ಹೆದ್ದಾರಿಯಲ್ಲಿ ಅಟ್ಟಾಡಿಸಿದ ಗಜರಾಜ, ಬೆಟ್ಟಹತ್ತಿ ಕುಳಿತ ಮಾಜಿ ಸಿಎಂ, ವಿಡಿಯೋ ವೈರಲ್!

By Santosh Naik  |  First Published Sep 15, 2022, 5:58 PM IST

ಉತ್ತರಾಖಂಡ ಮಾಜಿ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಹಾಗೂ ಅವರ ಬೆಂಗಾವಲು ಪಡೆ ಹೋಗುತ್ತಿದ್ದ ದಾರಿಯಲ್ಲಿ ದಿಢೀರ್‌ ಆಗಿ ಕಾಡಾನೆ ಪ್ರತ್ಯಕ್ಷಗೊಂಡಿತ್ತು ಇನ್ನೇನು ಕಾರಿನ ಮೇಲೆ ಆಕ್ರಮಣ ಮಾಡಬೇಕು ಎನ್ನುವ ಸಮಯದಲ್ಲಿ, ಸಮಯಪ್ರಜ್ಞೆ ಮೆರೆದ ಭದ್ರತಾ ಸಿಬ್ಬಂದಿ ಸಿಎಂ ಹಾಗೂ ಇತರ ಸಿಬ್ಬಂದಿಯನ್ನು ಬೆಟ್ಟಹತ್ತಿಸಿತು. ಪ್ರಾಣಾಪಾಯದಿಂದ ಪಾರಾದ ಈ ಘಟನೆಯ ವಿಡಿಯೋ ವೈರಲ್‌ ಆಗಿದೆ.
 


ಡೆಹ್ರಾಡೂನ್‌ (ಸೆ.15): ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಬುಧವಾರ ಸಂಜೆ ಕಾಡಾನೆ ದಾಳಿಯಿಂದ ಪವಾಡಸದೃಶ್ಯವಾಗಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಹೊರಬಿದ್ದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಾಡಾನೆಯಿಂದ ಬಚಾವ್‌ ಆಗುವ ಸಲುವಾಗಿ ಮಾಜಿ ಸಿಎಂ ಹಾಗೂ ಅವರ ಭದ್ರತಾ ಸಿಬ್ಬಂದಿ ಬೆಟ್ಟವೇರಿ ಕುಳಿತಿದ್ದ ಘಟನೆ ನಡೆದಿದೆ. ಕಾಡಾನೆ ದಾಳಿ ಮಾಡುವ ಸಮಯದಲ್ಲಿ ಮಾಜಿ ಸಿಎಂ ಗರ್ವಾಲ್ ಪ್ರವಾಸದಿಂದ ಕೋಟ್‌ದ್ವಾರಕ್ಕೆ ಹಿಂತಿರುಗುತ್ತಿದ್ದರು. ಸಿದ್ಧಬಲಿ ದೇವಸ್ಥಾನದ ಬಳಿ ಅವರ ಬೆಂಗಾವಲು ಪಡೆಗೆ ಗಜರಾಜ ಅಡ್ಡಿಪಡಿಸಿದ್ದಾನೆ. ಈ ಸಂಪೂರ್ಣ ಘಟನೆಯನ್ನು ಮಾಜಿ ಸಿಎಂ ಮಾಧ್ಯಮ ಸಲಹೆಗಾರ ದರ್ಶನ್ ಸಿಂಗ್ ರಾವತ್  ಹಂಚಿಕೊಂಡಿದ್ದಾರೆ. ಸಂಜೆ 5.30 ರ ಸುಮಾರಿಗೆ ಅವರ ಬೆಂಗಾವಲು ಪಡೆ ಕೋಟ್‌ದ್ವಾರದ ಬಳಿ ತಲುಪಿದಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು. ಎದುರಿನ ರಸ್ತೆಯಲ್ಲಿ ದೈತ್ಯ ಆನೆ ನಿಂತಿದ್ದರಿಂದ ಬೆಂಗಾವಲು ಪಡೆಯ ಪೈಲಟ್ ಕಾರು ಸ್ಥಳದಲ್ಲಿಯೇ ನಿಂತುಕೊಂಡಿತ್ತು. 61 ವರ್ಷದ ತ್ರಿವೇಂದ್ರ ಸಿಂಗ್‌ ರಾವತ್ , 2017 ರಿಂದ 2021 ರವರೆಗೆ ಉತ್ತರಾಖಂಡದ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.

