ಇಂಗ್ಲೀಷ್ ಉಚ್ಚಾರಣೆ ಕುರಿತ ಹಲವು ತಮಾಷೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಹಿಟ್ ಆಗಿವೆ. ಇದೀಗ ಭಾರತದಲ್ಲಿನ ಇಂಗ್ಲೀಷ್ ಟೀಚರ್ ಉಚ್ಚಾರಣೆ ವಿಡಿಯೋ ವೈರಲ್ ಆಗಿದೆ.
ದೆಹಲಿ(ಮಾ.22): ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಹಾಗೂ ಕಂಪನಿ ಸಿಇಒ ಎಲನ್ ಮಸ್ಕ್ ಹೆಚ್ಚು ಸುದ್ದಿಯಲ್ಲಿದ್ದಾರೆ. ವಿಶ್ವದ ಶ್ರೀಮಂತ, ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ ಸಹ ಸಂಸ್ಥಾಪಕ ಸೇರಿದಂತೆ ಹಲವು ಕಾರಣಗಳಿಂದ ಎಲನ್ ಮಸ್ಕ್ ಸುದ್ದಿಯಲ್ಲಿದ್ದಾರೆ. ಇತ್ತೀಚೆ ಟೆಸ್ಲಾ ಭಾರತ ಪ್ರವೇಶ ಅಧೀಕೃತವಾಗುತ್ತಿದ್ದಂತೆ ಭಾರತದಲ್ಲೂ ಎಲನ್ ಮಸ್ಕ್ ಜನಪ್ರಿಯರಾಗಿದ್ದಾರೆ. ಇದೀಗ ಇದೇ ಎಲನ್ ಮಸ್ಕ್ ಹೆಸರನ್ನು ಇಂಗ್ಲೀಷ್ ಟೀಚರ್ ಮಾಡಿದ ಉಚ್ಚಾರಣೆ ವಿಡಿಯೋ ವೈರಲ್ ಆಗಿದೆ.
ಎಲನ್ ಮಸ್ಕ್, ಬೆಜೋಸ್ ಹಿಂದಿಕ್ಕಿದ ಗೌತಮ್ ಅದಾನಿ: ಸಿರಿವಂತಿಕೆ ಸೃಷ್ಟಿಯಲ್ಲಿ ಅಗ್ರಸ್ಥಾನ!.
ಇಂಗ್ಲೀಷ್ ಪದ ಉಚ್ಚಾರಣೆ, ಸ್ಪೆಲ್ಲಿಂಗ್ ಉಚ್ಚಾರಣೆ ಕುರಿತ ಹಲವು ತಮಾಷೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಇದೇ ಇಂಗ್ಲೀಷ್ ಉಚ್ಚಾರಣೆಗೆ ದೇಸಿ ಟಚ್ ನೀಡಿದ ವಿಡಿಯೋ ವೈರಲ್ ಆಗಿದೆ. ದೇಸಿ ಟೀಚರ್ ಎಲನ್ ಮಸ್ಕ್ ಸ್ಪೆಲ್ಲಿಂಗ್ ಪಠಿಸಿದ್ದಾರೆ. ಬಳಿಕ ಜೋಡಿಸಿ ಉಚ್ಚರಿಸಿದ್ದಾರೆ ಎಲನ್ ಮಸ್ಕ್ ಬದಲು ಮಸ್ಕ್ ಮೆಲನ್ ಎಂದು ಉಚ್ಚರಿಸಿದ್ದಾರೆ.
ಮಸ್ಕ್ ಮೆಲನ್ ಅಂದರೆ ಖರ್ಬೂಜ ಹಣ್ಣು ಎಂದು ಅರ್ಥ ವಿವರಿಸುವ ಈ ವಿಡಿಯೋ ಭಾರಿ ವೈರಲ್ ಆಗಿದೆ. ತಮಾಷೆಗಾಗಿ ಮಾಡಿದ ಈ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಿಸ್ ರಾಜೇಶ್ವರಿ ಅನ್ನೋ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
0 to 60 ಕಿ.ಮೀ ವೇಗ ಕೇವಲ 2 ಸೆಕೆಂಡ್‌ನಲ್ಲಿ; ಇದು ಟೆಸ್ಲಾ ಕಾರಿನ ಚಮತ್ಕಾರ!
ಮಿಸ್ ರಾಜೇಶ್ವರಿ ಅನ್ನೋ ಖಾತೆಯಲ್ಲಿ ಈ ರೀತಿಯ ಹಲವು ಫನ್ನಿ ವಿಡೋಯೋಗಳಿವೆ. ಈ ಎಲ್ಲಾ ವಿಡಿಯೋಗಳು ಭಾರಿ ಮೆಚ್ಚುಗೆ ಪಡೆದಿದೆ. ಇದೀಗ ಎಲನ್ ಮಸ್ಕ್ ಉಚ್ಚಾರಣೆ ದೇಶ ಮಾತ್ರವಲ್ಲ ಅಮೆರಿಕದಲ್ಲೂ ಸದ್ದು ಮಾಡುವ ಎಲ್ಲಾ ಸಾಧ್ಯತೆಗಳಿವೆ.