
ರಾಯ್ಪುರ: ಛತ್ತೀಸ್‌ಗಢದಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣದಿಂದ ಸಂಗ್ರಹವಾದ ಸುಮಾರು 860ರಿಂದ 880 ಕೋಟಿ ರು.ಗಳಷ್ಟು ಹಣವನ್ನು, ಪಕ್ಷದ ಪದಾಧಿಕಾರಿಗಳ ಮೂಲಕ ರಾಯ್ಪುರದಲ್ಲಿರುವ ಪಕ್ಷದ ಕಚೇರಿಗೆ ತಲುಪಿಸಲಾಗಿತ್ತು ಎಂದು ಎಂಬ ಆಘಾತಕಾರಿ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಸೋಮವಾರ ಬಹಿರಂಗಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಸಿಸಿ) ಮಾಜಿ ಖಜಾಂಚಿ ರಾಮ್‌ಗೋಪಾಲ್ ಅಗರ್ವಾಲ್ ವಿರುದ್ಧ ಅ.9ರಂದು ವಿಶೇಷ ಪಿಎಂಎಲ್‌ಎ ಕೋರ್ಟ್‌ಗೆ ಇ.ಡಿ. ಚಾರ್ಜ್‌ಶೀಟ್ ದಾಖಲಿಸಿದೆ. ಅಗರ್ವಾಲ್‌ಗೆ ಸೇರಿದ 2 ಫ್ಲಾಟ್‌ಗಳನ್ನು ಅ.10ರಂದು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ.
2019-2023ರ ಅವಧಿಯಲ್ಲಿ ಮದ್ಯ ಸಿಂಡಿಕೇಟ್ ರಾಜ್ಯದ ಅಬಕಾರಿ ಇಲಾಖೆ ಹಾಗೂ ಮಾರುಕಟ್ಟೆ ನಿಗಮವನ್ನು ನಿಯಂತ್ರಿಸಿತ್ತು. ನಕಲಿ ಹೊಲೊಗ್ರಾಮ್‌ಗಳ ಮೂಲಕ ಸರ್ಕಾರದ ಮಳಿಗೆಗಳಲ್ಲಿ ಮದ್ಯ ಮಾರಾಟ, ಡಿಸ್ಟಿಲರಿಗಳಿಂದ ವಾರ್ಷಿಕ ಕಮಿಷನ್ ಹಾಗೂ ವಿದೇಶಿ ಮದ್ಯದ ಪರವಾನಗಿಗಳ ಮೂಲಕ ಒಟ್ಟು 2,883 ಕೋಟಿ ರು.ಗಳಿಗೂ ಅಧಿಕ ಆದಾಯವನ್ನು ಅಕ್ರಮವಾಗಿ ಪಡೆಯಲಾಗಿದೆ.
ಈ ಮೊತ್ತದ ಸಿಂಹಪಾಲನ್ನು ಲಕ್ಷ್ಮೀ ನಾರಾಯಣ್ ಬನ್ಸಾಲ್ ಅಲಿಯಾಸ್ ಪಪ್ಪು ಬನ್ಸಾಲ್ ಮೂಲಕ ಕಾಂಗ್ರೆಸ್ ಕಚೇರಿ ರಾಜೀವ್ ಭವನ್‌ಗೆ ತಲುಪಿಸಲಾಗಿದೆ ಎಂದು ಇ.ಡಿ. ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7 ಚಾರ್ಜ್‌ಶೀಟ್‌ಗಳನ್ನು ದಾಖಲಿಸಿರುವ ಇ.ಡಿ., ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್, ಮಾಜಿ ಅಬಕಾರಿ ಸಚಿವ ಕವಾಸಿ ಲಕ್ಮಾ, ಮಾಜಿ ಐಎಎಸ್ ಅಧಿಕಾರಿ ಅನಿಲ್ ತುಟೇಜಾ ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಿದೆ. ಇಲ್ಲಿಯವರೆಗೆ 610 ಕೋಟಿ ರು. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