के काफिले के आगे आया हाथी, गाड़ी छोड़कर पहाड़ पर चढ़े पूर्व CM pic.twitter.com/NWw3ShERVX

— Prachi arya (@prachiarya13)

ಪೈಲಟ್ ವಾಹನಗಳು (pilot vehicle) ಆನೆಯ ಬದಿಯಿಂದ ಹಾದುಹೋಗಲು ಪ್ರಯತ್ನ ಮಾಡಿದವು. ಆದರೆ, ಆನೆ (Elephant) ರೋಷಾವೇಷದಲ್ಲಿರುವನ್ನು ನೋಡಿದರೆ ಗೊತ್ತಾಗುವಂತಿತ್ತು. ಆನೆಯ ವರ್ತನೆಯನ್ನು ನೋಡಿಕೊಂಡು ಮುಂದೆ ಹೋಗುವ ತೀರ್ಮಾನ ಮಾಡಿದ್ದೆವು. ಪೈಲಟ್‌ ವಾಹನ ನಿಂತ ಕೆಲ ಸಮಯದಲ್ಲಿಯೇ ಅದರ ಹಿಂದೆ ಮಾಜಿ ಸಿಎಂ ರಾವತ್ ಅವರ ಕಾರು ಸೇರಿದಂತೆ ಇತರೆ ವಾಹನಗಳೂ ಬಂದು ನಿಂತುಕೊಂಡವು. ಆನೆ ದಾರಿ ಬಿಡುತ್ತದೆ, ಮುಂದೆ ಸಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು. ಆದರೆ, ನಾವು ಎಣಿಸಿದಂತೆ ಆಗಲಿಲ್ಲ. ನಮ್ಮ ಬೆಂಗಾವಲು ಪಡೆಯ ವಾಹನದ ಕಡೆಗೆ ಜೋರಾಗಿ ಬರಲು ಆರಂಭ ಮಾಡಿತು. ಇದಾದ ಬಳಿಕ ವೇಗವಾಗಿ ಹಿಮ್ಮುಖವಾಗಿ ಬರಲು ಆರಂಭಿಸಿದವು. ಆನೆ ಕೂಡ ನಮ್ಮೆಲ್ಲರನ್ನೂ ಜೋರಾಗಿ ಅಟ್ಟಿಸಿ ಬರಲು ಆರಂಭಿಸಿತು ಎಂದು ದರ್ಶನ್‌ ಸಿಂಗ್‌ ರಾವತ್‌ ಹೇಳಿದ್ದಾರೆ.

