮಾಡಲು ಜರ್ಮನಿಯ ಪ್ರೀಮಿಯಂ ಕಾರು ತಯಾರಕರನ್ನು ಭಾರತದಲ್ಲಿ ಹೆಚ್ಚಿನ ಕಾರುಗಳನ್ನು ತಯಾರಿಸುವುದನ್ನು ಪರಿಗಣಿಸುವಂತೆಯೂ ನಿತಿನ್‌ ಗಡ್ಕರಿ ಸಲಹೆ ನೀಡಿದ್ದಾರೆ. 
 
"ನೀವು ಉತ್ಪಾದನೆಯನ್ನು ಹೆಚ್ಚಿಸಿ, ಆಗ ಮಾತ್ರ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ. ನಾವು ಮಧ್ಯಮ ವರ್ಗದ ಜನರು, ನಿಮ್ಮ ಕಾರನ್ನು ನಾನು ಸಹ ಖರೀದಿಸಲು ಸಾಧ್ಯವಿಲ್ಲ" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ. ಮರ್ಸಿಡಿಸ್‌ ಬೆಂಜ್‌ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ಪ್ರಯಾಣವನ್ನು ಪ್ರಾರಂಭಿಸಿದ್ದು, ಅದರ ಸಂಪೂರ್ಣ ಎಲೆಕ್ಟ್ರಿಕ್ SUV EQC ಅನ್ನು ಅಕ್ಟೋಬರ್ 2020 ರಲ್ಲಿ ಸಂಪೂರ್ಣವಾಗಿ ಆಮದು ಮಾಡಿಕೊಂಡ ಘಟಕವಾಗಿ ಬಿಡುಗಡೆ ಮಾಡಿದೆ. ಇನ್ನು, ಈ ಕಾರಿನ ಬೆಲೆ ಎಷ್ಟು ಗೊತ್ತಾ ಬರೋಬ್ಬರಿ ₹1.07 ಕೋಟಿ ರೂ.

ಇದನ್ನು ಓದಿ: Vehicle Safety ಮುಂದಿನ ವರ್ಷದಿಂದ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ, ಗಡುವು ನೀಡಿದ ಗಡ್ಕರಿ!

Latest Videos

undefined

ಇನ್ನು, ದೇಶದಲ್ಲಿ ಒಟ್ಟು 15.7 ಲಕ್ಷ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳಿವೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ. ಇನ್ನು, ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೃಹತ್ ಮಾರುಕಟ್ಟೆ ಇದ್ದು, ಒಟ್ಟಾರೆ EV ಮಾರಾಟವು 335% ರಷ್ಟು ಏರಿಕೆಯಾಗಿದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ದೇಶದಲ್ಲಿ ಇನ್ನೂ ಹೆಚ್ಚುಎಕ್ಸ್‌ಪ್ರೆಸ್ ಹೆದ್ದಾರಿಗಳು ಬರುತ್ತಿರುವ ಹಿನ್ನೆಲೆ, ಮರ್ಸಿಡಿಸ್‌ ಬೆಂಜ್‌ ಇಂಡಿಯಾ ಈ ಕಾರುಗಳಿಗೆ ಉತ್ತಮ ಮಾರುಕಟ್ಟೆಯನ್ನು ಪಡೆಯುತ್ತದೆ ಎಂದೂ ನಿತಿನ್‌ ಗಡ್ಕರಿ ಹೇಳಿದರು.

ಭಾರತೀಯ ಆಟೋಮೊಬೈಲ್ ಗಾತ್ರವು ಪ್ರಸ್ತುತ 7.8 ಲಕ್ಷ ಕೋಟಿ ರೂ. ನಷ್ಟಿದ್ದು, ಇದರಲ್ಲಿ ರಫ್ತು 3.5 ಲಕ್ಷ ಕೋಟಿ ರೂ. ಗಳಷ್ಟಿದೆ ಮತ್ತು "₹ 15-ಲಕ್ಷ ಕೋಟಿ ಉದ್ಯಮವಾಗಿಸುವುದು ನನ್ನ ಕನಸು" ಎಂದು ನಿತಿನ್‌ ಗಡ್ಕರಿ ಹೇಳಿಕೊಂಡಿದ್ದಾರೆ. 

