ಬಿಲ್ ಕಟ್ಟದ ಕಾರಣ ವಿದ್ಯುತ್ ಕಡಿತದ ಅಲರ್ಟ್ ಮೆಸೇಜ್, ಲಿಂಕ್ ಕ್ಲಿಕ್ ಮಾಡಿ ಕೆಟ್ಟ ಗ್ರಾಹಕ!

Published : Aug 16, 2023, 03:02 PM IST
ಬಿಲ್ ಕಟ್ಟದ ಕಾರಣ ವಿದ್ಯುತ್ ಕಡಿತದ ಅಲರ್ಟ್ ಮೆಸೇಜ್, ಲಿಂಕ್ ಕ್ಲಿಕ್ ಮಾಡಿ ಕೆಟ್ಟ ಗ್ರಾಹಕ!

ಸಾರಾಂಶ

ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಅನ್ನೋ ಸಂದೇಶ ಬಂದಿದೆ. ಮೊಬೈಲ್‌ಗೆ ಬಂದ ಸಂದೇಶ ನೋಡಿದ ಗ್ರಾಹಕ ಲಿಂಕ್ ಕ್ಲಿಕ್ ಮಾಡಿದ್ದಾನೆ. ಈ ಲಿಂಕ್ ಕ್ಲಿಕ್ ಮಾಡಿ ಇದೀಗ ಬೀದಿಗೆ ಬಂದಿದ್ದಾನೆ.

ವಿಜಯವಾಡ(ಆ.16) ಕಳೆದ ತಿಂಗಳ ವಿದ್ಯುತ್ ಬಿಲ್ ಕಟ್ಟಿಲ್ಲ, ಇಂದು ಕಡೆಯ ದಿನಾಂಕ. ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುತ್ತದೆ ಅನ್ನೋ ಸಂದೇಶ ಮೊಬೈಲ್‌ಗೆ ಬಂದಿದೆ. ಸಂಪರ್ಕ ಕಡಿತಗೊಳ್ಳುವ ಮೊದಲೇ ವಿದ್ಯುತ್ ಬಿಲ್ ಪಾವತಿಸಲು ಹೋದ ಗ್ರಾಹಕ ಇದೀಗ ಪೊಲೀಸರ ಬಳಿ ನ್ಯಾಯ ಕೊಡಿಸುಂತೆ ಮನವಿ ಮಾಡಿದ್ದಾರೆ. ಹೌದು ವಿದ್ಯುತ್ ಬಿಲ್ ಕುರಿತ ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಗ್ರಾಹಕ, ತನ್ನ ಖಾತೆಯಲ್ಲಿದ್ದ 1.85 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ವಿದ್ಯುತ್ ಬಿಲ್ ಹೆಸರಿನಲ್ಲಿ ಆಂಧ್ರ ಪ್ರದೇಶದ ಹಲವು ಭಾಗದದಲ್ಲಿ ಅತೀ ದೊಡ್ಡ ದಂಧೆ ನಡೆಯುತ್ತಿದೆ. ಇದೀಗ ವಿಜಯವಾಡಾದ ಕೆ ಪೆದ್ದ ರಾಮಕೃಷ್ಣಮ್ ರಾಜು ವಿದ್ಯುತ್ ಬಿಲ್ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.

ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇದೇ ರೀತಿ ಹಲವರು ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಆದರೆ ಹಣ ಮೊತ್ತದ ಕಡಿಮೆಯಾಗಿತ್ತು. ಇದೀಗ ರಾಮಕೃಷ್ಣಮ್ ರಾಜು ಬರೋಬ್ಬರಿ 1.85 ಲಕ್ಷ ರೂಪಾಯಿ ಕಳೆದುಕೊಂಡು ದಿಕ್ಕೇ ತೋಚದಂತಾಗಿದೆ. ಪೆದ್ದ ರಾಮಕೃಷ್ಣ ರಾಜು ಮೊಬೈಲ್ ನಂಬರ್‌ಗೆ ಅಪರಿತ ನಂಬರ್‌ನಿಂದ ಸಂದೇಶ ಬಂದಿದೆ. ನಿಮ್ಮ ವಿದ್ಯುತ್ ಬಿಲ್ ಬಾಕಿ ಹಣ ಪಾವತಿಸಿ ಎಂಬ ಅಲರ್ಟ್ ಸಂದೇಶ ಇದಾಗಿತ್ತು.