Tap to resize

Latest Videos

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಕಾಡಾನೆಯಿಂದ (Wild Elephant) ಅಪಾಯ ಹೆಚ್ಚಾಗುವುದನ್ನು ಕಂಡ ಭದ್ರತಾ ಸಿಬ್ಬಂದಿ, ರಾವತ್‌ (Trivendra Singh Rawat) ಹಾಗೂ ಅವರ ಬೆಂಬಲಿಗರನ್ನು ಕಾರಿನಿಂದ ಕೆಳಗಿಳಿಸಿ ಅಲ್ಲಿಯೇ ಪಕ್ಕದಲ್ಲಿದ್ದ ಬೆಟ್ಟದ ಕಡೆಗೆ ಕರೆದೊಯ್ದರು. ಆದರೆ, ಆನೆ ಅವರ ಹಿಂದೆ ಓಡಿ ಬರಲು ಆರಂಭಿಸಿತು. ಇದರಿಂದಾಗಿ ಅಲ್ಲಿದ್ದ ಎಲ್ಲರೂ ಕೂಡ ಬೆಟ್ಟ ಹತ್ತಲು ಆರಂಭ ಮಾಡಿದರು. ಆನೆ ಕೂಡ ಬೆಟ್ಟದ ಸನಿಹ ಬಂದು ತಲುಪಿತು. ಕೆಲ ಹೊತ್ತು ಬೆಟ್ಟದ ಬುಡದಲ್ಲಿಯೇ ನಿಂತಿದ್ದ ಆನೆ, ಘೀಳಿಡಲು ಆರಂಭ ಮಾಡಿದರು. ತನ್ನ ಸೊಂಡಿಲಿನಿಂದ ನೀರನ್ನು ತುಂಬಿ ಒಂದೆರಡು ಬಾರಿ ಜನರತ್ತ ತೂರಿದೆ. ಆನೆ ಶಾಂತವಾಗಿ ಅಲ್ಲಿಂದ ತೆರಳುತ್ತಿದ್ದಂತೆ ತ್ರಿವೇಂದ್ರ ಸಿಂಗ್‌ ರಾವತ್‌ ಹಾಗೂ ಸಿಬ್ಬಂದಿ ಬೆಟ್ಟದಿಂದ ಕೆಳಗಿಳಿದು ವಾಹನವೇರಿ ಮುಂದುವರಿದಿದ್ದಾರೆ.

ಹಸು ಹುಡುಕಿಕೊಂಡು ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ: ಕಾಫಿನಾಡಲ್ಲಿ ದುರಂತ

ಸಂಜೆ 5 ರಿಂದ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಈ ಕಾರಣದಿಂದಾಗಿ ಮಾಜಿ ಸಿಎಂ ಹಾಗೂ ಬೆಂಗಾವಲು ಪಡೆದ ಅರ್ಧ ಗಂಟೆಗಳ ಕಾಲ ಬೆಟ್ಟದ ಮೇಲೆಯೇ ತಂಗಿತ್ತು.  ಈ ವೇಳೆ ವಾಹನಗಳು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದವು. ಮಾಜಿ ಸಿಎಂ ಬೆಂಗಾವಲು ಪಡೆಯಲ್ಲಿದ್ದ ಸಹೋದ್ಯೋಗಿ ಪೃಥ್ವಿರಾಜ್ ಚೌಹಾಣ್ ಬೆಟ್ಟ ಹತ್ತುವಾಗ ಗಾಯಗೊಂಡಿದ್ದಾರೆ. ಆನೆ ದಾಳಿ ಮಾಡುವ ಭೀತಿಯಿಂದ ಅರಣ್ಯ ಇಲಾಖೆ (Forest Department) ಅಧಿಕಾರಿಗಳಲ್ಲಿ ಆತಂಕ ಮನೆಮಾಡಿತ್ತು. ಅರಣ್ಯ ಸಿಬ್ಬಂದಿ ತರಾತುರಿಯಲ್ಲಿ ಬೆಂಕಿ, ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಓಡಿಸಿದರು. ಮಾಜಿ ಸಿಎಂ ಹೆದ್ದಾರಿಯಲ್ಲಿ ಸಾಗಿದ ನಂತರ ಅರಣ್ಯ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ದುಗಡ್ಡಾ ರೇಂಜ್ ಆಫೀಸರ್ ಪ್ರದೀಪ್ ಡೊಬ್ರಿಯಾಲ್ ಮಾತನಾಡಿ, ಕೊಟ್‌ದ್ವಾರ-ದುಗಡ್ಡಾ ನಡುವಿನ ಪ್ರದೇಶವು ಶಿವಾಲಿಕ್ ಆನೆ ಕಾರಿಡಾರ್ (Shivalik Elephant corridor) ಪ್ರದೇಶದಲ್ಲಿ ಬರುತ್ತದೆ ಎಂದಿದ್ದಾರೆ.

click me!