ಅಲ್ಲದೆ, ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಮರ್ಸಿಡಿಸ್-ಬೆನ್ಜ್ ಜಂಟಿ ಉದ್ಯಮಗಳನ್ನು ಸ್ಥಾಪಿಸುವ ಕಲ್ಪನೆಯನ್ನು ಸಹ ನಿತಿನ್‌ ಗಡ್ಕರಿ ಪ್ರಸ್ತಾಪಿಸಿದ್ದು, ಇದರಿಂದ ಕಂಪನಿಯು ತನ್ನ ವಾಹನಗಳ ಬಿಡಿ ಭಾಗದ ವೆಚ್ಚವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಮದೂ ಅವರು ಹೇಳಿದರು. 
"ನಮ್ಮ ದಾಖಲೆಗಳ ಪ್ರಕಾರ, ನಮ್ಮಲ್ಲಿ 1.02 ಕೋಟಿ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಸಿದ್ಧವಾಗಿವೆ. ಆದರೆ, ನಮ್ಮಲ್ಲಿ ಕೇವಲ 40 ಘಟಕಗಳಿವೆ. ನನ್ನ ಅಂದಾಜಿನ ಪ್ರಕಾರ ನಾವು ಒಂದು ಜಿಲ್ಲೆಯಲ್ಲಿ ನಾಲ್ಕು ಸ್ಕ್ರ್ಯಾಪಿಂಗ್ ಘಟಕಗಳನ್ನು ತೆರೆಯಬಹುದು. ಮತ್ತು ಅಷ್ಟು ಸುಲಭವಾಗಿ ನಾವು ಅಂತಹ 2,000 ಘಟಕಗಳನ್ನು ತೆರೆಯಬಹುದು" ಎಂದು ನಿತಿನ್‌ ಗಡ್ಕರಿ ಹೇಳಿದರು.

ಇದನ್ನೂ ಓದಿ: Electric Highways: ಶೀಘ್ರದಲ್ಲೇ ದೇಶದಲ್ಲಿ ಸೌರಶಕ್ತಿ ಚಾಲಿತ ಹೆದ್ದಾರಿಗಳ ಅಭಿವೃದ್ಧಿ: ನಿತಿನ್ ಗಡ್ಕರಿ

"ನನ್ನ ಸಲಹೆಯೆಂದರೆ ನೀವು ಅಂತಹ ಕೆಲವು ಘಟಕಗಳನ್ನು ಸ್ಥಾಪಿಸಬಹುದು ಅದು ನಿಮಗೆ ಮರುಬಳಕೆಗಾಗಿ ಕಚ್ಚಾ ವಸ್ತುಗಳನ್ನು ನೀಡುತ್ತದೆ, ಹಾಗೂ, ಇದು ನಿಮ್ಮ ಘಟಕದ ವೆಚ್ಚವನ್ನು 30% ರಷ್ಟು ಕಡಿಮೆ ಮಾಡುತ್ತದೆ". ಸರ್ಕಾರವು ಅಂತಹ ಸೌಲಭ್ಯಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ನಿಮ್ಮ ಕಡೆಯಿಂದ ನಾವು ಸಹಕಾರ ಪಡೆಯುವುದು ಮುಖ್ಯವಾಗಿದೆ ಎಂದೂ ಕೇಂದ್ರ ಸಾರಿಗೆ ಸಚಿವರು ಹೇಳಿದರು.

EQS 580 4MATIC ARAI ಪ್ರಮಾಣೀಕೃತವಾಗಿದ್ದು, 857 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಲಿಥಿಯಂ-ಐಯಾನ್ ಬ್ಯಾಟರಿಯ ಹೆಚ್ಚಿನ ಶಕ್ತಿಯ ಸಾಂದ್ರತೆಯು 107.8 kWh ನ ಬಳಸಬಹುದಾದ ಶಕ್ತಿಯನ್ನು ಹೊಂದಿದೆ ಮತ್ತು ಇತ್ತೀಚಿನ ಲಿಥಿಯಂ-ಐಯಾನ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾದ ಶಕ್ತಿಯುತ 400-ವೋಲ್ಟ್ ಬ್ಯಾಟರಿಯನ್ನು ಹೊಂದಿದೆ.

ಇದನ್ನೂ ಓದಿ: ಸೀಟ್‌ಬೆಲ್ಟ್ ಅಲಾರಂ ನಿಷ್ಕ್ರಿಯಗೊಳಿಸುವ ಸಾಧನಗಳ ಮಾರಾಟ ನಿಲ್ಲಿಸಲು Amazonಗೆ ಕೇಂದ್ರ ಸರ್ಕಾರ ಸೂಚನೆ

click me!