ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದರಿಂದ ಬಾಬಾ ಸಿದ್ದಿಕಿಯ ಹತ್ಯೆಯಾಗಿದೆ ಎಂದು ಬಿಷ್ಣೋಯಿ ಗ್ಯಾಂಗ್ ಬಂಟ ಹೇಳಿಕೆ ನೀಡಿದ್ದಾನೆ.
ಮುಂಬೈ: ‘ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಒಳ್ಳೆಯ ಮನುಷ್ಯನಾಗಿರದೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದರು. ಹೀಗಾಗಿ ಆವರನ್ನು ಕೊಂದೆವು’ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಬಂಧಿತ ಶೂಟರ್ ಯೋಗೇಶ್ ಅಲಿಯಾಸ್ ರಾಜು ಹೇಳಿದ್ದಾನೆ.
ಬಿಷ್ಣೋಯಿ ಹಾಗೂ ಹಾಶಿಮ್ ಬಾಬಾ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದ ಈತ ಅ.12ರಂದು ನಡೆದ ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾಗಿಲ್ಲ. ಆದರೆ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಾದಿರ್ ಶಾ ಎಂಬ ಜಿಮ್ ಓನರ್‌ನನ್ನು ಕೊಂದಿದ್ದ. ಹೀಗಾಗಿ ಆತನನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಬಂಧಿಸಲಾಗಿದೆ.
undefined
'ಅವನು ಪಠಾಣ್, ನಾನು ಸರ್ದಾರ್, ನನ್ನ ಜೀವ ಇರೋವರೆಗೆ ಸಲ್ಮಾನ್ ಭಾಯ್ ರಕ್ಷಣೆ ಮಾಡ್ತೇನೆ; ಶೇರಾ ನೇರ ಮಾತು
ಆ ಪ್ರಕರಣದ ವಿಚಾರಣೆ ವೇಳೆ ಸಿದ್ದಿಕಿ ಹತ್ಯೆ ಬಗ್ಗೆಯೂ ಹೇಳಿಕೆ ನೀಡಿರುವ ರಾಜು, ‘ಸಿದ್ದಿಕಿ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಅಧಿನಿಯಮದಡಿ ಪ್ರಕರಣಗಳು ದಾಖಲಾಗಿದ್ದವು. 1993ರಲ್ಲಿ ನಡೆದ ಮುಂಬೈ ಸ್ಫೋಟದ ಹಿಂದಿರುವ ಪಾತಕಿ ದಾವೂದ್‌ನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಅಂಥವರೊಂದಿಗೆ ನಂಟಿರುವವರಿಗೆ ಇದೇ ಗತಿಯಾಗುವುದು’ ಎಂದು ಹೇಳಿದ್ದಾನೆ.
ಶೂಟರ್ ಫೋನಲ್ಲಿ ಸಿದ್ದಿಕಿ ಪುತ್ರನ ಚಿತ್ರ:
ತನಿಖೆ ವೇಳೆ ಶೂಟರ್‌ನ ಫೋನಿನಲ್ಲಿ ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿ ಅವರ ಫೋಟೋ ಪತ್ತೆಯಾಗಿದೆ. ಅದನ್ನು ಸ್ನ್ಯಾಪ್‌ಚ್ಯಾಟ್ ಮೂಲಕ ಹಂಚಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ. ‘ಶೂಟರ್‌ಗಳು ಹಾಗೂ ಸಂಚುಕೋರರ ನಡುವೆ ಸ್ನ್ಯಾಪ್‌ಚ್ಯಾಟ್ ಮೂಲಕ ಸಂದೇಶಗಳು ರವಾನೆಯಾಗುತ್ತಿದ್ದು, ಕೂಡಲೇ ಅದನ್ನು ಡಿಲೀಟ್ ಮಾಡಲಾಗುತ್ತಿತ್ತು’ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸಲ್ಮಾನ್ ಹತ್ಯೆಗೆ 25 ಲಕ್ಷ ಡೀಲ್ ಕುದಿರಿಸಿದ್ದ ಬಿಷ್ಣೋಯಿ? ಪಾಕ್‌ನಿಂದ ಬರಲಿದ್ದವು ಎಕೆ-47, ಎಕೆ-92, ಎಂ 16 ಗನ್!