ಕೆಲವೇ ದಿನಗಳಲ್ಲಿ ವಿದ್ಯುತ್‌ ಸಮಸ್ಯೆ ಸುಧಾರಣೆ: ಸಚಿವ ಜಾರ್ಜ್‌

ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ವಿದ್ಯುತ್ ಬಿಲ್ ಬಾಕಿ ಮೊತ್ತ ಪಾವತಿಸಿ. ಇಂದು ಕೊನೆಯ ದಿನಾಂಕ. ಪಾವತಿ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿತ್ತು. ಪಾವತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಎಂದು ಸೂಚಿಸಿತ್ತು. ಒಂದು ಕ್ಷಣ ವಿಚಲಿತರಾದ ರಾಮಕೃಷ್ಣ ರಾಜು, ಬಾಕಿ ಉಳಿಸಿಕೊಂಡಿಲ್ಲ, ಆದರೂ ಬಾಕಿ ಇದ್ದರೆ ಪಾವತಿ ಮಾಡೋಣ ಎಂದು ಲಿಂಕ್ ಕ್ಲಿಕ್ ಮಾಡಿದ್ದಾರೆ.

ಲಿಂಕ್ ಕ್ಲಿಕ್ ಮಾಡಿದ ಬೆನ್ನಲ್ಲೇ ಬೇರೊಂದು ವೆಬ್‌ಸೈಟ್‌ ತೆರೆದುಕೊಂಡಿದೆ.  ಬಳಿಕ ವಿದ್ಯುತ್ ಬಾಕಿ ಹಣ ಪಾವತಿಸಲು ಮುಂದಾಗಿದ್ದಾರೆ. ವೆಬ್‌ಸೈಟ್ ಮೂಲಕ ಬಾಕಿ ಹಣ ಪಾವತಿಸಿದ್ದಾರೆ. ಹಣ ಪಾವತಿ ಬಳಿಕ ರಶೀದಿ ಬಂದೇ ಇಲ್ಲ. ರಶೀದಿ ಡೌನ್ಲೋಡ್ ಆಯ್ಕೆಯೇ ಇರಲಿಲ್ಲ. ಇಷ್ಟೇ ಅಲ್ಲ ಹಣ ಪಾವತಿ ಮಾಡಿರುವ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ ಪೆದ್ದ ರಾಮಕೃಷ್ಣಂ ರಾಜು, ಸಂದೇಶ ಬಂದಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಇನ್ನಷ್ಟು ಇಳಿಕೆ: ಆತಂಕ

ಕರೆ ಸ್ವೀಕರಿಸಿದ ಅಪರಿಚಿತರು ಆ್ಯಪ್ ಡೌನ್ಲೋಡ್ ಮಾಡಲು ಸೂಚಿಸಿದ್ದಾರೆ. ಡೌನ್ಲೋಡ್ ಮಾಡಿ ಅಲ್ಲಿ ರಶೀದಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಇದರಂತೆ ಆ್ಯಪ್ ಡೌನ್ಲೋಡ್ ಮಾಡಿದ ರಾಮಕೃಷ್ಣಂ ರಾಜು, ಸೂಚಿಸಿದ ದಾಖಲೆಗಳನ್ನು ನಮೂದಿಸಿದ್ದಾರೆ. ಇದರ ಜೊತೆಗೆ ಬ್ಯಾಂಕ್ ಖಾತೆ ವಿವರಗಳನ್ನು ಉಲ್ಲೇಖಿಸಿದ್ದಾರೆ.   ಆದರೂ ರಶೀದಿ ಬಂದಿಲ್ಲ. ಮತ್ತೆ ಕರೆ ಮಾಡಿದ ರಾಜುಗೆ ಒಟಿಪಿ ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ. ಇದೇ ವೇಳೆ ಬಂದ ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಅಷ್ಟರಲ್ಲೇ ರಾಮಕೃಷ್ಣ ರಾಜು ಅವರ ಖಾತೆಯಲ್ಲಿದ್ದ 1.85 ಲಕ್ಷ ರೂಪಾಯಿ ಹಣ ಗುಳುಂ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